ಪ್ರತಿಷ್ಠಿತ ಸೈಮಾ ಪ್ರಶಸ್ತಿ ಗೆದ್ದ ಬಳಿಕ “ಅಪ್ಪು ಅಣ್ಣ” ಎಂದು ಕಣ್ಣೀರಿಟ್ಟ ತೆಲುಗಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ಅವಾರ್ಡ್ ಆಗಿರುವ ಸೈಮಾ ಅವಾರ್ಡ್ಸ್ ಈ ಬಾರಿ ಸೆಪ್ಟೆಂಬರ್ 10 ಹಾಗೂ 11ರಂದು ಬೆಂಗಳೂರಿನಲ್ಲಿ ನಡೆದಿದೆ. ಈ ಬಾರಿಯ ಸೈಮ ಅವಾರ್ಡ್ಸ್ ನಲ್ಲಿ ನಮ್ಮನ್ನೆಲ್ಲ ಅಗಲಿರುವ ಅಪ್ಪು ಅವರಿಗೆ ನಮನವನ್ನು ಕೂಡ ಸಲ್ಲಿಸಲಾಗಿದೆ.

ಈ ಬಾರಿ ಹಲವಾರು ಯೋಗ್ಯ ಹಾಗೂ ಸೂಪರ್ ಹಿಟ್ ಕನ್ನಡ ಸಿನಿಮಾಗಳು ಪ್ರತಿಷ್ಠಿತ ಅವಾರ್ಡ್ ಫಂಕ್ಷನ್ ನಲ್ಲಿ ಪ್ರಶಸ್ತಿಯನ್ನು ಗೆಲ್ಲಲು ಯಶಸ್ವಿಯಾಗಿವೆ. ಅದರಲ್ಲಿಯೂ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಸಿನಿಮಾ ಏಳು ವಿಭಾಗಗಳಲ್ಲಿ ಪ್ರಶಸ್ತಿ ಗೆಲ್ಲಲು ನಾಮಿನೇಟ್ ಆಗಿದೆ. ಅದರಲ್ಲಿಯೂ ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಆಗಿರುವ ತಮನ್ ಕೂಡ ಅಪ್ಪು ನಟನೆಯ ಯುವರತ್ನ ಸಿನಿಮಾದ ಭಾಗವಾಗಿ ಸೈಮಾ ಅವಾರ್ಡ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಯುವರತ್ನ ಚಿತ್ರದ ನೀನಾದೆ ಹಾಡು ಕೂಡ ಈ ಅವಾರ್ಡ್ಸ್ ನಲ್ಲಿ ನಾಮಿನೇಷನ್ ಆಗಿತ್ತು. ಈ ಹಾಡು ಪ್ರಶಸ್ತಿ ಗೆದ್ದ ಹಿನ್ನೆಲೆಯಲ್ಲಿ ಗಾಯಕ ಅರ್ಮಾನ್ ಮಲಿಕ್ ಹಾಗೂ ಸಂಗೀತ ನಿರ್ದೇಶಕ ತಮನ್ ಅವರು ಪ್ರಶಸ್ತಿಯನ್ನು ಗೆದ್ದಿದ್ದಾರೆ.

thaman appu | ಪ್ರತಿಷ್ಠಿತ ಸೈಮಾ ಪ್ರಶಸ್ತಿ ಗೆದ್ದ ಬಳಿಕ "ಅಪ್ಪು ಅಣ್ಣ" ಎಂದು ಕಣ್ಣೀರಿಟ್ಟ ತೆಲುಗಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್. ಯಾಕೆ ಗೊತ್ತೇ??
ಪ್ರತಿಷ್ಠಿತ ಸೈಮಾ ಪ್ರಶಸ್ತಿ ಗೆದ್ದ ಬಳಿಕ "ಅಪ್ಪು ಅಣ್ಣ" ಎಂದು ಕಣ್ಣೀರಿಟ್ಟ ತೆಲುಗಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್. ಯಾಕೆ ಗೊತ್ತೇ?? 2

ಸೋಶಿಯಲ್ ಮೀಡಿಯಾದಲ್ಲಿ ತಮನ್ ಅವರು ಈ ಪ್ರಶಸ್ತಿಯನ್ನು ಗೆದ್ದ ಫೋಟೋವನ್ನು ಹಂಚಿಕೊಂಡು ಈ ಪ್ರಶಸ್ತಿ ನಿಮಗಾಗಿ ಅಪ್ಪು ಅಣ್ಣ ಎಂಬುದಾಗಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ತೆಲುಗು ಚಿತ್ರರಂಗದ ಸಂಗೀತ ನಿರ್ದೇಶಕರಾಗಿದ್ದ ತಮನ್ ಕನ್ನಡ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಕಾಲಿಟ್ಟಿದ್ದು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಚಕ್ರವ್ಯೂಹ ಚಿತ್ರದ ಮೂಲಕವೇ. ಈಗ ಸೈಮಾ ಪ್ರಶಸ್ತಿಯನ್ನು ಕನ್ನಡದಲ್ಲಿ ಗೆದ್ದಿರುವುದು ಕೂಡ ಅಪ್ಪು ಅವರ ಸಿನಿಮಾದಿಂದಲೇ ಎಂಬುದು ಮತ್ತೊಂದು ಎಮೋಷನಲ್ ವಿಚಾರ ಎಂದು ಹೇಳಬಹುದಾಗಿದೆ.

Comments are closed.