ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಲೆಕ್ಕಾಚಾರವೂ ಉಲ್ಟಾ: ಪ್ರೇಮ ಪಕ್ಷಿಯಾಗಿದ್ದ ಸ್ಫೂರ್ತಿ ಗೌಡ ಮನೆಯಿಂದ ಹೊರಹೋಗಲು ಸಿದ್ದವಂತೆ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಗೆ ಒಮ್ಮೆ ಹೋದ ಮೇಲೆ ಎಲಿಮಿನೇಟ್ ಆಗುವ ತನಕ ಅಥವಾ ಕಾರ್ಯಕ್ರಮ ಮುಗಿಯುವ ತನಕ ಮನೆಯಿಂದ ಹೊರಬರಲು ಸಾಧ್ಯವಿಲ್ಲ. ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಕೂಡ ಆರಂಭದಲ್ಲೇ ಕೆಲವರಿಗೆ ಇಂತಹ ಯೋಚನೆಗಳು ಮನೆಯಿಂದ ಹೊರಬರುವ ಮನಸ್ಸು ಮಾಡುವಂತೆ ಮಾಡಿದೆ ಎನ್ನುವುದು ತಿಳಿದುಬಂದಿದೆ. ಹೌದು ನಾವು ಮಾತನಾಡುತ್ತಿರುವುದು ಸ್ಪೂರ್ತಿಗೌಡ ಅವರ ಕುರಿತಂತೆ. ಬಿಗ್ ಬಾಸ್ ಮನೆಯಲ್ಲಿ ಚರ್ಚೆಗೆ ಒಳಗಾಗುತ್ತಿರುವ ಸ್ಪರ್ಧಿಗಳಲ್ಲಿ ಸ್ಪೂರ್ತಿಗೌಡ ಕೂಡ ಒಬ್ಬರಾಗಿದ್ದಾರೆ.

ಈ ಬಾರಿ ಬಿಗ್ ಬಾಸ್ ಮನೆಯ ಒಳಗೆ ಬಂದಾದ ನಂತರ ಸ್ಪೂರ್ತಿ ಗೌಡ ಹಾಗೂ ರಾಕೇಶ್ ಅಡಿಗ ರವರ ನಡುವೆ ಏನೋ ನಡೆಯುತ್ತಿದೆ ಎಂಬುದಾಗಿ ಪ್ರೇಕ್ಷಕರು ಅಂದುಕೊಳ್ಳುವಂತಹ ಘಟನೆಗಳು ಕೂಡ ಹಲವಾರು ಬಾರಿ ನಡೆದಿದೆ. ಕಳೆದ ವಾರದ ನಾಮಿನೇಷನ್ ಪಟ್ಟಿಯಲ್ಲಿ ಕೂಡ ಅವರಿದ್ದರು ಈ ಬಾರಿ ನಾಮಿನೇಷನ್ ಪಟ್ಟಿಯಲ್ಲಿ ಕೂಡ ಸ್ಪೂರ್ತಿ ಗೌಡ ಅವರ ಹೆಸರಿದೆ. ಇತ್ತೀಚಿಗಷ್ಟೇ ಜಯಶ್ರೀ ಅವರ ಜೊತೆಗೆ ಕೂತು ಸ್ಪೂರ್ತಿಗೌಡ ಅವರು ಮಾತನಾಡುತ್ತಿರುವ ಸಂದರ್ಭದಲ್ಲಿ ಈ ವಿಚಾರ ಬರುತ್ತದೆ. ಈ ಬಾರಿ ಕಳಪೆ ಪ್ರದರ್ಶನದ ಅಪಕ್ಯಾತಿ ತಮ್ಮ ಮೇಲೆ ಬರುತ್ತದೆ ಎಂಬ ಕಾರಣಕ್ಕಾಗಿ ಮಾಡಿದ ತಪ್ಪಿಗೆ ಶಿಕ್ಷೆಯನ್ನು ನಾನು ಅನುಭವಿಸಲ್ಲ ಎಲ್ಲರೂ ನನ್ನನ್ನು ಕಳಪೆ ಪ್ರದರ್ಶನ ಎಂಬುದಾಗಿ ಜೈಲಿಗೆ ಕಳುಹಿಸಿದರೆ ನಾನು ಹೋಗಲ್ಲ ಎಂಬುದಾಗಿ ಹೇಳಿದ್ದರು.

sonu srinivas gowda spoorthi gowda | ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಲೆಕ್ಕಾಚಾರವೂ ಉಲ್ಟಾ: ಪ್ರೇಮ ಪಕ್ಷಿಯಾಗಿದ್ದ ಸ್ಫೂರ್ತಿ ಗೌಡ ಮನೆಯಿಂದ ಹೊರಹೋಗಲು ಸಿದ್ದವಂತೆ ಯಾಕೆ ಗೊತ್ತೇ??
ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಲೆಕ್ಕಾಚಾರವೂ ಉಲ್ಟಾ: ಪ್ರೇಮ ಪಕ್ಷಿಯಾಗಿದ್ದ ಸ್ಫೂರ್ತಿ ಗೌಡ ಮನೆಯಿಂದ ಹೊರಹೋಗಲು ಸಿದ್ದವಂತೆ ಯಾಕೆ ಗೊತ್ತೇ?? 2

ಅದಕ್ಕೆ ಜಯಶ್ರೀ ಅವರು ಕಳಪೆ ಎನ್ನುವುದು ಹೊರಗಿನವರು ಅಲ್ಲ ಮನೆಯವರೇ ಕೊಡುವಂತಹ ನಿರ್ಧಾರ ಒಮ್ಮೆ ನಿರ್ಧಾರ ಬಂದ ಮೇಲೆ ಹೊರಗೆ ಕೂರಲು ಸಾಧ್ಯವೇ ಇಲ್ಲ ಎಂಬುದಾಗಿ ಸ್ಪೂರ್ತಿ ಗೌಡ ಅವರಿಗೆ ಜಯಶ್ರೀ ಪ್ರತ್ಯುತ್ತರ ನೀಡುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಕಳೆಯುತ್ತಿದ್ದಂತೆ ನಾನು ಡೌನ್ ಫೀಲಿಂಗ್ ಆಗುತ್ತಿದ್ದೇನೆ ಮನೆಯಿಂದ ಹೊರ ಹೋಗಬೇಕು ಎನ್ನುವ ಫೀಲಿಂಗ್ ನನ್ನಲ್ಲಿ ಹೆಚ್ಚಾಗುತ್ತಿದೆ ಎಂಬುದಾಗಿ ಬೇಸರದಿಂದ ಸ್ಪೂರ್ತಿಗೌಡ ಉತ್ತರ ನೀಡಿದ್ದಾರೆ. ಮನೆಯಲ್ಲಿ ಎರಡು ವಾರವನ್ನು ಕಳೆದಿರುವ ಸ್ಪೂರ್ತಿಗೌಡ ಈ ಬಾರಿ ಕೂಡ ನಾಮಿನೇಟ್ ಆಗಿದ್ದು ಇದೇ ಕಾರಣಕ್ಕಾಗಿ ಅವರು ಮನೆಯಿಂದ ಹೊರಬಂದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ನಿಮ್ಮ ಪ್ರಕಾರ ಈ ಬಾರಿಯ ಎಲಿಮಿನೇಷನ್ ನಲ್ಲಿ ಯಾರು ಮನೆಯಿಂದ ಹೊರ ಬರಬಹುದು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.