News from ಕನ್ನಡಿಗರು

ನೀವು ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದರೆ ಹೆಚ್ಚಿನ ಕೆಲಸ ಬೇಡ, ಹೀಗೆ ಮಾಡಿ ಸಾಕು. ಹಣದ ಸುರಿಮಳೆಯೇ ಆಗುತ್ತದೆ. ಏನು ಮಾಡಬೇಕು ಗೊತ್ತೇ??

0 24

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ ಎಂಬುದಾಗಿ ಎಲ್ಲರೂ ಕೂಡ ಅಂದುಕೊಳ್ಳುತ್ತಾರೆ ಆದರೆ ಎಲ್ಲವೂ ಅವರಂದು ಕೊಂಡಂತೆ ನಡೆಯುವುದಿಲ್ಲ. ಪ್ರತಿಯೊಬ್ಬರ ಆರ್ಥಿಕ ಸ್ಥಿತಿ ಚೆನ್ನಾಗಿರಲು ಲಕ್ಷ್ಮೀದೇವಿ ಪ್ರಸನ್ನ ಆಗಿರುವುದು ಪ್ರಮುಖವಾಗಿರುತ್ತದೆ. ಕೆಲವೊಂದು ವಸ್ತುಗಳನ್ನು ಜೋಪಾನವಾಗಿ ನೋಡಿಕೊಳ್ಳುವುದರಿಂದ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಲು ಸಾಧ್ಯವಾಗುತ್ತದೆ. ಹಾಗಿದ್ದರೆ ಆ ವಸ್ತುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಅರಶಿನ ಉಂಡೆ; ಆರ್ಥಿಕವಾಗಿ ಬಲಾಢ್ಯ ರಾಗಲು ಅರಿಶಿಣ ಉಂಡೆಯನ್ನು ಜೋಪಾನವಾಗಿ ಇಡುವುದು ಅತ್ಯುತ್ತಮವಾಗಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಬಳಸಲಾಗುವ ಅರಿಶಿನವನ್ನು ಕೆಂಪು ಬಟ್ಟೆಯಲ್ಲಿ ಶುಕ್ರವಾರದ ದಿನದಂದು ಸುತ್ತಿಡುವುದು ಶುಭಕರವಾಗಲಿದೆ.

ಕೆಂಪು ಬಟ್ಟೆ; ಲಕ್ಷ್ಮಿ ತಾಯಿಗೆ ಪ್ರಿಯವಾಗಿರುವ ಕೆಂಪು ಬಟ್ಟೆಯಲ್ಲಿ 11 ರೂಪಾಯಿ ಅಥವಾ 21 ರೂಪಾಯಿಗಳನ್ನು ಸುತ್ತಿ ಶುಕ್ರವಾರದ ದಿನ ಲಕ್ಷ್ಮಿ ದೇವಿಯ ಮುಂದಿಟ್ಟರೆ ಅದು ನಿಮಗೆ ಆರ್ಥಿಕ ಲಾಭವನ್ನು ನೀಡುವ ಶುಭ ಪರಿಣಾಮವನ್ನು ಬೀರಲಿದೆ.

ತಾವರೆ; ವಿಷ್ಣು ಹಾಗೂ ಲಕ್ಷ್ಮೀದೇವಿ ಇಬ್ಬರಿಗೂ ಕೂಡ ಕಮಲ ಅಥವಾ ತಾವರೆ ಹೂವು ಪ್ರಿಯವಾದ ಹೂವಾಗಿದೆ. ಹೀಗಾಗಿ ಲಕ್ಷ್ಮಿ ತಾಯಿಯ ಆರಾಧನೆ ಮಾಡುವಾಗ ತಾವರೆ ಹೂವುಗಳನ್ನು ಜೋಪಾನವಾಗಿ ಇಡುವಂತೆ ನೋಡಬೇಕು. ಲಕ್ಷ್ಮಿ ದೇವಿಯ ಮುಂದೆ ಇಡುವ ತಾವರೆ ಹೂವು ಬಾಡುವ ಮುನ್ನವೇ ತಾಜಾ ಹೂವನ್ನು ಎದುರಿಗೆ ಇಡಬೇಕು.

ನಾಣ್ಯ; ಶಾಸ್ತ್ರಗಳ ಪ್ರಕಾರ ನಾಣ್ಯಗಳನ್ನು ಶುಭ ಸೂಚಕ ಎಂದು ಭಾವಿಸಲಾಗಿದ್ದು ಅದರಲ್ಲಿಯೂ ವಿಶೇಷವಾಗಿ ಶುಕ್ರವಾರ ಹುಣ್ಣಿಮೆ ಅಥವಾ ಧನತ್ರಯೋದಶಿಯ ದಿನದಂದು ಪೂಜೆ ಮಾಡಿ ನಿಮ್ಮ ತಿಜೋರಿಯಲ್ಲಿ ಇಡುವ ಮೂಲಕ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗುವ ಮೂಲಕ ನೀವು ಧನವಂತರಾಗಬಹುದಾಗಿದೆ. ಈ ಎಲ್ಲಾ ವಸ್ತುಗಳನ್ನು ಜೋಪಾನವಾಗಿ ನೋಡಿಕೊಳ್ಳುವ ಮೂಲಕ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಿ ಆರ್ಥಿಕ ಸಮಸ್ಯೆಯಿಂದ ಹೊರಬನ್ನಿ.

Leave A Reply

Your email address will not be published.