ಸತ್ತ ವ್ಯಕ್ತಿಯ ಎರಡು ಕಾಲುಗಳ ಹೆಬ್ಬೆರಳನ್ನು ಯಾಕೆ ಕಟ್ಟುತ್ತಾರೆ ಗೊತ್ತೇ?? ಕಟ್ಟುವ ಹಿಂದೆ ಇದೆ ನಿಮಗೆ ಗೊತ್ತಿಲ್ಲದ ರಹಸ್ಯ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಯಾರ ಹತ್ತಿರವಾದರೂ ಜೀವನದ ಕುರಿತಂತೆ ಹೇಳಿ ಎಂದಾಗ ಅವರು ಹುಟ್ಟಿದ ಕುರಿತಂತೆ ಸಾಕಷ್ಟು ಉತ್ಸುಕರಾಗಿ ವರ್ಣಿಸುತ್ತಾರೆ. ಅದರ ಮಧ್ಯದಲ್ಲಿ ಬರುವಂತಹ ಜೀವನದ ಕುರಿತಂತೆ ಕೂಡ ಸಾಕಷ್ಟು ಬಣ್ಣಬಣ್ಣವಾಗಿ ವಿವರಿಸುತ್ತಾರೆ. ಆದರೆ ಮನುಷ್ಯನ ಅಂತ್ಯದ ಕುರಿತಂತೆ ಮಾತನಾಡಲು ಯಾರು ಕೂಡ ಅಷ್ಟೊಂದು ಇಂಟರೆಸ್ಟ್ ತೋರಿಸುವುದಿಲ್ಲ. ಯಾರಿಗೂ ಕೂಡ ಇಂತಹ ದುಃಖದ ಕ್ಷಣಗಳನ್ನು ಸ್ವತಹ ಅನುಭವಿಸಲು ಅಥವಾ ಬೇರೆಯವರನ್ನು ಆ ಪರಿಸ್ಥಿತಿಯಲ್ಲಿ ನೋಡಲು ಕೂಡ ಇಷ್ಟಪಡುವುದಿಲ್ಲ. ಆದರೆ ಪ್ರತಿಯೊಬ್ಬ ಹುಟ್ಟಿದ ಮನುಷ್ಯ ಅಂತ್ಯವನ್ನು ಕಾಣಲೇಬೇಕು ಇದೆ ಜಗದ ಅಲಿಖಿತ ನಿಯಮ.

tie | ಸತ್ತ ವ್ಯಕ್ತಿಯ ಎರಡು ಕಾಲುಗಳ ಹೆಬ್ಬೆರಳನ್ನು ಯಾಕೆ ಕಟ್ಟುತ್ತಾರೆ ಗೊತ್ತೇ?? ಕಟ್ಟುವ ಹಿಂದೆ ಇದೆ ನಿಮಗೆ ಗೊತ್ತಿಲ್ಲದ ರಹಸ್ಯ ಏನು ಗೊತ್ತೇ??
ಸತ್ತ ವ್ಯಕ್ತಿಯ ಎರಡು ಕಾಲುಗಳ ಹೆಬ್ಬೆರಳನ್ನು ಯಾಕೆ ಕಟ್ಟುತ್ತಾರೆ ಗೊತ್ತೇ?? ಕಟ್ಟುವ ಹಿಂದೆ ಇದೆ ನಿಮಗೆ ಗೊತ್ತಿಲ್ಲದ ರಹಸ್ಯ ಏನು ಗೊತ್ತೇ?? 2

ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಹಿಂದೂ ಧರ್ಮ ಎನ್ನುವುದು ಇಡೀ ಜಗತ್ತಿನಲ್ಲಿ ಅತ್ಯಂತ ಪುರಾತನ ಸಂಪ್ರದಾಯಗಳಲ್ಲಿ ಮೊದಲನೆಯದಾಗಿದೆ. ನಮ್ಮ ಪೂರ್ವಜರಿಂದ ಹಿಡಿದು ಹಲವಾರು ವರ್ಷಗಳಿಂದ ಅದೆಷ್ಟೋ ಸಂಪ್ರದಾಯಗಳ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಅವೆಲ್ಲದಕ್ಕೂ ಕೂಡ ಅದರದ್ದೇ ಆದಂತಹ ಮಹತ್ವದ ಇತಿಹಾಸವಿದೆ. ಇಂದು ವೈಜ್ಞಾನಿಕವಾಗಿ ಮಾಡಿರುವುದನ್ನು ಅಂದಿನ ಕಾಲದಲ್ಲೇ ನಮ್ಮ ಪೂರ್ವಜರು ಮಾಡಿ ಅದರ ಕಾರಣಗಳನ್ನು ಕೂಡ ಕಂಡುಹಿಡಿದಿದ್ದಾರೆ. ಇದಕ್ಕೆ ಸನಾತನಧರ್ಮ ವಿಶ್ವದ ಗುರು ಎನ್ನುವುದಾಗಿ ಮಾನ್ಯವಾಗಿದೆ.

ಹುಟ್ಟಿದ ಲಕ್ಷಣ ಕುಂಡಲಿ ನೋಡುವುದು ರಾಶಿಚಕ್ರವನ್ನು ಸಿದ್ಧಪಡಿಸುವುದು ಹುಟ್ಟಿದ ಗಳಿಗೆಯನ್ನು ಲೆಕ್ಕಹಾಕಿ ಭವಿಷ್ಯ ನಿರ್ಧರಿಸುವುದು ಹೀಗೆ ಹಲವಾರು ಆಚರಣೆಗಳನ್ನು ಮಾಡುತ್ತಾರೆ. ಇನ್ನು ಮರಣವನ್ನು ಹೊಂದಿದ ಕೂಡಲೇ ಕೂಡ ಹಲವಾರು ಸಾಂಪ್ರದಾಯಿಕ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಅವುಗಳಲ್ಲಿ ಎರಡು ಕಾಲಿನ ಹೆಬ್ಬೆರಳನ್ನು ಕಟ್ಟುವುದು ಕೂಡ ಒಂದು. ಇದಕ್ಕಿರುವಂತಹ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳು ಎರಡನ್ನು ಕೂಡ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಪುರಾಣ ಗ್ರಂಥಗಳ ಪ್ರಕಾರ ಮರಣ ಹೊಂದಿದ ವ್ಯಕ್ತಿಯ ಕೊನೆಯ ಕ್ರಿಯೆಗಳು ನಡೆಯುವವರೆಗೂ ಕೂಡ ಆತ್ಮ ಎನ್ನುವುದು ಭೂಲೋಕದಲ್ಲಿ ತಿರುಗಾಡುತ್ತಿರುತ್ತದೆ. ಹೀಗಾಗಿ ಆತನ ಆತ್ಮ ಮತ್ತೊಮ್ಮೆ ಮನೆಯ ಒಳಗಡೆ ಪ್ರವೇಶ ಮಾಡಬಾರದು ಎನ್ನುವ ಕಾರಣಕ್ಕಾಗಿ ಧಾರ್ಮಿಕ ಆಚಾರಗಳ ಪ್ರಕಾರ ಆತನ ಎರಡು ಕಾಲಿನ ಹೆಬ್ಬೆಟ್ಟು ಗಳನ್ನು ಕಟ್ಟಲಾಗುತ್ತದೆ. ಈ ಕಾರಣದಿಂದಾಗಿ ಆತನ ಆತ್ಮ ಮತ್ತೊಮ್ಮೆ ಅವನ ಮನೆಯನ್ನು ಪ್ರವೇಶಿಸುವುದಿಲ್ಲ ಎನ್ನುವ ನಂಬಿಕೆ ಧಾರ್ಮಿಕ ಗ್ರಂಥಗಳಲ್ಲಿ ಇದೆ.

ವೈಜ್ಞಾನಿಕ ಕಾರಣದ ಕುರಿತಂತೆ ಹೇಳುವುದಾದರೆ ಮರಣ ಹೊಂದಿದ ನಂತರ ವ್ಯಕ್ತಿಯ ದೇಹದಲ್ಲಿ ರ’ಕ್ತದ ಚಲನೆ ಎನ್ನುವುದು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಈ ಕಾರಣದಿಂದಾಗಿ ಒಂದು ವೇಳೆ ದೇಹ ಅಂದರೆ ಕಾಲು ಅಗಲವಾಗುತ್ತಾ ಹೋದರೆ ಮತ್ತೆ ಅದನ್ನು ಒಟ್ಟಿಗೆ ತರುವುದು ಕಷ್ಟವಾಗುತ್ತದೆ. ಯಾಕೆಂದರೆ ದೇಹ ಸೆಟೆದುಕೊಳ್ಳುತ್ತದೆ. ಈ ಕಾರಣಕ್ಕಾಗಿಯೇ ಎರಡು ದೇಹಗಳ ಹೆಬ್ಬೆಟ್ಟು ಗಳನ್ನು ಕಟ್ಟುತ್ತಾರೆ. ಇದು ಈ ಕ್ರಿಯೆಗೆ ಇರುವಂತಹ ವೈಜ್ಞಾನಿಕ ಕಾರಣ.

ಆದರೆ ವೈಜ್ಞಾನಿಕ ಲೋಕ ಸತ್ಯವನ್ನು ತಿಳಿಯುವ ಮೊದಲೇ ನಮ್ಮ ಪುರಾತನ ಪೂರ್ವಜರು ಇದರ ಕುರಿತಂತೆ ಆಚರಣೆಗಳನ್ನು ಜಾರಿಗೆ ತಂದಿದ್ದರು. ಇಂತಹ ಅದೆಷ್ಟು ಆಚರಣೆಗಳು ನಮ್ಮ ಸನಾತನ ಧರ್ಮದಲ್ಲಿ ಪುರಾತನಕಾಲದಿಂದಲೂ ಕೂಡ ಆಚರಣೆಯಲ್ಲಿವೆ. ವೈಜ್ಞಾನಿಕತೆಯನ್ನು ವುದು ಹುಟ್ಟುವ ಮೊದಲೇ ಇವುಗಳನ್ನು ನಮ್ಮ ಪೂರ್ವಜರು ಕಂಡುಹಿಡಿದಿದ್ದರು. ನಿಜಕ್ಕೂ ಕೂಡ ನಮ್ಮ ಸನಾತನ ಧರ್ಮ ಎಲ್ಲಕ್ಕಿಂತ ಶ್ರೇಷ್ಠವಾದದ್ದು ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಹೆಮ್ಮೆ ಆಗುತ್ತದೆ. ಈ ವಿಚಾರಗಳ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.