ಹೊಚ್ಚ ಹೊಸ ಸ್ಪೋರ್ಟ್ಸ್ ಖರೀದಿ ಮಾಡಿದ ಶಮಿ: ಈ ಕಾರಿನ ಬೆಲೆ ಕೇಳಿದರೆ ನಿಜಕ್ಕೂ ದಂಗಾಗ್ತೀರಾ. ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೆ ಕ್ರಿಕೆಟಿಗ ಮೊಹಮ್ಮದ್ ಶಮಿ ಕೇವಲ ಕ್ರಿಕೆಟ್ ಜೀವನದಲ್ಲಿ ಮಾತ್ರವಲ್ಲದೇ ತಮ್ಮ ವೈಯಕ್ತಿಕ ಜೀವನ ಸುದ್ದಿಗಳಿಗಾಗಿ ಕೂಡ ಸುದ್ದಿಯಾದವರು. ಕೆಲವೊಂದು ವೈಯಕ್ತಿಕ ವಿಚಾರಗಳು ನಿಜಕ್ಕೂ ಕೂಡ ಕಹಿಯಾದದ್ದು ಆದರೆ ನಾವು ಇಂದು ಮಾತನಾಡಲು ಹೊರಟಿರುವುದು ಅಂತ ಕಹಿ ಸುದ್ದಿಗಳಲ್ಲಿ ಕೂಡ ಇದು ಸಿಹಿಯಾದ ಸುದ್ದಿ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೆ ಭಾರತೀಯ ಕ್ರಿಕೆಟಿಗನಾಗಿ ಮೊಹಮ್ಮದ್ ಶಮಿ ರವರು ಭಾರತೀಯ ನೆಲದಲ್ಲಿ ಹಾಗೂ ವಿದೇಶದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ತಮ್ಮ ಸಾಮರ್ಥ್ಯದ ಕುರಿತಂತೆ ಸವಾಲು ಬಂದಾಗಲೆಲ್ಲ ತಾವೇನು ಎಂಬುದನ್ನು ಸಾಬೀತು ಪಡಿಸಿದವರು.

ತಮ್ಮ ಸಾಮರ್ಥ್ಯದ ಬಲದಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿ ಪ್ರತಿಯೊಂದು ಪಂದ್ಯದಲ್ಲಿ ಕೂಡ ತನ್ನ ಸಾಮರ್ಥ್ಯದ ಬಲ ಪರೀಕ್ಷೆಯನ್ನು ಮಾಡಿದ ಪ್ರತಿಭಾನ್ವಿತ ಕ್ರಿಕೆಟಿಗ. ಇತ್ತೀಚಿನ ದಿನಗಳಲ್ಲಿ ತಂಡದಿಂದ ಆಗಾಗ ಹೊರ ಹೋಗುತ್ತಿದ್ದಾರೆ. ಹೊಸ ಹೊಸ ಕ್ರಿಕೆಟಿಗರ ಆಗಮನದಿಂದಾಗಿ ತಂಡದಲ್ಲಿ ಅವರ ಸ್ಥಾನ ಎನ್ನುವುದು ಕೊಂಚಮಟ್ಟಿಗೆ ಅಸಮತೋಲನದಿಂದ ಅಲುಗಾಡುತ್ತಿದೆ ಎಂದರೆ ತಪ್ಪಾಗಲಾರದು. ಅದರ ನಡುವೆಯೇ ಈಗ ನಡೆಯುತ್ತಿರುವ ಸರಣಿಯಿಂದ ವಿಶ್ರಾಂತಿ ಪಡೆದಿರುವ ಮಹಮ್ಮದ್ ಶಮಿ ಹೊಸ ಕಾರ್ ಒಂದನ್ನು ಖರೀದಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೇ ಶಮಿ ಅವರು ಜಾಗ್ವಾರ್ ನ ಎಫ್ ಸ್ಪೋರ್ಟ್ಸ್ ಶ್ರೇಣಿಯ ಕಾರನ್ನು ಖರೀದಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

shami 2 | ಹೊಚ್ಚ ಹೊಸ ಸ್ಪೋರ್ಟ್ಸ್ ಖರೀದಿ ಮಾಡಿದ ಶಮಿ: ಈ ಕಾರಿನ ಬೆಲೆ ಕೇಳಿದರೆ ನಿಜಕ್ಕೂ ದಂಗಾಗ್ತೀರಾ. ಎಷ್ಟು ಗೊತ್ತೇ??
ಹೊಚ್ಚ ಹೊಸ ಸ್ಪೋರ್ಟ್ಸ್ ಖರೀದಿ ಮಾಡಿದ ಶಮಿ: ಈ ಕಾರಿನ ಬೆಲೆ ಕೇಳಿದರೆ ನಿಜಕ್ಕೂ ದಂಗಾಗ್ತೀರಾ. ಎಷ್ಟು ಗೊತ್ತೇ?? 2

ಆದರೆ ಈಗ ಸುದ್ದಿ ಮಾಡುತ್ತಿರುವುದು ಈ ಕಾರಿನ ಬೆಲೆ. ನೂರರ ವೇಗವನ್ನು ತಲುಪಲು ಈ ಕಾರಿಗೆ ಕೇವಲ ಎಂಟು ಸೆಕೆಂಡ್ ಸಾಕು. ಇನ್ನು ಈ ಕಾರಿನ ಬೆಲೆ ಬರೋಬ್ಬರಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಎಂಬುದಾಗಿ ತಿಳಿದುಬಂದಿದೆ. ಈ ಕಾರಿನ ಫೋಟೋದೊಂದಿಗೆ ಶಮಿ ರವರ ಫೋಟೋ ಕೂಡ ವೈರಲ್ ಆಗುತ್ತಿದೆ ಎಲ್ಲರೂ ಕೂಡ ಅಭಿನಂದನೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ನೀವು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ಶಮಿ ಅವರಿಗೆ ಅಭಿನಂದನೆಗಳನ್ನು ಹೇಳಬಹುದು.

Comments are closed.