ಬಿಗ್ ನ್ಯೂಸ್: ಅಂಬಾನಿಗೆ ಸೋಲಿನ ರುಚಿ ತೋರಿಸಲು ಮುಂದಾದ ಟಾಟಾ, ಒಮ್ಮೆಲೇ ಗ್ರಾಹಕರಿಗೆ ಸಿಹಿ ಸುದ್ದಿಯ ಜೊತೆ ಇತರೆ ಕಂಪನಿಗಳಿಗೆ ಶಾಕ್ ನೀಡಿದ ಟಾಟಾ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಟಾಟಾ ಸ್ಕೈ ಯಾರ ಮನೆಯಲ್ಲಿಇಲ್ಲ ಹೇಳಿ. ನಗರಗಳಲ್ಲಂತೂ ಟಾಟಾ ಸ್ಕೈಯದ್ಡೇ ಕಾರುಬಾರು. ಕಳೆದ ಕೆಲವು ವರ್ಷಗಳಿಂದ ಹಳ್ಳಿಗಳಿಗೂ ಲಗ್ಗೆ ಇಟ್ಟ ಟಾಟಾ ಸ್ಕೈ, ಕೇಬಲ್ ನೆಟ್ವರ್ಕ್ ಗಳ ನೆಟ್ವರ್ಕ್ ಗೋಳನ್ನು ತಪ್ಪಿಸಿದೆ. ಕಳೆದ ಸರಿಸುಮಾರು 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಟಾಟಾ ಸ್ಕೈ ಇದೀಗ ತನ್ನ ಸೇವೆಯ ರೂಪರೇಷೆಗಳನ್ನು ಬದಲಾಯಿಸಿದೆ. ಅಷ್ಟೇ ಅಲ್ಲ, ಜಿಯೋ ಫೈಬರ್ ಸೇರಿದಂತೆ ದೇಶದ ಎಲ್ಲಾ ಫೈಬರ್ ಬ್ರಾಡ್‌ಬ್ಯಾಂಡ್ ಕಂಪೆನಿಗಳಿಗೆ ಟಕ್ಕರ್ ನೀಡಲು ಮುಂದಾಗಿದೆ.

ಒಟಿಟಿ ಸೇವೆ ದೊರಕುವುದಕ್ಕೂ ಮೊದಲು ಎಲ್ಲರೂ ನೆಚ್ಚಿಕೊಂಡಿದ್ದು ಟಾಟಾ ಸ್ಕೈ ಅಥವಾ ಅಂತಹ ಡಿಟಿಎಹ್ ಕಂಪೆನಿಗಳನ್ನ. ಯಾಕೆಂದ್ರೆ ಜನರ ಎಲ್ಲಾ ಮೆಚ್ಚಿನ ಎಲ್ಲಾ ಟಿವಿ ಚಾನೆಲ್ ಗಳನ್ನು ಇದು ಕೊಡುತ್ತಿತ್ತು. ಆದರೆ ಬ್ರಾಡ್ ಬ್ಯಾಂಡ್ ಗಳ ಮೂಲಕ ಅದರಲ್ಲೂ ಲಾಕ್ ಡೌನ್ ಸಮಯದಲ್ಲಿ ಒಟಿಟಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿತು. ಎಷ್ಟರ ಮಟ್ಟಿಗೆ ಎಂದರೆ ಸಾಕಷ್ಟು ಜನ ಡಿಟಿಹೆಚ್ ಸರ್ವೀಸ್ ಗಳನ್ನು ಬಿಡಲು ಕೂಡ ನಿರ್ಧರಿಸಿದ್ದಾರೆ.

ambani tata 1 | ಬಿಗ್ ನ್ಯೂಸ್: ಅಂಬಾನಿಗೆ ಸೋಲಿನ ರುಚಿ ತೋರಿಸಲು ಮುಂದಾದ ಟಾಟಾ, ಒಮ್ಮೆಲೇ ಗ್ರಾಹಕರಿಗೆ ಸಿಹಿ ಸುದ್ದಿಯ ಜೊತೆ ಇತರೆ ಕಂಪನಿಗಳಿಗೆ ಶಾಕ್ ನೀಡಿದ ಟಾಟಾ. ಏನು ಗೊತ್ತೇ??
ಬಿಗ್ ನ್ಯೂಸ್: ಅಂಬಾನಿಗೆ ಸೋಲಿನ ರುಚಿ ತೋರಿಸಲು ಮುಂದಾದ ಟಾಟಾ, ಒಮ್ಮೆಲೇ ಗ್ರಾಹಕರಿಗೆ ಸಿಹಿ ಸುದ್ದಿಯ ಜೊತೆ ಇತರೆ ಕಂಪನಿಗಳಿಗೆ ಶಾಕ್ ನೀಡಿದ ಟಾಟಾ. ಏನು ಗೊತ್ತೇ?? 3

ಆದರೆ ಈ ಉದ್ಯಮದಲ್ಲಿ ಅತ್ಯಂತ ಮುಂದಿರುವ ಟಾಟಾ ಸ್ಕೈ ’ಟಾಟಾ ಪ್ಲೇ’ ಆಗಿ ಮಾರ್ಪಟ್ಟಿರುವುದು ಮಾತ್ರವಲ್ಲದೇ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ಮೊದಲಾದ ದೇಶದ ಎಲ್ಲಾ ಪ್ರಮುಖ ಒಟಿಟಿ ಸೇವೆಗಳನ್ನು ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ಕೊಡಲು ನಿರ್ಧರಿಸಿದೆ. ಇದರಿಂದ ಫೈಬರ್ ಬ್ರಾಡ್ ಬೈಂಡ್ ಗಳಿಗೆ ಬಹಳ ದೊಡ್ಡ ಹೊಡೆತ ಬೀಳಲಿದೆ. ಇದರಿಂದ ಜನರಿಗೆ ಶೇ. 75 ರಷ್ಟು ಹಣವನ್ನು ಉಳಿತಾಯವಾಗುವುದರಲ್ಲಿ ಸಂಶಯವಿಲ್ಲ.

ಟಾಟಾ ಪ್ಲೇ ಇದೀಗ ಪ್ರತಿ ತಿಂಗಳಿಗೆ ಕೇವಲ 389 ರೂ. ಗಳ ಟಾಟಾ ಪ್ಲೇ ಬಿಂಜ್ ಕಾಂಬೊವನ್ನು ಆರಂಭಿಸಿದೆ. ಇದರ ಜೊತೆಗೆ ಟಿವಿ ಚಾನೆಲ್‌ಗಳೂ ಕೂಡ ಲಭ್ಯ. ದೇಶದ ಎಲ್ಲಾ ಪ್ರಮುಖ 14 ಒಟಿಟಿಗಳೂ ಇದರಲ್ಲಿ ಲಭ್ಯವಿದೆ. ಈಗಾಗಲೇ ನೆಟ್‌ಫ್ಲಿಕ್ ಚಂದಾದಾರಿಕೆಯು ‘ಟಾಟಾ ಪ್ಲೇ’ ಕುಟುಂಬಕ್ಕೆ ಸೇರ್ಪಡೆಗೊಂಡಿದೆ. ಹಾಗೆಯೇ ಎಲ್ಲಾ ಒಟಿಟಿಗಳೂ ಟಾಟಾ ಪ್ಲೇಯಲ್ಲಿ ದೊರೆಯಲಿದೆ. ಟಾಟಾ ಪ್ಲೇ ಬಿಂಜ್ ಕಾಂಬೊ ಯೋಜನೆಯು ರೂ 809 ರಿಂದ ಪ್ರಾರಂಭವಾಗುತ್ತದೆ, ಇದರಲ್ಲಿ 52 ಎಸ್ ಡಿ ಚಾನಲ್‌ಗಳು ಮತ್ತು 28 ಹೆಚ್ ಡಿ ಚಾನಲ್‌ಗಳನ್ನು ಅಳವಡಿಸಿದೆ. ಹಾಗಾಗಿ ಜನ ಪ್ರತ್ಯೇಕವಾಗಿ ಓಟಿಟಿ ಚಂದಾದಾರಿಕೆಯನ್ನು ಪಡೆಯುವ ಅಗತ್ಯ ಇರುವುದಿಲ್ಲ.

ಇನ್ನು ‘ಟಾಟಾ ಪ್ಲೇ’ ಬಿಂಗ್ ಸೇವೆಗೆ ತಿಂಗಳಿಗೆ 299 ರೂ. ಪಾವತಿಸಿದರೆ ಆಯ್ತು. ಈ ಮೊದಲಿನ ಸಾಮಾನ್ಯ ಟಿವಿ ಚಾನೆಲ್‌ಗಳಂತೆ, ಟಾಟಾ ಪ್ಲೇಯಲ್ಲಿ ಬೇಕಾದ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಯನ್ನು ಪಡೆಯಬಹುದು. ಈ ಬಗ್ಗೆ ಮಾಹಿತಿಯನ್ನು ನೀಡಿರುವ ಟಾಟಾ ಪ್ಲೇ ಲಿ. ನ ಎಂ.ಡಿ, ಸಿಇಒ, ಹರಿತ್ ನಾಗ್ವಾಲ್, “ನಾವು ನೆಟ್‌ಫ್ಲಿಕ್ಸ್ ಅನ್ನು ನಮ್ಮ ಕುಟುಂಬಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ. ನಾವು ಇಂದಿನಿಂದ ಎಲ್ಲಾ ಗ್ರಾಹಕರಿಗೆ ಸೇವೆಯ ಭೇಟಿಗಳನ್ನು ಉಚಿತವಾಗಿ ನೀಡುತ್ತಿದ್ದೇವೆ.

ambani tata 3 | ಬಿಗ್ ನ್ಯೂಸ್: ಅಂಬಾನಿಗೆ ಸೋಲಿನ ರುಚಿ ತೋರಿಸಲು ಮುಂದಾದ ಟಾಟಾ, ಒಮ್ಮೆಲೇ ಗ್ರಾಹಕರಿಗೆ ಸಿಹಿ ಸುದ್ದಿಯ ಜೊತೆ ಇತರೆ ಕಂಪನಿಗಳಿಗೆ ಶಾಕ್ ನೀಡಿದ ಟಾಟಾ. ಏನು ಗೊತ್ತೇ??
ಬಿಗ್ ನ್ಯೂಸ್: ಅಂಬಾನಿಗೆ ಸೋಲಿನ ರುಚಿ ತೋರಿಸಲು ಮುಂದಾದ ಟಾಟಾ, ಒಮ್ಮೆಲೇ ಗ್ರಾಹಕರಿಗೆ ಸಿಹಿ ಸುದ್ದಿಯ ಜೊತೆ ಇತರೆ ಕಂಪನಿಗಳಿಗೆ ಶಾಕ್ ನೀಡಿದ ಟಾಟಾ. ಏನು ಗೊತ್ತೇ?? 4

ನಮ್ಮ ನಿಷ್ಕ್ರಿಯ ಡಿಟಿಹೆಚ್ ಗ್ರಾಹಕರು ಯಾವುದೇ ಮರು ಸಂಪರ್ಕ ಶುಲ್ಕವಿಲ್ಲದೇ ರೀಚಾರ್ಜ್ ಮಾಡುವುದನ್ನು ಮುಂದುವರಿಸಬಹುದು. ಟಾಟಾ ಪ್ಲೇ ಎಂಬ ಹೆಸರು ನಮ್ಮ ವಿಸ್ತೃತ ಶ್ರೇಣಿಯ ಉತ್ಪನ್ನ ಮತ್ತು ಸೇವೆಗಳನ್ನು ಹೇಳುವಂಥದ್ದು” ಎಂದು ಹೇಳಿದ್ದಾರೆ. ಟಾಟಾ ಪ್ಲೇ ಇದೀಗ ಟಾಟಾ ಸನ್ಸ್ ಮತ್ತು ವಾಲ್ಟ್ ಡಿಸ್ನಿ ಕಂಪನಿಯ ಜಂಟಿ ಉದ್ಯಮವಾಗಿದ್ದು, ಇಲ್ಲಿಯವರೆಗೆ ದೇಶದಲ್ಲಿ 23 ಮಿಲಿಯನ್ ಕುಟುಂಬಗಳಿಗೆ ಸಂಪರ್ಕ ನೀಡಲು ಯಶಸ್ವಿಯಾಗಿದೆ. ಕಂಪನಿಯ ಹೊಸ ಹೆಸರು ಜನವರಿ 27, 2022 ರಿಂದ ಬಳಾಕೆಗೆ ಬಂದಿದೆ. ಗ್ರಾಹಕರ ಅಭಿರುಚಿ ಬದಲಾದ ಹಾಗೆ ಅವರಿಗೆ ಅಗತ್ಯ ಇರುವ ಸೇವೆ ನೀಡುವುದು ನಮ್ಮ ಜವಾಬ್ದಾರಿ ಎಂದಿದೆ ಟಾಟಾ ಪ್ಲೇ.

Comments are closed.