ಸುದೀಪ್ ರವರ ಹುಟ್ಟು ಹಬ್ಬಕ್ಕೂ ಮೊದಲೇ ಕುಂಬ್ಳೆ ರವರಿಂದ ಸಿಕ್ತು ಗಿಫ್ಟ್, ಇದು ಜೀವನದ ಬಿಗ್ ಗಿಫ್ಟ್ ಎಂದ ಸುದೀಪ್, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಿಚ್ಚ ಸುದೀಪ್ ಕೇವಲ ನಟನೆಯಿಂದ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಇತರ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಸುದೀಪ್ ಅವರಿಗೆ ಕ್ರೀಡೆ ಎಂದರೆ ತುಂಬಾನೇ ಇಷ್ಟ. ಅದರಲ್ಲೂ ತಾವೇ ಸ್ವತಃ ಕ್ರಿಕೆಟ್ ಆಟಗಾರರೂ ಆಗಿರುವ ಸುದೀಪ್ ಅವರಿಗೆ ಕ್ರಿಕೆಟಿಗರು ಸಾಕಷ್ಟು ಸ್ನೇಹಿತರಿದ್ದಾರೆ. ಹಾಗಾಗಿ ಇವರೆಲ್ಲರೂ ಸುದೀಪ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.

ಇದೀಗ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಕ್ಕೆ ಕೇವಲ 10 ದಿನಗಳಿವೆ. ಹೌದು ಸಪ್ಟೆಂಬರ್ 2 ಕ್ಕೆ ಸುದೀಪ್ ಅವರ ಜನ್ಮದಿನ. ಕಿಚ್ಚ ಅವರ ಅಭಿಮಾನಿಗಳು ಆಗಲೇ ಸಂಭ್ರಮ ಪಡುತ್ತಿದ್ದಾರೆ. ಪ್ರತಿವರ್ಷದಂತೆ ಈ ಬಾರಿ ಕಿಚ್ಚ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವುದು ಅನುಮಾನವೇ. ಯಾಕೆಂದರೆ ಕರೋನ ಕಾವು ಇನ್ನು ತಣಿದಿಲ್ಲ. ಹೆಚ್ಚು ಜನ ಒಟ್ಟಿಗೆ ಸೇರಬಾರದು ಎಂಬ ನಿಯಮವೂ ಇದೆ. ಆದರೆ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೂ ಮೊದಲೇ ಅವರ ಸ್ನೇಹಿತ ಹಾಗೂ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಗಿಫ್ಟ್ ಒಂದನ್ನು ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ಅವರ ಚಿತ್ರವೊಂದನ್ನು ಬಿಡುಗಡೆ ಮಾಡಿ ‘ನನ್ನ ಆತ್ಮೀಯ ಗೆಳೆಯ ಸುದೀಪ್ ಅವರ ಹುತ್ಯುಹಬ್ಬದ ಕಾಮನ್ ಡಿಸ್ಪ್ಲೇ ಪಿಕ್ಚರ್. ಸದಾ ಸ್ಫೂರ್ತಿದಾಯಕವಾಗಿರಿ’ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಬಾದ್ ಶಾ ಎಂದು ಬರಹ ಇದ್ದು ಅಭಿಮಾನಿಗಳ ಸುತ್ತ ಸುದೀಪ್ ಇರುವ ಚಿತ್ರ ಇದಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಿಚ್ಚ ‘ ಇದಕ್ಕಿಂತ ಬೆಸ್ಟ್ ಗಿಫ್ಟ್ ಇನ್ಯಾವುದು ಇರಲು ಸಾಧ್ಯ ಕುಂಬ್ಳೆ ಸರ್’ ಎಂದು ಧನ್ಯವಾದ ಸೂಚಿಸಿದ್ದಾರೆ. ಇನ್ನು ಅಭಿನಯ ಚಕ್ರವರ್ತಿ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಯಾವ ಸಿಹಿ ಸುದ್ದಿ ಸಿಗುತ್ತದೆ ಕಾದು ನೋಡಬೇಕು. ಸುದೀಪ್ ಅವರ ಅಭಿನಯದ ‘ಕೋಟಿಗೊಬ್ಬ 3’ ಹಾಗೂ ‘ವಿಕ್ರಂ ರೋಣ’ ಇರಡೂ ಚಿತ್ರಗಳು ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ್ದು ಅದರ ಬಿಡುಗಡೆಗೆ ಸಿನಿ ಪ್ರಿಯರು ಕಾದಿದ್ದಾರೆ.

Comments are closed.