ರಾಬರ್ಟ್ ಸಿನೆಮಾಗೆ ಬೆಸ್ಟ್ ನಿರ್ದೇಶಕ ಅವಾರ್ಡ್ ಬಂದ ಬೆನ್ನಲ್ಲೇ ತರುಣ್ ರವರು ದರ್ಶನ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ?? ಫ್ಯಾನ್ಸ್ ಫುಲ್ ಜೋಷ್

ನಮಸ್ಕಾರ ಸ್ನೇಹಿತರೆ ಈ ಬಾರಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 10 ಹಾಗೂ 11ರಂದು ನಡೆದಿರುವ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಅವಾರ್ಡ್ ಆಗಿರುವ ಸೈಮ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡದ ಮೂರು ಸಿನಿಮಾಗಳು ಪಾರಮ್ಯವನ್ನು ಮೆರೆದಿದ್ದಾವೆ ಎಂದು ಹೇಳಬಹುದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಹತ್ತು ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು.

ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಗರುಡ ಗಮನ ವೃಷಭ ವಾಹನ 8 ವಿಭಾಗಗಳಲ್ಲಿ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಏಳು ವಿಭಾಗಗಳಲ್ಲಿ ನಾಮಿನೇಷನ್ ಆಗಿತ್ತು. ಇವುಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಾಯಕನಾಗಿ ನಟಿಸಿರುವ ರಾಬರ್ಟ್ ಸಿನಿಮಾ ಈಗಾಗಲೇ ಮೂರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದಿರುವುದು ನಿಮಗೆಲ್ಲ ಗೊತ್ತಿದೆ. ಅತ್ಯುತ್ತಮ ಸಂಗೀತ ನಿರ್ದೇಶಕನಾಗಿ ಅರ್ಜುನ್ ಜನ್ಯ, ಅತ್ಯುತ್ತಮ ಛಾಯಾಗ್ರಹಕನಾಗಿ ಸುಧಾಕರ್ ರಾಜ್ ಹಾಗೂ ಅತ್ಯುತ್ತಮ ನಿರ್ದೇಶಕನಾಗಿ ತರುಣ್ ಸುಧೀರ್ ಅವರು ರಾಬರ್ಟ್ ಸಿನಿಮಾಗಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅದರಲ್ಲೂ ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹಾಯವನ್ನು ಹಾಗೂ ಪ್ರೋತ್ಸಾಹವನ್ನು ರಾಬರ್ಟ್ ಸಿನಿಮಾಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಳ್ಳುವಾಗ ತರುಣ್ ಸುಧೀರ್ ಅವರು ನೆನಪಿಸಿಕೊಂಡಿದ್ದಾರೆ.

tarun at siima awards | ರಾಬರ್ಟ್ ಸಿನೆಮಾಗೆ ಬೆಸ್ಟ್ ನಿರ್ದೇಶಕ ಅವಾರ್ಡ್ ಬಂದ ಬೆನ್ನಲ್ಲೇ ತರುಣ್ ರವರು ದರ್ಶನ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ?? ಫ್ಯಾನ್ಸ್ ಫುಲ್ ಜೋಷ್
ರಾಬರ್ಟ್ ಸಿನೆಮಾಗೆ ಬೆಸ್ಟ್ ನಿರ್ದೇಶಕ ಅವಾರ್ಡ್ ಬಂದ ಬೆನ್ನಲ್ಲೇ ತರುಣ್ ರವರು ದರ್ಶನ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ?? ಫ್ಯಾನ್ಸ್ ಫುಲ್ ಜೋಷ್ 2

ಇಷ್ಟು ಮಾತ್ರವಲ್ಲದೆ ರಾಬರ್ಟ್ ಸಿನಿಮಾಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿರುವುದಕ್ಕಾಗಿ ಈ ಪ್ರಶಸ್ತಿಯನ್ನು ದರ್ಶನ್ ಅವರ ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂಬುದಾಗಿ ತರುಣ್ ಸುಧೀರ್ ರವರು ಹೇಳಿಕೊಂಡಿರುವುದು ಡಿ ಬಾಸ್ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ತರುಣ್ ಸುಧೀರ್ ಅವರ ಈ ಮಾತನ್ನು ಕೇಳಿ ಡಿ ಬಾಸ್ ಅಭಿಮಾನಿಗಳು ಹೆಮ್ಮೆಯಿಂದ ಕಾಲರ್ ಎತ್ತಿದ್ದಾರೆ.

Comments are closed.