ಹೈದ್ರಾಬಾದ್ ವಿರುದ್ಧ ಶೂನ್ಯ ರನ್ನಿಗೆ ಔಟಾದ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮಿಗೆ ಬಂದಾಗ ಮುಖ್ಯ ಕೋಚ್ ಸಂಜಯ್ ಬಂಗಾರ್ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ದ್ವಿತಿಯಾರ್ಧದಲ್ಲಿ ಈಗಾಗಲೇ ಸತತವಾಗಿ ಎರಡು ಗೆಲುವುಗಳನ್ನು ದಾಖಲಿಸುವ ಮೂಲಕ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಗೆಲುವಿನ ಟ್ರ್ಯಾಕಿಗೆ ಮರಳಿದೆ ನಿಜ ಆದರೆ ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್ ಮುಂದುವರೆದಿದೆ ಎನ್ನುವ ಬೇಸರವೂ ಕೂಡ ತಂಡದಲ್ಲಿ ಹಾಗೂ ತಂಡದ ಅಭಿಮಾನಿಗಳಲ್ಲಿ ಇದೆ.

ಹೌದು ಗೆಳೆಯರೇ ಈಗಾಗಲೇ ಐಪಿಎಲ್ನಲ್ಲಿ ಅತ್ಯಂತ ಕಳಪೆ ಫಾರಂನಲ್ಲಿ ಮುಂದುವರೆದಿರುವ ವಿರಾಟ್ ಕೊಹ್ಲಿ ರವರು ಇತ್ತೀಚಿಗಷ್ಟೇ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಕೂಡ ಮೊದಲ ಎಸೆತಕ್ಕೆ ಶೂನ್ಯ ರನ್ನಿಗೆ ಔಟ್ ಆಗುವ ಮೂಲಕ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ ಎಂದು ಹೇಳಬಹುದಾಗಿದೆ.

rcb kohli sanjay abangar | ಹೈದ್ರಾಬಾದ್ ವಿರುದ್ಧ ಶೂನ್ಯ ರನ್ನಿಗೆ ಔಟಾದ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮಿಗೆ ಬಂದಾಗ ಮುಖ್ಯ ಕೋಚ್ ಸಂಜಯ್ ಬಂಗಾರ್ ಮಾಡಿದ್ದೇನು ಗೊತ್ತಾ??
ಹೈದ್ರಾಬಾದ್ ವಿರುದ್ಧ ಶೂನ್ಯ ರನ್ನಿಗೆ ಔಟಾದ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮಿಗೆ ಬಂದಾಗ ಮುಖ್ಯ ಕೋಚ್ ಸಂಜಯ್ ಬಂಗಾರ್ ಮಾಡಿದ್ದೇನು ಗೊತ್ತಾ?? 2

ಒಂದು ಕಾಲದಲ್ಲಿ ರನ್ ಮೆಷಿನ್ ಎಂದು ಕರೆಸಿಕೊಳ್ಳುತ್ತಿದ್ದ ವಿರಾಟ್ ಕೊಹ್ಲಿ ರವರು 12 ಪಂದ್ಯಗಳಿಂದ ಈ ಸೀಸನ್ ನಲ್ಲಿ ಗಳಿಸಿರುವುದು ಕೇವಲ 216 ರನ್ನುಗಳನ್ನು ಮಾತ್ರ. ಇನ್ನು ಕೇವಲ ಈ ಬಾರಿಯ ಸನ್ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಮಾತ್ರವಲ್ಲದೆ ಕಳೆದ ಬಾರಿಯ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕೂಡ ವಿರಾಟ್ ಕೊಹ್ಲಿ ರವರು ಮೊದಲ ಬಾಲ್ ಗೆ ಔಟ್ ಆಗಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಐಪಿಎಲ್ 2022 ರಲ್ಲಿ ಮೂರು ಬಾರಿ 0 ರನ್ನಿಗೆ ಔಟ್ ಆಗಿದ್ದಾರೆ. ನಿಜಕ್ಕೂ ಕೂಡ ಇದರ ಆಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಅತ್ಯಂತ ದುಃಖಕರ ವಿಚಾರವಾಗಿದೆ.

ಮೊನ್ನೆ ಕೂಡ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಶೂನ್ಯ ರನ್ನಿಗೆ ಔಟಾದಾಗ ವಿರಾಟ್ ಕೊಹ್ಲಿ ಅವರು ಬೇಸರದಿಂದ ಡ್ರೆಸ್ಸಿಂಗ್ ರೂಮಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಸಾಕಷ್ಟು ನಿರಾಶೆಯನ್ನು ಅನುಭವಿಸುತ್ತಿರುವ ದೃಶ್ಯಗಳು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದವು. ಈ ಸಂದರ್ಭದಲ್ಲಿ ತಂಡದ ಪ್ರಮುಖ ಕೋಚ್ ಆಗಿರುವ ಸಂಜಯ್ ಬಂಗಾರ್ ರವರು ವಿರಾಟ್ ಕೊಹ್ಲಿ ರವರನ್ನು ತಬ್ಬಿಕೊಳ್ಳುವ ಮೂಲಕ ಹಾಗೂ ಅವರಿಗೆ ಸಾಂತ್ವನವನ್ನು ಹೇಳುವ ಮೂಲಕ ಎಲ್ಲರ ಮನವನ್ನು ಗೆದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಬರಲಾಗಿದ್ದು ಅಗಾಧ ಪ್ರಮಾಣದಲ್ಲಿ ಸಂಜಯ್ ಬಂಗಾರ್ ರವರಿಗೆ ಕ್ರಿಕೆಟ್ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

Comments are closed.