ಭಾರತಕ್ಕೆ ಮತ್ತೊಂದು ಬಿಗ್ ಶಾಕ್: ನೆಟ್ ನಲ್ಲಿ ಪ್ರಾಕ್ಟೀಸ್ ಮಾಡುವಾಗ ಕೊಹ್ಲಿಗೆ ಏನಾಗಿದೆ ಗೊತ್ತೇ?? ಸೋಲು ಖಚಿತವೇ??

ಟಿ – ಟ್ವೆಂಟಿ ವಿಶ್ವಕಪ್ 2022ರ ಸೆಮಿ ಫೈನಲ್ ಪಂದ್ಯದಲ್ಲಿ ನಾಳೆ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಬಹು ನಿರೀಕ್ಷಿತ ಸೆಮಿ ಫೈನಲ್ ಇನ್ನು ಕೆಲವೇ ಗಂಟೆಗಳಿರುವಾಗ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಸ್ಟಾರ್ ಆಟಗಾರನೊಬ್ಬ ಇದೀಗ ಪೆಟ್ಟು ಮಾಡಿಕೊಂಡು ಆಡಲಾಗದ ಪರಿಸ್ಥಿತಿ ತಂದುಕೊಂಡಿದ್ದಾರೆ. ಇಷ್ಟಕ್ಕೂ ಇದು ರೋಹಿತ್ ರವರ ಕುರಿತಾದ ಮಾಹಿತಿಯಲ್ಲ, ನಿನ್ನೆ ಅಭ್ಯಾಸ ಪಂದ್ಯದ ವೇಳೆ ರೋಹಿತ್ ಶರ್ಮ ಅವರು ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಅವರ ಮುಂಗೈಗೆ ಪೆಟ್ಟು ಮಾಡಿಕೊಂಡಿದ್ದರು. ಅವರು ಇನ್ನೂ ಆಡಲಾಗುವುದಿಲ್ಲ ಎನ್ನುವ ಪರಿಸ್ಥಿತಿಯ ನಿರ್ಮಾಣವಾಗಿತ್ತು. ಆದರೆ ಸ್ವಲ್ಪ ಸಮಯಗಳ ವಿಶ್ರಾಂತಿಯ ಬಳಿಕ ಅವರು ಚೇತರಿಸಿಕೊಂಡು ಮತ್ತೆ ಅಭ್ಯಾಸ ಪಂದ್ಯದಲ್ಲಿ ನಿರತರಾಗಿದ್ದರು. ಆ ಮೂಲಕ ಒಂದು ದೊಡ್ಡ ಆತಂಕ ನಿವಾರಣೆಯಾಗಿತ್ತು. ಆದರೆ ಇದೀಗ ಅಭ್ಯಾಸ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ಪೆಟ್ಟು ಮಾಡಿಕೊಂಡಿದ್ದಾರೆ. ಈ ಬೆಳವಣಿಗೆ ಬಿಸಿಸಿಐ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಗು ಮೊದಲೇ ಕ್ರಿಕೆಟ್ ಅಭಿಮಾನಿಗಳಿಗೆ ಇಂತಹದೊಂದು ದೊಡ್ಡ ಶಾಕ್ ಎದುರಾಗಿದೆ. ವಿರಾಟ್ ಕೊಹ್ಲಿಯವರು ನೆಟ್ ನಲ್ಲಿ ಅಭ್ಯಾಸ ಮಾಡುವಾಗ ಗಾಯಗೊಂಡಿದ್ದಾರೆ. ಹರ್ಷಲ್ ಪಟೇಲ್ ಅವರು ಎಸೆದ ಚೆಂಡು ವಿರಾಟ್ ಕೊಹ್ಲಿ ಅವರ ತೊಡೆಸಂದು ಗೆ ಬಿದ್ದಿದ್ದು ಅವರು ಪೆಟ್ಟು ಮಾಡಿಕೊಂಡಿದ್ದಾರೆ. ಪೆಟ್ಟಿನಿಂದ ನರಳಿದ್ದಾರೆ. ಕೊಹ್ಲಿಗೆ ಗಂಭೀರ ಗಾಯವಾಗಿರುವುದರ ಕುರಿತು ಮಾಹಿತಿ ಹೊರ ಬಿದ್ದಿದೆ. ತಕ್ಷಣವೇ ಅವರು ಅಭ್ಯಾಸ ಪಂದ್ಯದಿಂದ ಹೊರ ನಡೆದಿದ್ದಾರೆ. ಸೆಮಿ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ಇಂತಹದೊಂದು ಆಚಾತುರ್ಯ ಘಟಿಸಿದೆ. ಹರ್ಷಲ್ ಪಟೇಲ್ ಅವರ ವೇಗದ ಚೆಂಡು ವಿರಾಟ್ ಕೊಹ್ಲಿಯ ತೊಡಗೆ ಬಿದ್ದು ಅವರು ಅತಿವ ನೋವನ್ನು ಅನುಭವಿಸಿದ್ದಾರೆ. ಪಂದ್ಯವನ್ನು ಮುಂದುವರಿಸಲಾಗದೆ ಅಪಾರ ವೇದನೆಯಿಂದ ಅವರು ನೆಟ್ ಪ್ರಾಕ್ಟೀಸ್ ನಿಂದ ಹೊರ ನಡೆದಿದ್ದಾರೆ.

virat injury | ಭಾರತಕ್ಕೆ ಮತ್ತೊಂದು ಬಿಗ್ ಶಾಕ್: ನೆಟ್ ನಲ್ಲಿ ಪ್ರಾಕ್ಟೀಸ್ ಮಾಡುವಾಗ ಕೊಹ್ಲಿಗೆ ಏನಾಗಿದೆ ಗೊತ್ತೇ?? ಸೋಲು ಖಚಿತವೇ??
ಭಾರತಕ್ಕೆ ಮತ್ತೊಂದು ಬಿಗ್ ಶಾಕ್: ನೆಟ್ ನಲ್ಲಿ ಪ್ರಾಕ್ಟೀಸ್ ಮಾಡುವಾಗ ಕೊಹ್ಲಿಗೆ ಏನಾಗಿದೆ ಗೊತ್ತೇ?? ಸೋಲು ಖಚಿತವೇ?? 2

ಈ ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ. ಹೀಗಿರುವಾಗ ವಿರಾಟ್ ಕೊಹ್ಲಿ ನೋವು ಮಾಡಿಕೊಂಡು ಹೊರ ನಡೆದಿರುವುದು ಭಾರತ ತಂಡಕ್ಕೆ ಅತಿ ದೊಡ್ಡ ಹಿನ್ನಡೆಯಾಗುವ ಭಯ ಸೃಷ್ಟಿಯಾಗಿದೆ. ಟೀಮ್ ಇಂಡಿಯಾ ಕೂಡ ವಿರಾಟ್ ಕೊಹ್ಲಿ ಅವರ ಅದ್ಭುತ ಆಟದಿಂದಾಗಿ ಸೆಮಿ ಫೈನಲ್ ಗೆ ಲಗ್ಗೆ ಇಡಲು ಬಹು ಮುಖ್ಯ ಕಾರಣವಾಗಿತ್ತು. ವಿರಾಟ್ ಕೊಹ್ಲಿ ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಫಾರ್ಮ್ ಅಲ್ಲಿದ್ದು ಅತಿ ಹೆಚ್ಚು ರನ್ ಗಳಿಸಿ, ಭಾರತ ತಂಡ ಅಗ್ರ ಶ್ರೇಯಾಂಕಕ್ಕೆ ತಲುಪಲು ಸಹಕರಿಸಿದ್ದರು. ಅಲ್ಲದೆ ಅವರು ಈ ಪಂದ್ಯದಲ್ಲಿ ಉಳಿದ ಎಲ್ಲಾ ಆಟಗಾರರಿಗಿಂತ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರರಾಗಿದ್ದಾರೆ. ಅಂದರೆ ಅವರು ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಮಾಡಿದ್ದಾರೆ. ಇಂತಹ ಒಳ್ಳೆಯ ದಾಖಲೆ ಹೊಂದಿರುವ ಒಬ್ಬ ಶ್ರೇಷ್ಠ ಆಟಗಾರ ಇದೀಗ ಪೆಟ್ಟು ಮಾಡಿಕೊಂಡು ಆಟದಿಂದ ಹೊರಗೆ ಉಳಿದಿರುವುದು ಎಲ್ಲರಿಗೂ ಆತಂಕ ಮೂಡಿಸಿದೆ. ವಿರಾಟ್ ಕೊಹ್ಲಿ ಅವರ ಆರೋಗ್ಯದ ಕುರಿತು, ಅವರ ಇಂಜುರಿ ಕುರಿತು ಬಿಸಿಸಿಐ ಇನ್ನಷ್ಟು ಅಪ್ಡೇಟ್ಸ್ ನೀಡಬೇಕಿದೆ. ಆದಷ್ಟು ಬೇಗ ವಿರಾಟ್ ಚೇತರಿಸಿಕೊಂಡು ಸೆಮಿ ಫೈನಲ್ ಪಂದ್ಯದಲ್ಲಿ ತಮ್ಮ ಎಂದಿನ ಅದ್ಭುತ ಪ್ರದರ್ಶನ ತೋರುವರೇ ಕಾದು ನೋಡಬೇಕಿದೆ.

Comments are closed.