ಕೊನೆಗೂ ಸಿಕ್ತು ಅಸಲಿ ಕಾರಣ, ಎಲಿಮಿನೇಟ್ ಆಗದೆ ಇದ್ದರೂ ಡ್ಯಾನ್ಸಿಂಗ್ ಚಾಂಪಿಯನ್ ನಿಂದ ಪುಟ್ಟಗೌರಿ ಸಾನ್ಯ ಹೊರಹೋಗಿದ್ದು ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಿಮಗೆ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಕಾರ್ಯಕ್ರಮಗಳು ಪ್ರೇಕ್ಷಕರ ರುಚಿಗೆ ತಕ್ಕಂತೆ ಮನರಂಜನೆಯನ್ನು ನೀಡುತ್ತಿವೆ. ಅವುಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮವು ಕೂಡ ಒಂದಾಗಿದೆ. ಹಲವಾರು ಪ್ರತಿಭೆಗಳಿಗೆ ನೃತ್ಯದ ವಿಭಾಗದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ. ಈಗಾಗಲೇ ಈ ಕಾರ್ಯಕ್ರಮ ಮುಗಿಯಲು ಇನ್ನು ಕೇವಲ ಎರಡು ವಾರಗಳು ಮಾತ್ರ ಬಾಕಿ ಉಳಿದಿದೆ.

ಸದ್ಯಕ್ಕೆ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಕ್ವಾರ್ಟರ್ ಫೈನಲ್ ಹಂತ ಪ್ರಸಾರವಾಗುತ್ತಿದ್ದು ಜೋಡಿಗಳು ಸೆಮಿಫೈನಲ್ ಹಂತಕ್ಕೆ ತಲುಪಿದೆ. ಈಗಾಗಲೇ ಈ ಕಾರ್ಯಕ್ರಮದ ಫಿನಾಲೆ ಹಂತವನ್ನು ಕೂಡ ಚಿತ್ರೀಕರಣ ಮಾಡಲಾಗಿದ್ದು ಇದರ ಟೆಲಿಕಾಸ್ಟ್ ಆಗಲು ಇನ್ನು ಕೇವಲ ಎರಡು ವಾರಗಳು ಮಾತೃ ಬಾಕಿ ಉಳಿದಿದೆ. ಯಾರು ಗೆಲ್ಲುತ್ತಾರೆ ಎನ್ನುವ ಕುರಿತಂತೆ ಸಾಕಷ್ಟು ಕುತೂಹಲ ಮೂಡಿ ನಿಂತಿದೆ.

sanya dancing champion 1 | ಕೊನೆಗೂ ಸಿಕ್ತು ಅಸಲಿ ಕಾರಣ, ಎಲಿಮಿನೇಟ್ ಆಗದೆ ಇದ್ದರೂ ಡ್ಯಾನ್ಸಿಂಗ್ ಚಾಂಪಿಯನ್ ನಿಂದ ಪುಟ್ಟಗೌರಿ ಸಾನ್ಯ ಹೊರಹೋಗಿದ್ದು ಯಾಕೆ ಗೊತ್ತೇ?
ಕೊನೆಗೂ ಸಿಕ್ತು ಅಸಲಿ ಕಾರಣ, ಎಲಿಮಿನೇಟ್ ಆಗದೆ ಇದ್ದರೂ ಡ್ಯಾನ್ಸಿಂಗ್ ಚಾಂಪಿಯನ್ ನಿಂದ ಪುಟ್ಟಗೌರಿ ಸಾನ್ಯ ಹೊರಹೋಗಿದ್ದು ಯಾಕೆ ಗೊತ್ತೇ? 3

ಆದರೆ ಈ ಎಲ್ಲಾ ವಿಚಾರಗಳ ನಡುವೆ ಸಾನಿಯಾ ಅಯ್ಯರ್ ಹಾಗೂ ನಿಹಾಲ್ ಜೋಡಿ ಕಳೆದ ವಾರದ ಕ್ವಾರ್ಟರ್ಫೈನಲ್ ಹಂತದಲ್ಲಿ ಪರ್ಫಾರ್ಮೆನ್ಸ್ ನೀಡಿರಲಿಲ್ಲ. ಇನ್ನು ಈ ವಿಚಾರದ ಕುರಿತಂತೆ ಟಿವಿಯಲ್ಲಿ ಕೂಡ ಅಂದರೆ ಕಾರ್ಯಕ್ರಮದಲ್ಲಿ ಕೂಡ ಯಾವುದೇ ವಿಚಾರಗಳು ಹೊರ ಮೂಡಿಬಂದಿರಲಿಲ್ಲ. ಹೀಗಾಗಿ ಇಬ್ಬರ ಅಭಿಮಾನಿಗಳು ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದರು ಎಂದರೆ ತಪ್ಪಾಗಲಾರದು. ಈ ಕುರಿತಂತೆ ಸಾಕಷ್ಟು ಗೊಂದಲಗಳು ಸೋಶಿಯಲ್ ಮೀಡಿಯಾದಲ್ಲಿ ಸೇರಿದಂತೆ ಅಭಿಮಾನಿಗಳಲ್ಲಿ ಓಡಾಡುತ್ತಿತ್ತು. ಆದರೆ ಅದಕ್ಕೆ ಈಗ ಸಾನಿಯಾ ರವರೆ ತೆರೆ ಎಳೆದಿದ್ದಾರೆ ಎಂದು ಹೇಳಬಹುದಾಗಿದೆ.

ಈ ಗೊಂದಲಕ್ಕೆ ತೆರೆ ಎಳೆದಿರುವ ಸಾನಿಯಾ ರವರು ಇಲ್ಲಿ ನಿಜಕ್ಕೂ ಏನು ನಡೆದಿದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಹೌದು ಗೆಳೆಯರೇ ಇಲ್ಲಿ ಸಾನಿಯಾ ರವರ ಡ್ಯಾನ್ಸಿಂಗ್ ಜೋಡಿಯಾಗಿರುವ ನಿಹಾಲ ರವರ ಮದುವೆ ಇದ್ದ ಕಾರಣದಿಂದಾಗಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಕೇವಲ ಇಷ್ಟು ಮಾತ್ರವಲ್ಲದೆ ಸಾನಿಯಾ ರವರಿಗೆ ಈ ಸಂದರ್ಭದಲ್ಲಿ ಸೋಲೋ ಪರ್ಫಾರ್ಮೆನ್ಸ್ ಅಥವಾ ಬೇರೆ ಜೋಡಿಯ ಜೊತೆಗೆ ಡ್ಯಾನ್ಸ್ ಮಾಡುವ ಆಯ್ಕೆಯನ್ನು ಪರಿಗಣಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕ್ವಾರ್ಟರ್ಫೈನಲ್ನಲ್ಲಿ ಪರ್ಫಾರ್ಮೆನ್ಸ್ ನೀಡಲು ಸಾಧ್ಯವಾಗಲಿಲ್ಲ.

sanya dancing champion 3 | ಕೊನೆಗೂ ಸಿಕ್ತು ಅಸಲಿ ಕಾರಣ, ಎಲಿಮಿನೇಟ್ ಆಗದೆ ಇದ್ದರೂ ಡ್ಯಾನ್ಸಿಂಗ್ ಚಾಂಪಿಯನ್ ನಿಂದ ಪುಟ್ಟಗೌರಿ ಸಾನ್ಯ ಹೊರಹೋಗಿದ್ದು ಯಾಕೆ ಗೊತ್ತೇ?
ಕೊನೆಗೂ ಸಿಕ್ತು ಅಸಲಿ ಕಾರಣ, ಎಲಿಮಿನೇಟ್ ಆಗದೆ ಇದ್ದರೂ ಡ್ಯಾನ್ಸಿಂಗ್ ಚಾಂಪಿಯನ್ ನಿಂದ ಪುಟ್ಟಗೌರಿ ಸಾನ್ಯ ಹೊರಹೋಗಿದ್ದು ಯಾಕೆ ಗೊತ್ತೇ? 4

ಆದರೆ ಇಲ್ಲಿಯವರೆಗೂ ನೀವು ನೀಡಿರುವ ಪ್ರೋತ್ಸಾಹ ಹಾಗೂ ಬೆಂಬಲ ಗಳಿಗೆ ನಾನೆಂದೂ ಚಿರಋಣಿ ಯಮುನಾಗೆ ಸಾನಿಯಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಕ್ವಾರ್ಟರ್ಫೈನಲ್ ಹಂತದಲ್ಲಿ ಮೂಡಿ ಬಂದಂತಹ ಈ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಸಾನಿಯ ಮಾಡಿದ್ದಾರೆ.

ಈ ಕಡೆ ನೋಡುವುದಾದರೆ ನಿಹಾಲ್ ಕೂಡ ಒಬ್ಬ ಒಳ್ಳೆ ಕಲಾವಿದ ಹಾಗೂ ಡ್ಯಾನ್ಸಿಂಗ್ ನಲ್ಲಿ ಕೂಡ ಪ್ರತಿಭಾವಂತ ಆಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರಿಗೆ ತಮ್ಮ ಮದುವೆ ಮುಖ್ಯವಾದ ಕಾರಣದಿಂದಾಗಿ ತಮ್ಮ ಗೆಳತಿಯ ಜೊತೆಗೆ ತಮ್ಮ ಕನಸಿನಂತೆ ಗೋವಾದ ಬೀಚ್ ನಲ್ಲಿ ಮದುವೆಯಾಗಿದ್ದಾರೆ. ಈ ಮೂಲಕ ತಮ್ಮ ಕನಸಿನ ಕನ್ಯೆಯನ್ನು ಜೀವನ ಸಂಗಾತಿಯಾಗಿ ಮದುವೆಯಾಗಿದ್ದಾರೆ. ಇದುವರೆಗೂ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಕೂಡ ನಿಹಾಲ್ ಒಬ್ಬ ಒಳ್ಳೆಯ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದು ಯಾರಿಗೇನು ಕಮ್ಮಿ ಇಲ್ಲದಂತೆ ಡ್ಯಾನ್ಸಿಂಗ್ ಪರ್ಫಾರ್ಮೆನ್ಸ್ ನೀಡಿದ್ದಾರೆ.

ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಕ್ವಾರ್ಟರ್ ಫೈನಲ್ ನಲ್ಲಿ ಯಾಕೆ ಸಾನಿಯಾ ಹಾಗೂ ನಿಹಾಲ್ ಜೋಡಿ ಪರ್ಫಾರ್ಮೆನ್ಸ್ ನೀಡಿಲ್ಲ ಎನ್ನುವ ಗೊಂದಲಕ್ಕೆ ಈಗ ಸಂಪೂರ್ಣವಾಗಿ ತಿಳಿಹೇಳುವ ಮೂಲಕ ಸಾನಿಯಾ ರವರು ಎಲ್ಲಾ ಗೊಂದಲಕ್ಕೂ ತೆರೆ ಎಳೆದಿದ್ದಾರೆ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.