ಯಾರಾದರೂ ಬಂದು ಕಾಲಿಗೆ ಬೀಳುತ್ತೇನೆ ಎಂದರು ಕೂಡ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ನೀಡಬೇಡಿ. ದುರದೃಷ್ಟ ಬೆನ್ನು ಹತ್ತುತ್ತದೆ. ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೆಲವರು ತಮಾಷೆಯಾಗಿ ಜೀವನ ಏನು ಎಂದರೆ ಕೊಟ್ಟು ತೆಗೆದುಕೊಳ್ಳುವುದರ ನಡುವೆ ಇರುವುದೇ ಜೀವನ ಎಂಬುದಾಗಿ ಹೇಳಿಬಿಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಕೊಡುವುದಾಗಲಿ ಅಥವಾ ಬೇರೆಯವರಿಂದ ಪಡೆದುಕೊಳ್ಳುವುದನ್ನಾಗಲಿ ಮಾಡಿದರೆ ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗಿ ನೀವು ಸಾಕಷ್ಟು ತಾಪತ್ರಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಿದ್ದರೆ ಆ ದುರದೃಷ್ಟಕರ ವಸ್ತುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಪೆನ್ನು ಮತ್ತು ಪೆನ್ಸಿಲ್; ಪೆನ್ನು ಹಾಗೂ ಪೆನ್ಸಿಲ್ ನಮ್ಮ ಒಳ್ಳೆಯ ಹಾಗೂ ಕೆಟ್ಟ ಕಾರ್ಯಗಳ ಲೆಕ್ಕಾಚಾರವನ್ನು ಬರೆದಿಡುವ ವಸ್ತು ಆಗಿರುವ ಕಾರಣದಿಂದಾಗಿ ಇದನ್ನು ನೀವು ಬೇರೆಯವರೊಂದಿಗೆ ಹಂಚಿಕೊಳ್ಳುವ ಮೂಲಕ ನಿಮ್ಮ ಅದೃಷ್ಟವೂ ಕೂಡ ವಿಭಜನೆ ಆಗುತ್ತದೆ. ಹೀಗಾಗಿ ಒಂದು ವೇಳೆ ನೀವು ಬೇರೆಯವರಿಗೆ ಇವೆರಡು ವಸ್ತುಗಳನ್ನು ನೀಡಿದ್ದರೆ ಅವರಿಂದ ವಾಪಸ್ ತೆಗೆದುಕೊಳ್ಳಿ.

lakshmi horo 4 | ಯಾರಾದರೂ ಬಂದು ಕಾಲಿಗೆ ಬೀಳುತ್ತೇನೆ ಎಂದರು ಕೂಡ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ನೀಡಬೇಡಿ. ದುರದೃಷ್ಟ ಬೆನ್ನು ಹತ್ತುತ್ತದೆ. ಯಾವ್ಯಾವು ಗೊತ್ತೇ??
ಯಾರಾದರೂ ಬಂದು ಕಾಲಿಗೆ ಬೀಳುತ್ತೇನೆ ಎಂದರು ಕೂಡ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ನೀಡಬೇಡಿ. ದುರದೃಷ್ಟ ಬೆನ್ನು ಹತ್ತುತ್ತದೆ. ಯಾವ್ಯಾವು ಗೊತ್ತೇ?? 2

ಕಸಪೊರಕೆ; ಕಸ ಪೊರಕೆ ಎನ್ನುವುದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಲು ಬಳಸುವಂತಹ ಸಾಧನ. ಇದನ್ನು ಲಕ್ಷ್ಮೀದೇವಿಯ ಪ್ರತಿಕ ಎಂಬದಾಗಿ ವಾಸ್ತುಶಾಸ್ತ್ರದಲ್ಲಿ ಭಾವಿಸಲಾಗುತ್ತದೆ. ಹೀಗಾಗಿ ಇದನ್ನು ನೀವು ಬೇರೆಯವರಿಗೆ ನೀಡುವುದರ ಮುಖೇನ ಲಕ್ಷ್ಮೀದೇವಿಯ ಕೋಪಕ್ಕೆ ಕಾರಣರಾಗಿ ನಿಮ್ಮ ಮನೆಯಿಂದ ಲಕ್ಷ್ಮಿ ದೇವಿ ಹೊರಹೋಗುತ್ತಾಳೆ. ಇದರಿಂದ ಕಾಲಕ್ರಮೇಣ ನಿಮ್ಮ ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗುತ್ತದೆ.

ಉಪ್ಪು ನೀಡಬೇಡಿ; ಉಪ್ಪನ್ನು ಚಂದ್ರ ಹಾಗೂ ಶುಕ್ರ ಗ್ರಹಗಳ ಸಂಬಂಧಿತ ವಸ್ತು ಎನ್ನುವುದಾಗಿ ಭಾವಿಸಲಾಗುತ್ತದೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಂದ್ರ ಹಾಗೂ ಶುಕ್ರ ಎರಡು ಗ್ರಹಗಳು ಕೂಡ ಶುಭಕಾರಕವಾಗಿದೆ. ಹೀಗಾಗಿ ಇವುಗಳನ್ನು ನೀವು ಉಚಿತವಾಗಿ ನೀಡಿದರು ಕೂಡ ನಿಮ್ಮ ಜೀವನದಲ್ಲಿ ತಾಪತ್ರಯಗಳು ಒಂದೊಂದಾಗಿ ಬರಲು ಪ್ರಾರಂಭವಾಗುತ್ತದೆ.

ಗಡಿಯಾರ; ಗಡಿಯಾರ ನಮ್ಮ ಕೆಟ್ಟ ಹಾಗೂ ಒಳ್ಳೆಯ ಸಮಯಗಳನ್ನು ಹೊಂದಿರುವ ವಸ್ತುವಾಗಿದೆ. ಹೀಗಾಗಿ ನೀವು ಇದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಮೂಲಕ ನಿಮ್ಮ ಅದೃಷ್ಟದ ಸಮಯಗಳನ್ನು ಬೇರೆಯವರೊಂದಿಗೆ ಹಂಚಿಕೊಂಡಂತಾಗುತ್ತದೆ. ಬೇರೆಯವರ ವಾಚ್ ಅನ್ನು ನೀವು ಕೂಡ ತೆಗೆದುಕೊಂಡರೆ ಅವರ ಒಳ್ಳೆಯ ಕರ್ಮದ ಜೊತೆಗೆ ಕೆಟ್ಟ ಕರ್ಮವನ್ನು ಕೂಡ ನೀವು ಪಾಲುದಾರಿಕೆಯಿಂದ ತೆಗೆದುಕೊಂಡಂತಾಗುತ್ತದೆ. ಹೀಗಾಗಿ ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತ್ರದ ಪ್ರಕಾರ ಇವಿಷ್ಟು ವಸ್ತುಗಳನ್ನು ನೀವು ಬೇರೆಯವರಿಗೆ ನೀಡಲು ಬಾರದು ನೀವು ಕೂಡ ತೆಗೆದುಕೊಳ್ಳಬಾರದು.

Comments are closed.