ತಾಯಿ ಸಮಾನ ಎನ್ನುವ ಅಣ್ಣನ ಹೆಂಡತಿ ಅಂದರೆ ಅತ್ತಿಗೆಯನ್ನೇ ಮದುವೆಯಾದ ತಮ್ಮ, ಕಾರಣವೇನಂತೆ ಗೊತ್ತೇ?? ಸರೀನಾ ತಪ್ಪಾ ಎಂದು ಚರ್ಚೆ.

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಸಂಬಂಧಗಳು ಎನ್ನುವುದು ಹುಟ್ಟಿನಿಂದಲೂ ಕೂಡ ಅವರನ್ನು ಅಂಟಿಕೊಂಡು ಬಂದಿರುತ್ತದೆ. ಇನ್ನು ಬೆಳೆಯುತ್ತ ಮದುವೆಯಾದ ಹೋದಮೇಲೆ ಕೂಡ ಹೊಸ ಹೊಸ ಸಂಬಂಧಗಳು ಅವರ ಜೀವನವನ್ನು ಸೇರಿಕೊಳ್ಳುತ್ತದೆ. ಸಂಬಂಧ ಗಳಿಂದಲೇ ಈ ಪ್ರಪಂಚದಲ್ಲಿ ನಾವು ಪ್ರೀತಿ ಹಾಗೂ ಬಾಂಧವ್ಯಗಳನ್ನು ಅರಿತುಕೊಳ್ಳಲು ಸಾಧ್ಯವಾಗಿದೆ ಹಾಗೂ ಅವುಗಳ ಅರ್ಥವನ್ನು ಸಂಪೂರ್ಣವಾಗಿ ಮನದಟ್ಟು ಮಾಡಿಕೊಳ್ಳಲು ಸಾಧ್ಯವಾಗಿದೆ.

ಬಾಂಧವ್ಯ ಗಳಿಲ್ಲದ ಜೀವನ ಎನ್ನುವುದು ನೀರಸವಾಗಿ ಇರುತ್ತದೆ. ಆದರೆ ಇಂದು ನಾವು ಹೇಳಲು ಹೊರಟಿರುವ ಕಥೆಯಲ್ಲಿ ಒಬ್ಬ ತನ್ನ ಅಣ್ಣನ ಹೆಂಡತಿಯನ್ನು ಮದುವೆಯಾಗಿದ್ದಾನೆ. ಕೇಳಲು ಇದು ವಿಚಿತ್ರವಾಗಿದೆ ಎಂದು ಅನಿಸಿದರೂ ಕೂಡ ಇದರ ಸಂಪೂರ್ಣ ಕಥೆಯನ್ನು ಕೇಳಿದ ಮೇಲೆ ನೀವು ಕೂಡ ಬೇರೆ ರೀತಿ ರಿಯಾಕ್ಟ್ ಮಾಡುತ್ತೀರಿ.

anna attige 1 | ತಾಯಿ ಸಮಾನ ಎನ್ನುವ ಅಣ್ಣನ ಹೆಂಡತಿ ಅಂದರೆ ಅತ್ತಿಗೆಯನ್ನೇ ಮದುವೆಯಾದ ತಮ್ಮ, ಕಾರಣವೇನಂತೆ ಗೊತ್ತೇ?? ಸರೀನಾ ತಪ್ಪಾ ಎಂದು ಚರ್ಚೆ.
ತಾಯಿ ಸಮಾನ ಎನ್ನುವ ಅಣ್ಣನ ಹೆಂಡತಿ ಅಂದರೆ ಅತ್ತಿಗೆಯನ್ನೇ ಮದುವೆಯಾದ ತಮ್ಮ, ಕಾರಣವೇನಂತೆ ಗೊತ್ತೇ?? ಸರೀನಾ ತಪ್ಪಾ ಎಂದು ಚರ್ಚೆ. 3

ಹೌದು ಗೆಳೆಯರೇ ತನ್ನ ಅಣ್ಣನ ಹೆಂಡತಿಯನ್ನು ಮದುವೆಯಾಗಿರುವ ಭೂಪನ ಹೆಸರು ಸಮಾಧಾನ್ ಎಂದು. ಈತನ ಅಣ್ಣನ ಹೆಸರು ನೀಲೇಶ್ ಹಾಗೂ ಅಣ್ಣನ ಹೆಂಡತಿಯ ಹೆಸರು ಪೂನಂ ಎಂದು. ಮೇಲೆ ಹಾಗೂ ಪೂನಂ ಇಬ್ಬರು ಕೂಡ ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಇನ್ನು ಇವರಿಬ್ಬರ ಜೀವನದಲ್ಲಿ ಪುಟ್ಟ ಕಂದಮ್ಮನ ಆಗಮನ ಕೂಡ ಆಗಿತ್ತು. ಇವರ ಸಂಸಾರ ಎನ್ನುವುದು ಸುಖ ಸಂಸಾರವಾಗಿ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಿತ್ತು. ಆದರೆ ಕಳೆದ ವರ್ಷದ ಸಂದರ್ಭದಲ್ಲಿ ಬಂದಂತಹ ಮಹಾಮಾರಿ ಕಾರಣದಿಂದಾಗಿ ನೀಲೇಶ್ ಮರಣವನ್ನು ಹೊಂದುತ್ತಾರೆ.

ಕೇವಲ 23 ವರ್ಷದ ವಯಸ್ಸಿನಲ್ಲಿಯೇ ಪೂನಂ ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾಗುತ್ತಾಳೆ. ನಿಜಕ್ಕೂ ಕೂಡ ಇದು ಆಕೆಯ ಜೀವನಕ್ಕೆ ಬಂದಂತಹ ದೊಡ್ಡ ಕಷ್ಟ ಎಂದರೆ ತಪ್ಪಾಗಲಾರದು. ಯಾರೇ ಆದರೂ ಕೂಡ ಆಕೆಯ ಸ್ಥಿತಿಯನ್ನು ನೆನೆದು ಕಣ್ಣೀರು ಹಾಕುವುದರಲ್ಲಿ ಅನುಮಾನವಿಲ್ಲ. ಇದನ್ನೆಲ್ಲ ನೋಡಿದ ನೀಲೇಶ್ ನ ತಮ್ಮ ಸಮಾಧಾನ್ ತನ್ನ ಅತ್ತಿಗೆಯನ್ನೇ ಮದುವೆಯಾಗುವ ನಿರ್ಧಾರಕ್ಕೆ ಬಂದು ಮದುವೆಯಾಗುತ್ತಾನೆ. ಈ ಮೂಲಕ ಅತ್ತಿಗೆಗೆ ಅಂದರೆ ಪೂನಂ ಈಗ ಅವನ ಹೆಂಡತಿಗೆ ಆಧಾರವಾಗಿ ನಿಲ್ಲುವ ನಿರ್ಧಾರಕ್ಕೆ ಬರುತ್ತಾನೆ. ಕೇವಲ ಇಷ್ಟು ಮಾತ್ರವಲ್ಲದೆ ಆ ಮಗುವಿಗೆ ಉತ್ತಮ ಭವಿಷ್ಯವನ್ನು ಕೂಡ ರೂಪಿಸುವ ಕನಸು ಕಾಣುತ್ತಾನೆ.

ಎರಡು ಕುಟುಂಬಗಳು ಕೂಡ ಇವರಿಬ್ಬರ ಮದುವೆಗೆ ಒಪ್ಪಿಗೆ ನೀಡುತ್ತಾರೆ. ಸಮಾಧಾನ್ ಹಾಗೂ ಪೂನಂ ಇಬ್ಬರೂ ಕೂಡ ಮಹಾರಾಷ್ಟ್ರದ ತಮ್ಮ ಸ್ವ ಗ್ರಾಮದಲ್ಲಿ ಕುಟುಂಬಸ್ಥರು ಹಾಗೂ ಊರವರ ಮುಂದೆ ಶಾಸ್ತ್ರೋಕ್ತವಾಗಿ ಮದುವೆ ಆಗುತ್ತಾರೆ. ಕೆಲವರು ಮಾನವೀಯತೆ ಮೆರೆದು ಪೂನಂಳನ್ನು ಮದುವೆಯಾಗಿದ್ದಕ್ಕೆ ಸಮಾಧಾನ್ ಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇನ್ನು ಕೆಲವರು ಬೇರೆಯವರಿಗೆ ಆತ ಮದುವೆ ಮಾಡಿಸಿ ಕೊಡಬಹುದಾಗಿತ್ತು ಎಂಬುದಾಗಿ ಕೂಡ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

anna attige | ತಾಯಿ ಸಮಾನ ಎನ್ನುವ ಅಣ್ಣನ ಹೆಂಡತಿ ಅಂದರೆ ಅತ್ತಿಗೆಯನ್ನೇ ಮದುವೆಯಾದ ತಮ್ಮ, ಕಾರಣವೇನಂತೆ ಗೊತ್ತೇ?? ಸರೀನಾ ತಪ್ಪಾ ಎಂದು ಚರ್ಚೆ.
ತಾಯಿ ಸಮಾನ ಎನ್ನುವ ಅಣ್ಣನ ಹೆಂಡತಿ ಅಂದರೆ ಅತ್ತಿಗೆಯನ್ನೇ ಮದುವೆಯಾದ ತಮ್ಮ, ಕಾರಣವೇನಂತೆ ಗೊತ್ತೇ?? ಸರೀನಾ ತಪ್ಪಾ ಎಂದು ಚರ್ಚೆ. 4

ಅತ್ತಿಗೆ ತಾಯಿ ಸಮಾನ ಎನ್ನುತ್ತಾರೆ ಆಕೆಯನ್ನು ಮದುವೆಯಾಗಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದಾಗಿ ಕೆಲವರು ವಾದಿಸುತ್ತಾರೆ. ಆದರೆ ತನ್ನ ಅಣ್ಣನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವ ದೃಷ್ಟಿಯಿಂದ ತಾನೆ ಮದುವೆಯಾಗಿರುವುದು ನಿಜಕ್ಕೂ ಕೂಡ ಆತನ ಧೈರ್ಯವಂತ ನಿರ್ಧಾರವಾಗಿದೆ ಎಂದರೆ ತಪ್ಪಾಗಲಾರದು. ನಿಜವಾಗಿ ಹೇಳಬೇಕೆಂದರೆ ಈ ಸಮಾಜದಲ್ಲಿ ಪಾಪ-ಪುಣ್ಯ ಎಣಿಸಲು ಸಾಕಷ್ಟು ಜನ ಇರುತ್ತಾರೆ. ಆದರೆ ಆ ಸ್ಥಾನದಲ್ಲಿ ನಿಂತು ನಿಸ್ವಾರ್ಥದಿಂದ ಬೇರೆಯವರ ಕುರಿತಂತೆ ಯೋಚಿಸುವುದು ಮಾತ್ರವಲ್ಲದೆ ಕಾರ್ಯರೂಪಕ್ಕೆ ಕೂಡ ತರುವುದಕ್ಕೆ ಹೆಚ್ಚಿನ ಜನ ಸಿಗುವುದಿಲ್ಲ. ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.