T20 Worldcup: ಗಡ ಗಡ ನಡುಕ ಆರಂಭ: ಭಾರತ Vs ಇಂಗ್ಲೆಂಡ್ ಸೆಮಿಫೈನಲ್ ಗೂ ಮುನ್ನವೇ ತಂಡಕ್ಕೆ ಹೊಸ ಆಟಗಾರ ಎಂಟ್ರಿ. ಯಾರು ಗೊತ್ತೇ??

ಟಿ ಟ್ವೆಂಟಿ ವಿಶ್ವಕಪ್ 2022ರ ಪಂದ್ಯಾವಳಿಯಲ್ಲಿ ಸಾಕಷ್ಟು ತಂಡಗಳು ಸೆಣೆಸಿ ಇದೀಗ ಟಾಪ್ – 4 ತಂಡಗಳು ಸೆಮಿ ಫೈನಲ್ ಗೆ ಭರ್ಜರಿಯಾಗಿ ಲಗ್ಗೆ ಇಟ್ಟಿವೆ. ಅಡಿಲೆಡ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಭಾರತದ ನಡುವಿನ ಸೆಮಿ ಫೈನಲ್ ಪಂದ್ಯಾವಳಿಯು ನವೆಂಬರ್ 10ರಂದು ಜರುಗಲಿದೆ. ಸೆಮಿ ಫೈನಲ್ ಪಂದ್ಯಕೂ ಮುನ್ನ ತಂಡದಲ್ಲಿ ಒಂದು ಮಹತ್ವದ ಬದಲಾವಣೆಯನ್ನು ತರಲಾಗಿದೆ. ಆಟಗಾರರು ಒಬ್ಬರು ಗಾಯಗೊಂಡ ಕಾರಣದಿಂದಾಗಿ ಅವರ ಸ್ಥಾನಕ್ಕೆ ಮತ್ತೊಬ್ಬ ಬಲಿಷ್ಠ ಆಟಗಾರರನ್ನು ತಂದು ಕೂರಿಸಲಾಗಿದೆ. ಹಾಗಿದ್ದರೆ ಇಷ್ಟಕ್ಕೂ ಗಾಯಗೊಂಡದ್ದು ಯಾರು? ಅವರ ಸ್ಥಾನಕ್ಕೆ ಬಂದ ಮತ್ತೊಬ್ಬ ಬಲಾಢ್ಯ ಆಟಗಾರ ಯಾರು ಎನ್ನುವುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಟಿ ಟ್ವೆಂಟಿ ವಿಶ್ವಕಪ್ ಸೆಮಿ ಫೈನಲ್ ಶುರುವಾಗುವುದಕ್ಕೂ ಮೊದಲೇ ಇಂಗ್ಲೆಂಡ್ ತಂಡದಲ್ಲಿ ಮಹತ್ವದ ಬದಲಾವಣೆಯೊಂದನ್ನು ಮಾಡಿಕೊಳ್ಳಲಾಗಿದೆ. ಇತ್ತೀಚಿಗೆ ಶ್ರೀಲಂಕಾದ ವಿರುದ್ಧ ನಡೆದ ಇಂಗ್ಲೆಂಡ್ ಪಂದ್ಯದಲ್ಲಿ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಡೇವಿಡ್ ಮಲಾನ್ ಗಾಯ ಮಾಡಿಕೊಂಡಿದ್ದರು. ತೊಡೆ ಸಂದು ಗಾಯದಿಂದ ಬಳಲುತ್ತಿದ್ದ ಅವರು ಪಂದ್ಯದಲ್ಲಿ ಆಡಲಾಗದೆ ಆಟದಿಂದ ಹೊರ ನಡೆದಿದ್ದರು. ಇದೀಗ ತಂಡವು ಅವರ ಜಾಗಕ್ಕೆ ಮತ್ತೊಬ್ಬ ಬಲಿಷ್ಠ ಆಟಗಾರರನ್ನು ಕರೆದು ತಂದಿದೆ. ಮಲಾನ್ ಬದಲಿಗೆ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮಲನ್ ಅವರು ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರು, ಹೀಗಾಗಿ ಅವರನ್ನು ತಂಡದಿಂದ ಹೊರಗೆ ಕಳಿಸಲಾಗಿತ್ತು. ಫಿಲ್ ಸಾಲ್ಟ್ ನಂಬರ್-3 ರ ಕ್ರಮಾಂಕದಲ್ಲಿ ಆಡಲಿದ್ದು ಅವರು ಇದುವರೆಗೆ ಇಂಗ್ಲೆಂಡ್ ಪರವಾಗಿ ಹನ್ನೊಂದು ಪಂದ್ಯಗಳಲ್ಲಿ ಆಡಿದ್ದಾರೆ.

ind vs eng | T20 Worldcup: ಗಡ ಗಡ ನಡುಕ ಆರಂಭ: ಭಾರತ Vs ಇಂಗ್ಲೆಂಡ್ ಸೆಮಿಫೈನಲ್ ಗೂ ಮುನ್ನವೇ ತಂಡಕ್ಕೆ ಹೊಸ ಆಟಗಾರ ಎಂಟ್ರಿ. ಯಾರು ಗೊತ್ತೇ??
T20 Worldcup: ಗಡ ಗಡ ನಡುಕ ಆರಂಭ: ಭಾರತ Vs ಇಂಗ್ಲೆಂಡ್ ಸೆಮಿಫೈನಲ್ ಗೂ ಮುನ್ನವೇ ತಂಡಕ್ಕೆ ಹೊಸ ಆಟಗಾರ ಎಂಟ್ರಿ. ಯಾರು ಗೊತ್ತೇ?? 2

ಈ ಪಂದ್ಯಗಳಲ್ಲಿ ಸಾಲ್ಟ್ 164.3 ಸ್ಟ್ರೈಕ್ ರೇಟ್‌ನಲ್ಲಿ 235 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 2 ಅರ್ಧಶತಕಗಳನ್ನು ಸಹ ಗಳಿಸಿದ್ದಾರೆ. ಮಲಾನ್ ಅವರ ಗಾಯದ ಕುರಿತಾಗಿ ತಂಡದ ಮತ್ತೊಬ್ಬ ಆಟಗಾರ ಮೊಯಿನ್ ಅಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ – “ಮಲಾನ್ ಅವರು ತಂಡದಿಂದ ಹೊರಗೆ ಉಳಿಯಬೇಕಾಗಿ ಬಂದದ್ದಕ್ಕಾಗಿ ನಮಗೆ ಬಹಳ ಬೇಸರವಾಗಿದೆ. ಅವರು ಸಾಕಷ್ಟು ವರ್ಷಗಳಿಂದಲೂ ಅತ್ಯುತ್ತಮ ಆಟಗಾರ ಎನ್ನುವುದನ್ನು ಸಾಬೀತು ಮಾಡಿಕೊಂಡೆ ಬಂದಿದ್ದಾರೆ. ತಂಡದ ಬ್ಯಾಟಿಂಗ್ ಗೆ ಅವರು ಸದಾ ಉತ್ತಮ ಕೊಡುಗೆ ನೀಡುತ್ತಿದ್ದರು. ಒಬ್ಬ ಒಳ್ಳೆಯ ಬ್ಯಾಟ್ಸ್ಮನ್ ತಂಡದಲ್ಲಿ ಇಲ್ಲದಿರುವುದು ನಮ್ಮ ಬೇಸರಕ್ಕೆ ಕಾರಣವಾಗಿದೆ” ಎಂದು ಹೇಳಿದ್ದಾರೆ. ಇದರ ಜೊತೆಗೆ “ಸಾಲ್ಟ್ ಕೂಡ ಉತ್ತಮ ಬ್ಯಾಟ್ಸ್ಮನ್ ಆಗಿದ್ದು, ಮಲನ್ ಅವರ ಜಾಗ ತುಂಬುತ್ತಾರೆ” ಎಂದು ಅವರು ಹೇಳಿದ್ದಾರೆ.

Comments are closed.