ಶ್ರೇಯಸ್ ಭರ್ಜರಿ ಫಾರ್ಮ್ ಕಂಡು ಕೊಹ್ಲಿ ವಾಪಾಸ್ ಬಂದರೆ ಹೀಗೆ ಮಾಡಿ ಎಂದು ಸಲಹೆ ನೀಡಿದ ಸುನೀಲ್ ಗವಾಸ್ಕರ್. ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ20 ಸರಣಿಗಳನ್ನು , ಘಟಾನುಘಟಿ ಆಟಗಾರರ ಕೊರತೆಯ ನಡುವೆಯೂ ಕ್ಲೀನ್ ಸ್ವೀಪ್ ಮಾಡಿದ್ದು ಈಗ ನೀರಿಕ್ಷೆಗಳ ಮಹಾಪೂರವನ್ನೇ ತಂಡದ ಮೇಲೆ ಹರಿಸಿದೆ. ಅದರಲ್ಲೂ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಶ್ರೇಯಸ್ ಅಯ್ಯರ್ ಮೂರು ಪಂದ್ಯಗಳಿಂದ ಒಟ್ಟು ೨೧೪ ರನ್ ಗಳಿಸಿ, ಮೂರು ಪಂದ್ಯಗಳಲ್ಲಿ ಔಟಾಗದೇ ಉಳಿದರು.

ಇದು ಭವಿಷ್ಯದ ಭಾರತ ತಂಡದ ಮೂರನೇ ಕ್ರಮಾಂಕವನ್ನು ಶ್ರೇಯಸ್ ಅಯ್ಯರ್ ಯಶಸ್ವಿಯಾಗಿ ತುಂಬುತ್ತಾರೆ ಎಂಬ ಭರವಸೆಯನ್ನು ತಂಡದ ಮ್ಯಾನೇಜ್ ಮೆಂಟ್ ಗೆ ಮೂಡಿಸಿದ್ದಾರೆ. ಆದರೇ ಕೊಹ್ಲಿ ತಂಡಕ್ಕೆ ಮರಳಿದರೇ ಆಗ ಶ್ರೇಯಸ್ ಅಯ್ಯರ್ ಯಾವ ಜಾಗದಲ್ಲಿ ಆಡುವುದು ಎಂಬ ಪ್ರಶ್ನೆಗೆ ಹಾಗೂ ತಂಡದ ಸಂಯೋಜನೆ ಬಗ್ಗೆ ಭಾರತ ತಂಡದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಬನ್ನಿ ಆ ಸಲಹೆಗಳು ಯಾವುವು ಎಂದು ತಿಳಿಯೋಣ.

kohli rohith shreyas iyer 1 | ಶ್ರೇಯಸ್ ಭರ್ಜರಿ ಫಾರ್ಮ್ ಕಂಡು ಕೊಹ್ಲಿ ವಾಪಾಸ್ ಬಂದರೆ ಹೀಗೆ ಮಾಡಿ ಎಂದು ಸಲಹೆ ನೀಡಿದ ಸುನೀಲ್ ಗವಾಸ್ಕರ್. ಏನಂತೆ ಗೊತ್ತೇ??
ಶ್ರೇಯಸ್ ಭರ್ಜರಿ ಫಾರ್ಮ್ ಕಂಡು ಕೊಹ್ಲಿ ವಾಪಾಸ್ ಬಂದರೆ ಹೀಗೆ ಮಾಡಿ ಎಂದು ಸಲಹೆ ನೀಡಿದ ಸುನೀಲ್ ಗವಾಸ್ಕರ್. ಏನಂತೆ ಗೊತ್ತೇ?? 2

ಸುನಿಲ್ ಗವಾಸ್ಕರ್ ಪ್ರಕಾರ ರೋಹಿತ್ ಹಾಗೂ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ. ಆಗ ವಿರಾಟ್ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಉತ್ತಮ. ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ಆಡಲಿ. ಇನ್ನು ಆರನೇ ಕ್ರಮಾಂಕದಲ್ಲಿ ಪಾಕೆಟ್ ಡೈನಮೋ ರಿಷಭ್ ಪಂತ್ ಆಡಲಿ. ಆಗ ಭಾರತ ತಜ್ಞ ಆರು ಬ್ಯಾಟ್ಸ್ಮನ್ ಗಳ ಜೊತೆ ಕಣಕ್ಕಿಳಿದ ಹಾಗೆ ಆಗುತ್ತದೆ. ಆಗ ಬೇಕಾದರೇ ಬೌಲಿಂಗ್ ಜೊತೆ ಬ್ಯಾಟಿಂಗ್ ಸಹ ಮಾಡುತ್ತಾರೆ ಎಂಬ ಕಾರಣದಿಂದ ತಂಡದಲ್ಲಿ ಸ್ಥಾನ ಪಡೆಯುವ ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್, ವೆಂಕಟೇಶ್ ಅಯ್ಯರ್ ರಂತಹವರನ್ನು ತಂಡದ ಆಯ್ಕೆಯಿಂದ ಕೈ ಬಿಡಬಹುದು.ತಜ್ಞ ಐವರು ಬೌಲರ್ ಗಳನ್ನು ಕಣಕ್ಕಿಳಿಸಬಹುದು.ಆಗ ಎದುರಾಳಿ ತಂಡವನ್ನು ಆಲೌಟ್ ಮಾಡುವ ಸಾಮರ್ಥ್ಯವುಳ್ಳ ಬೌಲಿಂಗ್ ಅಟ್ಯಾಕ್ ನಿಮ್ಮ ಬಳಿ ಇದ್ದ ಹಾಗೆ ಆಗುತ್ತದೆ. ಆಗ ಸುಲಭವಾಗಿ ಪಂದ್ಯಗಳನ್ನು ಗೆಲ್ಲಬಹುದು ಎಂದು ಹೇಳಿದ್ದಾರೆ. ಸುನಿಲ್ ಗವಾಸ್ಕರ್ ರವರ ಈ ಸಲಹೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments are closed.