ಸೆಮಿಫೈನಲ್ ಮುನ್ನ ಭಾರತ ತಂಡಕ್ಕೆ ಬಿಗ್ ಬಿಗ್ ಶಾಕ್: ಡಬಲ್ ಆಘಾತದ ನಡುವೆ ನಡೆದದ್ದು ಏನು ಗೊತ್ತೇ?? ಏನಾಗಿದೆ ಗೊತ್ತೇ??

ಟಿ ಟ್ವೆಂಟಿ ವಿಶ್ವಕಪ್ 2022 ಕೊನೆಯ ಹಂತಕ್ಕೆ ಬಂದು ತಲುಪಿದೆ. ಸೂಪರ್ 12 ಎಲ್ಲಾ ಪಂದ್ಯಗಳು ಈಗಾಗಲೇ ಮುಗಿದಿದ್ದು ಗ್ರೂಪ್ ಒಂದು ಮತ್ತು ಎರಡರಲ್ಲಿ ಟಾಪ್ 2 ಸ್ಥಾನ ಪಡೆದುಕೊಂಡ ತಂಡಗಳು ಸೆಮಿ ಫೈನಲ್ ನಲ್ಲಿ ಸೆಣೆಸಲಿದೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಗುಂಪು ಒಂದರಿಂದ ಹಾಗೂ ಭಾರತ ಮತ್ತು ಪಾಕಿಸ್ತಾನ ಗುಂಪು ಎರಡರಿಂದ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿವೆ. ನವೆಂಬರ್ 9ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿ ಫೈನಲ್ ನಲ್ಲಿ ಎದುರಾಗಲಿವೆ. ನವೆಂಬರ್ 10ರಂದು ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಭಾರತ ತಂಡವು ಆಡಸಲಿದ್ದು ಗೆಲುವಿಗಾಗಿ ಆಡಲಿವೆ. ಇನ್ನೇನು ಸೆಮಿ ಫೈನಲ್ ನಲ್ಲಿ ಭರ್ಜರಿ ಪ್ರದರ್ಶನ ತೋರಬೇಕಿದ್ದ ಭಾರತ ತಂಡಕ್ಕೆ ಇದೀಗ ಒಂದು ದೊಡ್ಡ ಆಘಾತ ಎದುರಾಗಿದೆ. ತಂಡದ ಭರವಸೆ, ಶಕ್ತಿ ಆಗಿದ್ದ ಆಟಗಾರರೊಬ್ಬರು ಇದೀಗ ಆಟ ಆಡದೆ ಇರುವಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿರುವ ಭಾರತ ತಂಡ ಈಗಾಗಲೇ ಅಡಿಲೇಡ್ ಗೆ ಬಂದು ಇಳಿದಿದೆ. ಇದರ ಬೆನ್ನಲ್ಲೇ ತಂಡವು ಅಭ್ಯಾಸ ಪದ್ಯದಲ್ಲಿ ನಿರತವಾಗಿದೆ. ಈ ವೇಳೆ ಹಿಟ್ಮ್ಯಾನ್ ರೋಹಿತ್ ಶರ್ಮಾ ನೆಟ್ಟಿನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವಾಗ ಗಾಯ ಮಾಡಿಕೊಂಡಿದ್ದಾರೆ. ಬಲ ಮುಂಗೈಗೆ ಅವರು ಪೆಟ್ಟು ಮಾಡಿಕೊಂಡು ಸಾಕಷ್ಟು ನೋವು ತಿಂದಿದ್ದಾರೆ. ಅವರಿಗೆ ಪೆಟ್ಟಾದ ತಕ್ಷಣವೇ ವೈದ್ಯರು ಅವರಿಗೆ ಚಿಕಿತ್ಸೆ ನೀಡಿದರು. ಆದರೆ ನೋವನ್ನು ತಡೆಯಲು ಸಾಧ್ಯವಾಗದ ಕಾರಣ ಅವರು ಅಭ್ಯಾಸ ಪಂದ್ಯವನ್ನು ಅರ್ಧಕ್ಕೆ ಮೋಟಕು ಗೊಳಿಸಬೇಕಾಗಿತ್ತು. ರೋಹಿತ್ ಶರ್ಮಾ ಪೆಟ್ಟು ಮಾಡಿಕೊಂಡ ತಕ್ಷಣವೇ ಕ್ರಿಕೆಟ್ನ ವೈದ್ಯಕೀಯ ಸಿಬ್ಬಂದಿ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಇದು ಭಾರತ ತಂಡಕ್ಕೆ ಮುಂದೇನು ಎನ್ನುವ ಚಿಂತೆಯನ್ನು ಸೃಷ್ಟಿಸಿದೆ.

rohit injury | ಸೆಮಿಫೈನಲ್ ಮುನ್ನ ಭಾರತ ತಂಡಕ್ಕೆ ಬಿಗ್ ಬಿಗ್ ಶಾಕ್: ಡಬಲ್ ಆಘಾತದ ನಡುವೆ ನಡೆದದ್ದು ಏನು ಗೊತ್ತೇ?? ಏನಾಗಿದೆ ಗೊತ್ತೇ??
ಸೆಮಿಫೈನಲ್ ಮುನ್ನ ಭಾರತ ತಂಡಕ್ಕೆ ಬಿಗ್ ಬಿಗ್ ಶಾಕ್: ಡಬಲ್ ಆಘಾತದ ನಡುವೆ ನಡೆದದ್ದು ಏನು ಗೊತ್ತೇ?? ಏನಾಗಿದೆ ಗೊತ್ತೇ?? 2

ಇನ್ನು ಕೆಲವೇ ದಿನಗಳಲ್ಲಿ ಸೆಮಿ ಫೈನಲ್ ನಲ್ಲಿ ಆಡಬೇಕಿದ್ದ ಭಾರತ ತಂಡದ ರೋಹಿತ್ ಶರ್ಮ ಅವರು ಹೀಗೆ ಪೆಟ್ಟು ಮಾಡಿಕೊಂಡಿರುವುದು ಕೇವಲ ತಂಡಕ್ಕೆ ಮಾತ್ರವಲ್ಲದೆ ಮ್ಯಾನೇಜ್ಮೆಂಟ್ ಜೀವ್ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ ತಂಡವು ಇದುವರೆಗೆ ಅಧಿಕೃತವಾಗಿ ರೋಹಿತ್ ಅವರಿಗೆ ಗಾಯವಾಗಿರುವುದರ ಬಗ್ಗೆ ಏನನ್ನು ಹೇಳಿಲ್ಲ. ಗಾಯಗೊಂಡು ಅಭ್ಯಾಸ ಪಂದ್ಯದಿಂದ ನಿರ್ಗಮಿಸಿದ ರೋಹಿತ್ ಶರ್ಮ ಅವರಿಗೆ ಐಸ್ ಬಾಕ್ಸ್ ಪಟ್ಟಿ ಕಟ್ಟಲಾಗಿದ್ದು ಅವರು ಪಂದ್ಯವನ್ನು ವೀಕ್ಷಿಸುತ್ತಿರುವ ದೃಶ್ಯಗಳು ಲಭ್ಯವಾಗಿವೆ. ಇದೀಗ ಅವರು ಪೆಟ್ಟು ಮಾಡಿಕೊಂಡಿರುವುದು ಎಲ್ಲರ ಆತಂಕಕ್ಕೂ ಕಾರಣವಾಗಿದ್ದು, ಬಿಸಿಸಿಐ ತಂಡದ ನಾಯಕನೇ ಹೀಗೆ ಪೆಟ್ಟು ಮಾಡಿಕೊಂಡಿರುವುದರಿಂದ ಮುಂದೇನು ಎಂದು ಚಿಂತಿಸುವಂತಾಗಿದೆ. ಇದಲ್ಲದೆ ದಿನೇಶ್ ಕಾರ್ತಿಕ್ ಅವರು ಕೂಡ ಇಂಜುರಿ ಮಾಡಿಕೊಂಡಿದ್ದು ಅವರ ಬಗ್ಗೆ ಹೆಚ್ಚಿನ ಅಧಿಕೃತ ಮಾಹಿತಿ ದೊರೆತಿಲ್ಲ. ಇದರ ಬೆನ್ನಲ್ಲೇ ಇದೀಗ ತಂಡದ ನಾಯಕನೇ ಪೆಟ್ಟು ಮಾಡಿಕೊಂಡು ಅಭ್ಯಾಸ ಪಂದ್ಯವನ್ನು ಆಡಲಾಗದೆ ಕುಳಿತಿದ್ದಾರೆ. ಇದು ಭಾರತ ತಂಡದ ಗೆಲುವಿಗೆ ಹಿನ್ನಡೆಯಾಗಲಿದೆಯಾ ಕಾದು ನೋಡಬೇಕಿದೆ.

Comments are closed.