ಸತತ ವೈಫಲ್ಯ ಅನುಭವಿಸುತ್ತಿರುವ ಸಿರಾಜ್ ಹೊರಗಿಟ್ಟು, ಬಲಾಢ್ಯ ಆಟಗಾರನನ್ನು ಕರೆತರಲಿದೆಯೇ ಆರ್ಸಿಬಿ. ಯಾರು ಗೊತ್ತೇ ಆ ವಿಕೆಟ್ ಪಡೆಯುವ ಬೌಲರ್??

ನಮಸ್ಕಾರ ಸ್ನೇಹಿತರೇ ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲಾರ್ಧದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿತು ಆದರೆ ಎರಡನೆಯ ಚರಣದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಆದರೆ ಮೊನ್ನೆಯಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರೋಚಕವಾಗಿ ಗೆದ್ದು ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಇನ್ನು ಮುಂದಿನ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೇ 8ರಂದು ಎದುರಿಸಲಿದೆ. ನಮಗೆ ಈಗಾಗಲೇ ತಿಳಿದಿರುವಂತೆ ಈ ಹಿಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ತಂಡದ ಎದುರು 68 ರನ್ನುಗಳಿಗೆ ಆಲೌಟ್ ಆಗಿತ್ತು.

ಹೀಗಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಹಳಷ್ಟು ಎಚ್ಚರಿಕೆಯಿಂದ ಆಡಬೇಕಾಗಿದೆ. ಇನ್ನೂ ಕೆಲವೊಂದು ಬದಲಾವಣೆಗಳು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಗಬೇಕಾಗಿದೆ. ಯಾಕೆಂದರೆ ಬೆಂಗಳೂರು ತಂಡದ ಪ್ರಮುಖ ಬೌಲರ್ ಆಗಿ ಕಾಣಿಸಿಕೊಂಡಿದ್ದ ಮಹಮ್ಮದ್ ಸಿರಾಜ್ ಅವರು ಈ ಬಾರಿಯ ಐಪಿಎಲ್ ನಲ್ಲಿ ಪವರ್ ಪ್ಲೇ ಓವರ್ಗಳಲ್ಲಿ ಯಾವುದೇ ವಿಕೆಟನ್ನು ಕೀಳಲು ವಿಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ. ಹೀಗಾಗಿ ಅವರ ಬದಲಿಗೆ ಮತ್ತೊಬ್ಬ ಕಿಲಾಡಿ ತಂಡಕ್ಕೆ ಎಂಟ್ರಿ ನೀಡಲಿದ್ದಾರೆ ಎನ್ನುವ ಸುದ್ದಿಗಳು ಹೊರಬೀಳುತ್ತಿವೆ.

ಹೌದು ಗೆಳೆಯರೇ ಅವರು ಇನ್ಯಾರು ಅಲ್ಲ ಮಾಜಿ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರನಾಗಿರುವ ಸಿದ್ದಾರ್ಥ್ ಕೌಲ್. ಹೌದು ಗೆಳೆಯರೆ ಸಿದ್ದಾರ್ಥ್ ಕೌರವರನ್ನು ಈ ಬಾರಿ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಂಡುಕೊಂಡಿತ್ತು. ಈಗಾಗಲೇ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿರುವ ಅನುಭವವನ್ನು ಹೊಂದಿರುವ ಸಿದ್ಧಾರ್ಥ್ ಕೌಲ್ ರವರನ್ನು ಈ ಪಂದ್ಯದಲ್ಲಿ ಆಡಿಸಿ ಮೊಹಮ್ಮದ್ ಸಿರಾಜ್ ರವರಿಗೆ ವಿಶ್ರಾಂತಿ ನೀಡಬಹುದು ಎನ್ನುವುದಾಗಿ ಕೇಳಿಬರುತ್ತಿದೆ. ಬೌಲಿಂಗ್ನಲ್ಲಿ ಕೂಡ ಸಾಕಷ್ಟು ವೇರಿಯೇಶನ್ ಗಳನ್ನು ಹೊಂದಿರುವ ಸಿದ್ಧಾರ್ಥ್ ಖಂಡಿತವಾಗಿ ತಂಡದ ಗೆಲುವಿಗೆ ಪ್ರಮುಖ ಆಟಗಾರನಾಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕುರಿತಂತೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.