News from ಕನ್ನಡಿಗರು

ಶ್ರೀ ಲೀಲಾ ಉಳಿದುಕೊಂಡಿರುವ ರೂಮ್ ಬಾಡಿಗೆ ಕೇಳಿ ಶಾಕ್ ಆದ ಟಾಲಿವುಡ್ ಜನ. ಯಪ್ಪಾ ಈಕೆ ರೂಮಿಗೆ ಎಷ್ಟು ಕಟ್ಟುತ್ತಾರೆ ಗೊತ್ತೇ??

0 21

ನಮಸ್ಕಾರ ಸ್ನೇಹಿತರೇ ಎಪಿ ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿ ಶ್ರೀ ಲೀಲಾ ಅವರು ಪರಿಚಿತರಾಗುತ್ತಾರೆ. ನಂತರ ಅವರು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಜೊತೆಗೆ ಭರಾಟೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕವೂ ಕೂಡ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಯುವ ಉದಯೋನ್ಮುಖ ನಟಿಯಾಗಿ ಈಗಾಗಲೇ ಹೆಸರನ್ನು ಸಂಪಾದಿಸಿದ್ದಾರೆ.

ಇನ್ನು ತೆಲುಗು ಚಿತ್ರರಂಗದಲ್ಲಿ ಕೂಡ ಈಗಾಗಲೇ ಒಂದು ಸಿನಿಮಾದಲ್ಲಿ ನಟಿಸಿದ್ದು ನಟಿಸಿದ ಒಂದೇ ಸಿನಿಮಾದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ಶ್ರೀಲೀಲ ಅವರ ಜೀವನದಲ್ಲಿ ಸಾಕಷ್ಟು ವಿವಾದ ಎನಿಸುವಂತಹ ಘಟನೆಗಳು ನಡೆಯುತ್ತಿವೆ. ಮೊದಲನೇದಾಗಿ ಶೀಲೀಲಾ ಅವರ ತಂದೆಯ ವಿಚಾರದ ಬಗ್ಗೆ ಸಾಕಷ್ಟು ಸುದ್ದಿ ಆಗಿದ್ದವು. ಇದಾದ ನಂತರ ಇತ್ತೀಚಿಗಷ್ಟೇ ಶ್ರೀ ಲೀಲಾ ಅವರ ತಾಯಿ ಸ್ವರ್ಣ ಲತಾ ಅವರ ವಿರುದ್ಧ ಕೆಲವೊಂದು ಪ್ರಕರಣಗಳು ದಾಖಲಾಗಿ ಅವರು ತಲೆಮರಿಸಿಕೊಂಡಿದ್ದಾರೆ ಎಂಬ ವಿಚಾರಗಳು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು.

ಸದ್ಯಕ್ಕೆ ಶ್ರೀಲೀಲಾ ಅವರ ಕೈಯಲ್ಲಿ ಮೂರರಿಂದ ನಾಲ್ಕು ತೆಲುಗು ಸಿನಿಮಾಗಳು ಇವೆ ಎಂಬುದಾಗಿ ತಿಳಿದು ಬಂದಿದ್ದು ಇದಕ್ಕಾಗಿ ಅವರು ಹೈದರಾಬಾದಿನ ಸೆವೆನ್ ಸ್ಟಾರ್ ಹೋಟೆಲ್ ನಲ್ಲಿ ತಂಗುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕಾಗಿ ನಿರ್ಮಾಪಕರು ಪ್ರತಿ ದಿನಕ್ಕೆ 22 ಸಾವಿರ ರೂಪಾಯಿ ಬಾಡಿಗೆಯನ್ನು ನೀಡುತ್ತಿದ್ದಾರೆ. 30 ದಿನ ಚಿತ್ರೀಕರಣ ಇರುವ ಕಾರಣದಿಂದಾಗಿ ಕಡಿಮೆ ಎಂದರು 6 ಲಕ್ಷಕ್ಕೂ ಅಧಿಕ ಹಣ ಖರ್ಚಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಈಗಷ್ಟೇ ಅಂಬೆಗಾಲಿಡುತ್ತಿರುವ ನಟಿಗೆ ಇಷ್ಟೊಂದು ಖರ್ಚು ಮಾಡಬೇಕೆ ಎಂಬುದಾಗಿ ಕೂಡ ನೆಟ್ಟಿಗರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ.

Leave A Reply

Your email address will not be published.