ಫೆಮಿನಾ ಮಿಸ್ ಇಂಡಿಯಾ ಕಿರೀಟ ಗೆದ್ದಿರುವ ಕನ್ನಡತಿ: ಯಾರು ಈ ಉಡುಪಿ ಮೂಲದ ಬೆಡಗಿ: ಹಿನ್ನೆಲೆಯೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಈ ಬಾರಿ ಫೆಮಿನಾ ಮಿಸ್ ಇಂಡಿಯಾ 2022ರ ಪ್ರಶಸ್ತಿಯನ್ನು ನಮ್ಮ ಕರ್ನಾಟಕದ ಬೆಡಗಿ ಸಿನಿ ಶೆಟ್ಟಿ ರವರು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದಿರುವ ಸ್ಪರ್ಧೆಯಲ್ಲಿ ಮುಡಿಗೇರಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಕನ್ನಡಿಗನಿಗೂ ಕೂಡ ಇದೊಂದು ಹೆಮ್ಮೆಯ ವಿಷಯ ಎಂದರೆ ಅತಿಶಯೋಕ್ತಿಯಲ್ಲ. ಇನ್ನು ಭಾರತದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಿರುವ ಈ ಬೆಡಗಿ ಸಿನಿ ಶೆಟ್ಟಿ ಯಾರು ಹಾಗೂ ಅವರ ಹಿನ್ನೆಲೆ ಏನು ಎಂಬ ಕುತೂಹಲ ಎಲ್ಲರಲ್ಲಿಯೂ ಕಾಡುತ್ತಿರಬಹುದು. ಆ ಎಲ್ಲಾ ಗೊಂದಲಗಳನ್ನು ನಾವು ಪರಿಹರಿಸುತ್ತೇವೆ ಬನ್ನಿ ಸಿನಿ ಶೆಟ್ಟಿ ಅವರ ಕುರಿತಂತೆ ಸಮಗ್ರವಾಗಿ ತಿಳಿಯೋಣ.

21 ವರ್ಷದ ಬೆಡಗಿ ಸಿನಿ ಶೆಟ್ಟಿ ರವರು ಕಾಪು ತಾಲೂಕಿನ ಇನ್ನಂಜೆಯವರು. 31 ಸ್ಪರ್ಧಿಗಳನ್ನು ಹಿಂದಿಕ್ಕಿ ಈ ಬಾರಿಯ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದುಕೊಂಡಿದ್ದಾರೆ. ಕರ್ನಾಟಕ ಮೂಲದ ಇವರು ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದಾರೆ. ಅಕೌಂಟಿಂಗ್ ಹಾಗೂ ಫೈನಾನ್ಸ್ ನಲ್ಲಿ ಪದವಿ ಪಡೆದಿರುವ ಇವರು ಚಾರ್ಟರ್ಡ್ ಫೈನಾನ್ಶಿಯಲ್ ಕೋರ್ಸ್ ಅನ್ನು ಅಧ್ಯಯನ ಮಾಡುತ್ತಿದ್ದಾರೆ. ತಮ್ಮ 4ನೇ ವಯಸ್ಸಿನಿಂದಲೇ ನೃತ್ಯವನ್ನು ಕಲಿಯುತ್ತಾ ಬಂದಿರುವ ಸಿನಿ ಶೆಟ್ಟಿ 14ನೇ ವಯಸ್ಸಿಗೆಲ್ಲಾ ನೃತ್ಯ ಪ್ರದರ್ಶನವನ್ನು ಹಲವಾರು ವೇದಿಕೆಯಲ್ಲಿ ನೀಡಿದ್ದಾರೆ.

sini | ಫೆಮಿನಾ ಮಿಸ್ ಇಂಡಿಯಾ ಕಿರೀಟ ಗೆದ್ದಿರುವ ಕನ್ನಡತಿ: ಯಾರು ಈ ಉಡುಪಿ ಮೂಲದ ಬೆಡಗಿ: ಹಿನ್ನೆಲೆಯೇನು ಗೊತ್ತೇ??
ಫೆಮಿನಾ ಮಿಸ್ ಇಂಡಿಯಾ ಕಿರೀಟ ಗೆದ್ದಿರುವ ಕನ್ನಡತಿ: ಯಾರು ಈ ಉಡುಪಿ ಮೂಲದ ಬೆಡಗಿ: ಹಿನ್ನೆಲೆಯೇನು ಗೊತ್ತೇ?? 2

ಮುಂದಿನ ದಿನಗಳಲ್ಲಿ ಸಿನಿ ಶೆಟ್ಟಿ ರವರು ಚಿತ್ರರಂಗದಲ್ಲಿ ಕಾಣಿಸಿಕೊಂಡರೂ ಅಚ್ಚರಿ ಪಡಬೇಕಾಗಿಲ್ಲ. ಇನ್ನು ಈ ಬಾರಿಯ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ತೀರ್ಪು ಗಾರರಾಗಿ ಮಲೈಕಾ ಅರೋರ ನೇಹಾ ಧೂಪಿಯಾ ಡಿನೋ ಮೋರಿಯಾ ರಾಹುಲ್ ಖನ್ನಾ ರೋಹಿತ್ ಗಾಂಧಿ ಹಾಗೂ ಶಮಕ್ ಡಾಬರ್ ರವು ಉಪಸ್ಥಿತರಿದ್ದರು. ಮೊದಲ ಸ್ಥಾನವನ್ನು .ಸಿನಿ ಶೆಟ್ಟಿ ರವರು ಗೆದ್ದರೆ 2 ಹಾಗೂ 3 ನೇ ಸ್ಥಾನಗಳನ್ನು ಕ್ರಮವಾಗಿ ರೂಬಲ್ ಶೇಖಾವತ್ ಹಾಗೂ ಶಿನಾತಾ ಚೌಹಾಣ್ ರವರು ಗೆದ್ದಿದ್ದಾರೆ.

Comments are closed.