ಪತಿ ಹೇಳಿದಂತೆ ಎಲ್ಲಾ ಮಾಡಿದರು, ಆದರೆ ವರಮಹಾಲಕ್ಷ್ಮಿ ಹಬ್ಬದ ದಿನ ನಡೆದೇ ಹೋಯಿತು ಕಹಿ ಘಟನೆ, ಯಾರು ಈ ಕೆಲಸ ಮಾಡಲೇ ಬೇಡಿ.

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಎರಡು ಮನಸ್ಸುಗಳ ನಡುವಿನ ಮಿಲನದ ಬಾಂಧವ್ಯ. ಒಂದು ಹೆಣ್ಣು ಮಗಳು ತನ್ನ ಮನೆಯಿಂದ ಒಬ್ಬ ಗಂಡಿನ ಮನೆಗೆ ಹೋಗುತ್ತಾಳೆ ಎಂದರೆ ಆತ ಮುಂದಿನ ಜೀವನದಲ್ಲಿ ನನ್ನ ಬೆಂಬಲ ವಾಗಿರುತ್ತಾನೆ ಹಾಗೂ ನನ್ನ ಭವಿಷ್ಯದ ಒಡೆಯ ನಾಗಿರುತ್ತಾನೆ ಎಂಬ ನಂಬಿಕೆ ಮೇಲೆ ಹೋಗುತ್ತಾರೆ. ಆದರೆ ಆರಂಭಿಕ ಮೊದಲ ದಿನದಿಂದಲೇ ಹುಸಿಯಾದಾಗ ಆಗುವ ಬೇಸರ ಅಷ್ಟಿಷ್ಟಲ್ಲ.

ಹೌದು ಸ್ನೇಹಿತರೆ ನಾವು ಹೇಳಹೊರಟಿರುವ ವಿಷಯ ಕೂಡ ಇದಕ್ಕೆ ಸಂಬಂಧ ಪಡುತ್ತದೆ. 2014 ರಲ್ಲಿ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನ ನಿವಾಸಿ ಶ್ರುತಿ ಎನ್ನುವವರು ಮಿಥುನ್ ರೆಡ್ಡಿ ಎಂಬುವವರನ್ನು ಮದುವೆಯಾಗಿದ್ದರು. ತಮ್ಮ ಮಗಳ ಸುಖವೇ ತಮ್ಮ ಸುಖವೆಂದು ಮಗಳಿಗೆ ಸಾಕಷ್ಟು ಚಿನ್ನ ಹಾಗೂ ಹಣವನ್ನು ಕೂಡ ಕಳುಹಿಸಿಕೊಟ್ಟಿದ್ದರು. ಆದರೆ ಶ್ರುತಿ ಅವರು ತಮ್ಮ ಗಂಡ ಮಿಥುನ್ ರೆಡ್ಡಿ ಅವರ ಮನೆಗೆ ಹೋದ ಮಾರನೇ ದಿನದಿಂದಲೇ ಅವರಿಗೆ ದುಡ್ಡು ತೆಗೆದುಕೊಂಡು ಬಾ ಎಂಬ ಕಾಟ ಪ್ರಾರಂಭವಾಯಿತು. ಅವರ ಹೇಳಿದಾಗಲೆಲ್ಲ ಶ್ರುತಿ ಅವರು ತಮ್ಮ ಮನೆಗೆ ಹೋಗಿ ಹಣವನ್ನು ತಂದು ಇವರಿಗೆ ನೀಡುತ್ತಿದ್ದರು. ಆದರೆ ಶೃತಿಯವರ ಗಂಡ ಮಿಥುನ್ ರೆಡ್ಡಿ ಹಾಗೂ ಅತ್ತೆ ಇಬ್ಬರು ಕೂಡ ಸಾಕಷ್ಟು ಧನ ದಾಹಿಗಳು ಆಗಿದ್ದರು. ಶ್ರುತಿ ಅವರು ತಮ್ಮ ತವರು ಮನೆಯಿಂದ ಎಷ್ಟೇ ದುಡ್ಡು ತೆಗೆದುಕೊಂಡರು ಬಂದರೂ ಕೂಡ ಇನ್ನಷ್ಟು ಬೇಕೆಂಬ ಹಂಬಲದಲ್ಲಿದ್ದರು. ಹಾಗಾಗಿ ಅವಳ ಗಂಡ ಕೆಲಸ ಕೂಡಮಾಡಿದೆ ಬಿಟ್ಟಿಯಾಗಿ ಕೂತಿದ್ದ.

ಇನ್ನು ಇದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತೊಮ್ಮೆ ಶ್ರುತಿ ಅವರನ್ನು ಅವರ ತವರು ಮನೆಗೆ ಹೋಗಿ ಒಂದು ಲಕ್ಷ ರೂಪಾಯಿಯನ್ನು ತೆಗೆದುಕೊಂಡು ಬಾ ಎಂದು ಕರೆದು ಕಳಿಸುತ್ತಾರೆ. ಅದೇ ರೀತಿ ತವರು ಮನೆಗೆ ಬಂದಂತಹ ಶ್ರುತಿ 35 ಸಾವಿರ ರೂಪಾಯಿಗಳನ್ನು ತಂದುಕೊಡುತ್ತಾರೆ. ಆದರೆ ಮತ್ತೊಮ್ಮೆ ಉಳಿದ 65 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಬಾ ಎಂದು ಸೋಮವಾರಕ್ಕೆ ತರಲು ಹೇಳುತ್ತಾರೆ. ಇದರಿಂದ ಬಹಳಷ್ಟು ನೊಂದುಕೊಳ್ಳುವ ಶೃತಿಯವರು ಇನ್ನೇನು ದಾರಿಕಾಣದೆ ತಮ್ಮ ಜೀವನವನ್ನು ಕೊನೆಗಾಣಿಸಿ ಕೊಳ್ಳುತ್ತಾರೆ. ನೋಡಿದ್ರೆ ಸ್ನೇಹಿತರೆ ಗಂಡಿನ ಹಿನ್ನೆಲೆಯನ್ನು ತಿಳಿಯದೆ ಮದುವೆಯಾಗಿ ಯಾವ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ ಎಂದು.

Comments are closed.