News from ಕನ್ನಡಿಗರು

ತನ್ನ ರಾಶಿಗೆ ಮರಳಿದ ಸೂರ್ಯ ದೇವ, ಬುಧ ಹಾಗೂ ಶನಿ ದೇವ: ಇದರಿಂದ ಅದೃಷ್ಟವನ್ನು ಪಡೆಯುವ ಮೂರು ರಾಶಿಗಳು ಯಾವ್ಯಾವು ಗೊತ್ತೇ??

20

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ನಡುವೆ ಆಗುವ ಬದಲಾವಣೆ ಜೀವನ ಆಯಾಯ ರಾಶಿ ಚಕ್ರದಲ್ಲಿ ಇರುವ ಜನರ ಜೀವನದಲ್ಲಿ ಕೂಡ ಪರಿಣಾಮವನ್ನು ಬೀರುತ್ತದೆ. ಇನ್ನು ಈ ಬಾರಿ ಅಕ್ಟೋಬರ್ 24ರ ತನಕ ಬುಧ ತನ್ನದೇ ರಾಶಿ ಆಗಿರುವ ಕನ್ಯ ರಾಶಿಯಲ್ಲಿ ಇರಲಿದ್ದಾನೆ. ಗ್ರಹಗಳ ರಾಜನಾಗಿರುವ ಸೂರ್ಯನು ತನ್ನ ಸಿಂಹ ರಾಶಿಗೆ ಆಗಮಿಸಿದ್ದಾನೆ. ನ್ಯಾಯದ ಗ್ರಹ ಆಗಿರುವ ಶನಿಯು ತನ್ನದೇ ರಾಶಿ ಆಗಿರುವ ಮಕರ ರಾಶಿಯಲ್ಲಿ ಕೂತಿದ್ದಾನೆ. ಈ ಮೂರು ಪ್ರಮುಖ ಗ್ರಹಗಳು ತಮ್ಮದೇ ರಾಶಿಯಲ್ಲಿ ಕುಳಿತಿರುವ ಹಿನ್ನೆಲೆಯಲ್ಲಿ ಮೂರು ರಾಶಿಯವರಿಗೆ ಸಾಕಷ್ಟು ಲಾಭವೂ ಇದರಿಂದ ಸಂಭವಿಸಲಿದೆ.

ಮಿಥುನ ರಾಶಿ; ಸಿಂಹ ರಾಶಿಯಲ್ಲಿ ಸೂರ್ಯ ಇರುವ ಸಂದರ್ಭದಲ್ಲಿ ಮಿಥುನ ರಾಶಿಯವರಿಗೆ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ರಾಜಕೀಯ ಕ್ಷೇತ್ರದ ಜನರಿಗೆ ಇನ್ನಷ್ಟು ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿತಿಗತಿಯ ಜೊತೆಗೆ ಸಮಾಜದಲ್ಲಿ ಪ್ರತಿಷ್ಠೆ ಕೂಡ ಹೆಚ್ಚಾಗಲಿದ್ದು ಆರೋಗ್ಯದ ಕುರಿತಂತೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ.

ಕರ್ಕ ರಾಶಿ; ಸೂರ್ಯ ಬುಧ ಹಾಗೂ ಶನಿ ತಮ್ಮ ರಾಶಿಗೆ ವಾಪಸಾಗಿರುವ ಹಿನ್ನೆಲೆಯಲ್ಲಿ ಗರ್ಕ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ ಹಾಗೂ ಉದ್ಯೋಗ ಮಾಡುತ್ತಿದ್ದರೆ ಸಂಬಳದ ಹೆಚ್ಚಳ ಕಂಡು ಬರಲಿದೆ. ಹಣದ ಹೂಡಿಕೆಗೆ ಇದೊಂದು ಪ್ರಶಸ್ತವಾದ ಸಮಯ ಆಗಿದ್ದು ಹಲವಾರು ವರ್ಷಗಳಿಂದ ಇತ್ಯರ್ಥವಾಗದೆ ಉಳಿದುಕೊಂಡಿದ್ದ ಆಸ್ತಿ ಸಮಸ್ಯೆ ಪರಿಹಾರ ಕಾಣಲಿದೆ.

ತುಲಾ ರಾಶಿ; ಯಾವುದೇ ಕೆಲಸ ಮಾಡಲು ಹೊರಟರು ಕೂಡ ಅದೃಷ್ಟ ನಿಮ್ಮ ಬೆನ್ನ ಹಿಂದೆ ಇರುತ್ತದೆ ಹಾಗೂ ವಿದೇಶ ಪ್ರಯಾಣ ಮಾಡುವ ಸೌಲಭ್ಯವು ಕೂಡ ದೊರಕಲಿದೆ. ವಿದೇಶಿ ಉದ್ಯೋಗದ ಕನಸನ್ನು ಕಾಣುತ್ತಿರುವವರಿಗೆ ಎಲ್ಲವೂ ನೀವೊಂದುಕೊಂಡಂತೆ ಆಗುವ ಪರಿಸ್ಥಿತಿ ಸನ್ನಿಹಿತ ಆಗಿದೆ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ಉದ್ಯೋಗ ಸೇರಿದಂತೆ ಜೀವನದಲ್ಲಿ ಇರುವಂತಹ ಎಲ್ಲಾ ಗೊಂದಲಗಳು ಕೂಡ ದೂರವಾಗಲಿವೆ. ಮೂರು ಗ್ರಹಗಳ ಕೃಪಾಕಟಾಕ್ಷಕ್ಕೆ ಪಾತ್ರ ಅಗಲಿರುವ ಮೂರು ರಾಶಿಗಳು ಇವರೇ.

Leave A Reply

Your email address will not be published.