ಕೊನೆಗೂ ತಿಳಿಯಿತು ವಿಚ್ಚೇದನಕ್ಕೆ ಕಾರಣ: ಏನಂತೆ ಗೊತ್ತೇ? ಎಲ್ಲವನ್ನು ಬಿಟ್ಟು ಪಾಕ್ ಅವನನ್ನು ಮದುವೆಯಾಗಿದ್ದ ಸಾನಿಯಾಗೆ ಏನು ಮಾಡಿದ್ದಾನೆ ಗೊತ್ತೆ??
ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿಯಾದ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟ್ ಪ್ಲೇಯರ್ ಶೋಯೆಬ್ ಮಲಿಕ್ ಅವರ ನಡುವಿನ 12 ವರ್ಷಗಳ ದಾಂಪತ್ಯ ಜೀವನದ ನಡುವೆ ಬಿರುಕು ಮೂಡಿದ್ದು, ಅವರಿಬ್ಬರೂ ದೂರಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇವರಿಬ್ಬರ ನಡುವಿನ ವೈವಾಹಿಕ ಜೀವನದ ಬಿರುಕಿಗೆ ಕಾರಣ ಏನು ಎನ್ನುವುದು ಇದೀಗ ಬಹಿರಂಗವಾಗಿದೆ. ಹಾಗಿದ್ದರೆ ಇವರಿಬ್ಬರೂ ದೂರ ಆಗುತ್ತಿರುವುದಕ್ಕೆ ಕಾರಣವೇನು? ಈ ಸಮಾಚಾರ ಎಷ್ಟು ಸತ್ಯ, ಎಷ್ಟು ಸುಳ್ಳು ಎನ್ನುವುದರ ಮಾಹಿತಿ ಇಲ್ಲಿದೆ. 2010ರಲ್ಲಿ ತಮ್ಮ ಮದುವೆಯ ಕುರಿತಾಗಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರು ಘೋಷಿಸಿದರು. ಭಾರತದ ಆಟಗಾರ್ತಿ ಪಾಕಿಸ್ತಾನಿ ಆಟಗಾರನನ್ನು ಮದುವೆಯಾಗಿದ್ದರ ಕುರಿತು ಎರಡು ಕಡೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.
ಈ ಸಮಾಚಾರ ಕೇಳಿದ್ದಾಗಿನಿಂದ ಇವತ್ತಿನವರೆಗೂ ಈ ದಂಪತಿಗಳ ಕುರಿತಾಗಿ ಸಾಕಷ್ಟು ರೂಮರ್ಸ್ಗಳು ಹರಿದಾಡುತ್ತಲೇ ಇದೆ. ಕಳೆದ 12 ವರ್ಷಗಳಿಂದ ಈ ದಂಪತಿಗಳು ದೂರಾಗಲಿದ್ದಾರೆ, ಈ ಇವರಿಬ್ಬರ ನಡುವೆ ಏನೇನು ಸರಿ ಇಲ್ಲ ಎಂಬಂತ ವದಂತಿಗಳು ಸಾಕಷ್ಟು ಸಲ ಕೇಳಿ ಬಂದಿದೆ. ಇದೀಗ ಅವರಿಬ್ಬರೂ ದೂರವಾಗುತ್ತಿದ್ದಾರೆ ಎನ್ನುವ ಮಾತು ಮಾಧ್ಯಮದ ಮೂಲಕವೇ ಕೇಳಿ ಬರುತ್ತಿದೆ. ಶೋಯೆಬ್ ಮಲಿಕ್ ವಿವಾಹೇತರ ಸಂಬಂಧದಲ್ಲಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮ ಹೇಳುತ್ತಿದೆ. ಆದರೆ ಈ ವಿಷಯವನ್ನು ಸಾನಿಯಾ ಮಿರ್ಜಾ ಅವರ ಕೈಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ಸಾನಿಯಾ ಮಿರ್ಜಾ ಸಾಕಷ್ಟು ವಿಷಯಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಕಳೆದ ಕೆಲವು ದಿನಗಳಿಂದಲೂ ಕೂಡ ಬೇರೆ ಬೇರೆ ವಿಚಾರಗಳನ್ನು ನಿರಂತರವಾಗಿ ಅವರು ಶೇರ್ ಮಾಡುತ್ತಿದ್ದಾರೆ. ಆದರೆ ತಮ್ಮ ಬ್ರೇಕ್ ಅಪ್ ವಿಚಾರವಾಗಿ ಅವರು ತುಟಿ ಬಿಚ್ಚಲ್ಲ. ಶೋಯಬ್ ಅವರೊಂದಿಗಿನ ವೈವಾಹಿಕ ಬಿರುಕಿನ ಬಗ್ಗೆ ಅವರು ಇದುವರೆಗೆ ಯಾವ ಮಾತನ್ನು, ಹೇಳಿಕೆಯನ್ನು ನೀಡಿಲ್ಲ. ಇತ್ತೀಚಿಗೆ ಸಾನಿಯಾ ತಮ್ಮ ಮಗನ ಕುರಿತಾಗಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ “ಜೀವನದ ಕಷ್ಟ ಸಮಯದಲ್ಲಿ ನನಗೆ ಈ ಕ್ಷಣಗಳು ವಿಶೇಷವಾಗಿವೆ. ನಾವಿಬ್ಬರೂ ಮುಂದೊಂದು ದಿನ ಬೇರೆ ಬೇರೆಯಾದರೂ ಕೂಡ ಮಗನ ಜವಾಬ್ದಾರಿಯನ್ನು ಹೊರುತ್ತಾರೆ ಎನ್ನುವ ವಿಶ್ವಾಸ ನನಗೆ ಮೂಡಿದೆ” ಎಂದು ಅವರು ಬರೆದುಕೊಂಡಿದ್ದರು.
ಟಿವಿ ರಿಯಾಲಿಟಿ ಶೋ ಒಂದರಲ್ಲಿ ಶೋಯಬ್ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಪಾಕಿಸ್ತಾನಿ ಮಾಧ್ಯಮ ಒಂದು ವರದಿ ಮಾಡಿದೆ. ಹೀಗಾಗಿ ಶೋಯಬ್ ಮತ್ತು ಸಾನಿಯಾ ದಾಂಪತ್ಯ ಜೀವನ ಮುರಿದು ಬೀಳಲಿದೆ ಎಂದು ಅದು ಅಭಿಪ್ರಾಯ ಪಟ್ಟಿದೆ. ಇದೀಗ ಈ ದಂಪತಿಗಳ ನಡುವಿನ ವೈವಾಹಿಕ ಬಿರುಕಿಗೆ ಬಹುಮುಖ್ಯ ಕಾರಣವೇ ಅಕ್ರಮ ಸಂಬಂಧ ಎಂದು ತಿಳಿದುಬಂದಿದೆ. ಹೌದು ಶೋಯಬ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಬ್ಬರು ಮಹಿಳೆಯ ಜೊತೆಗೆ ಅವರು ಅಕ್ರಮವಾಗಿ ಸಂಬಂಧದಲ್ಲಿದ್ದಾರೆ ಎನ್ನುವ ಮಾಹಿತಿ ದೊರೆತಿದೆ. ಇಷ್ಟಕ್ಕೂ ಈ ದಂಪತಿಗಳ ನಡುವೆ ಏನು ನಡೆಯುತ್ತಿದೆ, ಇವರ ದಾಂಪತ್ಯ ಜೀವನ ಮುರಿದು ಬೀಳಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
Comments are closed.