ಶ್ರಾವಣ ತಿಂಗಳಿನಲ್ಲಿ ಮಹಾದೇವನನ್ನು ಮೆಚ್ಚಿಸಲು ಈ ಮೂರು ಸಿಹಿ ತಿಂಡಿಗಳನ್ನು ಅರ್ಪಿಸಿ: ಎಲ್ಲಾ ಕಷ್ಟ ದೂರವಾಗುವವು. ಯಾವ್ಯಾವು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಶ್ರಾವಣ ಮಾಸ ಪ್ರಾರಂಭವಾಗಿದೆ. ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ತಿಂಗಳು ಎಂದು ಹಾಗೂ ಶಿವನ ಆರಾಧನೆಗೆ ಸಮರ್ಪಿತವಾದ ತಿಂಗಳು ಎಂಬುದಾಗಿ ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ. ಹೀಗಾಗಿ ಈ ತಿಂಗಳಿನಲ್ಲಿ ಶಿವನನ್ನು ಒಲಿಸಿಕೊಳ್ಳಲು ನಾನಾ ಬಗೆಯ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಮಹಾಪರ ಶಿವನಿಗೆ ಈ ಮೂರು ಸಿಹಿ ತಿಂಡಿಗಳನ್ನು ಸಮರ್ಪಿಸಿ ಪೂಜೆ ಮಾಡಿದರೆ ಖಂಡಿತವಾಗಿ ಆತನ ಕೃಪಾಕಟಾಕ್ಷದಿಂದ ಹಾಗೆ ಮಾಡುವವರ ಜೀವನ ಅದೃಷ್ಟ ಮಯವಾಗಿರುತ್ತದೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ದರೆ ಆ ಮೂರು ಸಿಹಿ ಖಾದ್ಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಾಲ್ಪುವಾ; ಶಿವನ ತಿಂಗಳಾಗಿರುವ ಶ್ರಾವಣ ಮಾಸದಲ್ಲಿ ಆತನ ಪೂಜೆ ಜೊತೆಗೆ ಆತನ ಆರಾಧನೆಯ ಸಂದರ್ಭದಲ್ಲಿ ಮಾಲ್ಪುವಾ ವನ್ನು ಕೂಡ ಆತನಿಗೆ ನೈವೇದ್ಯದ ರೀತಿಯಲ್ಲಿ ಅರ್ಪಿಸಿ ಪೂಜೆಯನ್ನು ಮಾಡಬೇಕು ಪುಣ್ಯದ ಫಲ ಸಂಪೂರ್ಣವಾಗಿ ದೊರೆಯುತ್ತದೆ.

Shiva | ಶ್ರಾವಣ ತಿಂಗಳಿನಲ್ಲಿ ಮಹಾದೇವನನ್ನು ಮೆಚ್ಚಿಸಲು ಈ ಮೂರು ಸಿಹಿ ತಿಂಡಿಗಳನ್ನು ಅರ್ಪಿಸಿ: ಎಲ್ಲಾ ಕಷ್ಟ ದೂರವಾಗುವವು. ಯಾವ್ಯಾವು ಗೊತ್ತೇ?
ಶ್ರಾವಣ ತಿಂಗಳಿನಲ್ಲಿ ಮಹಾದೇವನನ್ನು ಮೆಚ್ಚಿಸಲು ಈ ಮೂರು ಸಿಹಿ ತಿಂಡಿಗಳನ್ನು ಅರ್ಪಿಸಿ: ಎಲ್ಲಾ ಕಷ್ಟ ದೂರವಾಗುವವು. ಯಾವ್ಯಾವು ಗೊತ್ತೇ? 2

ಲಸ್ಸಿ; ಮೊಸರಿಗೆ ಸಕ್ಕರೆಯನ್ನು ಸೇರಿಸಿ ತಯಾರುಮಾಡುವ ಪಾನೀಯವೆ ಲಸ್ಸಿ. ಶ್ರಾವಣ ಮಾಸದ ಸಂದರ್ಭದಲ್ಲಿ ಲಸ್ಸಿಯನ್ನು ಮಹಾಭೋಲೆನಾಥನಿಗೆ ಅರ್ಪಿಸಿದರೆ ಆತನ ಕೃಪೆಗೆ ಪಾತ್ರರಾಗುವುದು ಸುಲಭ ಎಂಬುದಾಗಿ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಶ್ರಾವಣ ಮಾಸದ ಸಂದರ್ಭದಲ್ಲಿ ನೀವು ಕೂಡ ಈ ವಿಧಾನವನ್ನು ಪ್ರಯೋಗಿಸಿ.

ಶ್ಯಾವಿಗೆ; ಶ್ರಾವಣ ಮಾಸದಲ್ಲಿ ಶಿವನನ್ನು ಮೆಚ್ಚಿಸಲು ಶ್ಯಾವಿಗೆಯ ನೈವೇದ್ಯ ಹೊರತು ಬೇರೆ ಯಾವುದೇ ಅತ್ಯುತ್ತಮ ವಸ್ತುಗಳು ಸಿಗುವುದಿಲ್ಲ ಎಂದು ಹೇಳಬಹುದು. ಈ ಸಂದರ್ಭದಲ್ಲಿ ಒಣ ಹಣ್ಣುಗಳನ್ನು ಹಾಗೂ ಕಡಬುಗಳನ್ನು ಕೂಡ ನೈವೇದ್ಯವಾಗಿರಿಸಿ ಅವುಗಳನ್ನು ಮತ್ತೆ ಪ್ರಸಾದದ ರೂಪದಲ್ಲಿ ಸ್ವೀಕರಿಸಬಹುದು. ಇವುಗಳನ್ನು ಅರ್ಪಿಸಿದರೆ ಶ್ರಾವಣ ಮಾಸದಲ್ಲಿ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.

Comments are closed.