Toby Cinema: ಟೊಬಿ ಸಿನೆಮಾದ ಕಥೆ ಒಬ್ಬರ ಜೀವನಾಧಾರಿತ ಸಿನಿಮಾ- ಆ ರಿಯಲ್ ಟೊಬಿ ಯಾರು ಗೊತ್ತೇ? ನೈಜ ಕಥೆ ಯಾರದ್ದು ಗೊತ್ತೇ?
Toby Cinema: ಕನ್ನಡದ ಬ್ರಿಲಿಯಂಟ್ ನಟ ಹಾಗೂ ನಿರ್ದೇಶಕ ಎಂದು ಹೆಸರು ಪಡೆದಿರುವವರು ನಟ ರಾಜ್ ಬಿ ಶೆಟ್ಟಿ. ಒಂದು ಮೊಟ್ಟೆಯ ಕಥೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಇವರು, ವಿಭಿನ್ನವಾದ ಕತೆಗಳನ್ನು ಆರಿಸಿ ಸಿನಿಮಾ ಮಾಡುತ್ತಿದ್ದಾರೆ. ಕಳೆದ ವರ್ಷ ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಜೊತೆಯಾಗಿ ನಟಿಸಿದ ಗರುಡ ಗಮನ ವೃಷಭ ವಾಹನ ಸಿನಿಮಾ ಸೂಪರ್ ಹಿಟ್ ಆಗಿ, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು.

ಆ ಸಿನಿಮಾ ನಂತರ ರಾಜ್ ಬಿ ಶೆಟ್ಟಿ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲಕ್ಕೆ ಈಗ ತೆರೆಬಿದ್ದಿದೆ, ರಾಜ್ ಬಿ ಶೆಟ್ಟಿ ಅವರ ಮುಂದಿನ ಸಿನಿಮಾ ಟೋಬಿ. ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಬೆಂಗಳೂರಿನ ಲುಲು ಮಾಲ್ ನಲ್ಲಿ ಲಾಂಚ್ ಆಯಿತು. ಫಸ್ಟ್ ಲುಕ್ ನಲ್ಲಿ ರಾಜ್ ಬಿ ಶೆಟ್ಟಿ ಅವರು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರ ಮುಖ ರಕ್ತಸಿಕ್ತವಾಗಿದೆ. ಮೂಗಿಗೆ ದೊಡ್ಡ ಮೂಗುತ್ತಿ ಹಾಕಿಕೊಂಡಿದ್ದಾರೆ. ಬಹಳ ಕೋಪದಲ್ಲಿ ನೋಡುತ್ತಿರುವ ಹಾಗೆ ಕಾಣುತ್ತಿದೆ.. ಇದನ್ನು ಓದಿ..Sirija: ದಿಡೀರ್ ಎಂದು ರಾಮಾಚಾರಿ ಬಿಟ್ಟ ಸಿರಿಜಾ- ಹೊರಟ್ಟಿದ್ದು ಎಲ್ಲಿದೆ ಗೊತ್ತೇ? ಸಿರಿಜಾ ಮಾಡುತ್ತಿರುವುದೇನು ಗೊತ್ತೆ?
ಈ ಫಸ್ಟ್ ಲುಕ್ ನೋಡಿ ಜನರಿಗೆ ಕುತೂಹಲ ಹೆಚ್ಚಾಗಿದ್ದು, ಟೀಸರ್ ನೋಡಿದರೆ, ಒಬ್ಬ ಸಾಮಾನ್ಯ ಯುವಕ, ಈ ಸಮಾಜದ ಹಾಗೂ ಇಲ್ಲಿನ ವ್ಯಕ್ತಿಗಳಿಂದ ತೊಂದರೆಗೆ ಒಳಗಾಗಿ, ಕ್ರೌರ್ಯದ ಮೂಲಕ ರಿವೆಂಜ್ ತೆಗೆದುಕೊಳ್ಳುವ ಕಥೆ ಎನ್ನುವ ಹಾಗೆ ತೋರುತ್ತಿದೆ. ಇಲ್ಲಿ ಮತ್ತೊಂದು ವಿಶೇಷತೆ ಏನು ಎಂದರೆ, ಇದೊಂದು ಕಾಲ್ಪನಿಕ ಕಥೆಯಲ್ಲ, ಒಬ್ಬ ವ್ಯಕ್ತಿಯ ನಿಜ ಜೀವನವನ್ನು ಆಧರಿಸಿ ಮಾಡಿರುವ ಕಥೆ ಆಗಿದ್ದು, ಸಿನಿಮಾದ ಕಥೆ ಬರೆದಿರುವ ಟಿಕೆ ದಯಾನಂದ್ ಅವರು ತಿಳಿಸಿದ್ದಾರೆ. ಟೀಸರ್ ಲಾಂಚ್ ವೇಳೆ ಮಾತನಾಡಿದ ದಯಾನಂದ್ ಅವರು.
“ಟೋಬಿ ಕಥೆ ಸಿಕ್ಕಿದ್ದು ಕಾರವಾರದಲ್ಲಿ, ಅಲ್ಲಿ ಒಬ್ಬ ವಿಚಿತ್ರವಾದ ವ್ಯಕ್ತಿಯನ್ನು ಭೇಟಿ ಮಾಡಿದೆ. ಆತನ ಕಥೆಯೊಳಗೆ ನಾನು ಹೋದಾಗ, ಅದನ್ನು ಬರೆಯುವವರೆಗೂ ಆ ಕಥೆ ನನ್ನನ್ನು ಕಾಡುತ್ತಿತ್ತು. ಈ ಕಥೆಯನ್ನ ಸಿನಿಮಾಗೋಸ್ಕರ ಅಂತ ಬರೆದಿರಲಿಲ್ಲ, ರಾಜ್ ಬಿ ಶೆಟ್ಟಿ ಅವರು ಕಥೆ ಕೇಳಿದಾಗ ನನ್ನ ಹತ್ತಿರ ಎರಡು ಕಥೆಗಳು ಇದ್ದವು, ಒಂದು ಟೋಬಿ ಮತ್ತೊಂದು ಒಂದು ನಾಯಿಯ ಕಥೆ, ಟೋಬಿ ಕಥೆ ರಾಜ್ ಬಿ ಶೆಟ್ಟಿ ಅವರಿಗೆ ಇಷ್ಟವಾಗುತ್ತೆ ಅಂತ ಭಾವಿಸಿರಲಿಲ್ಲ. ಅವರು ಆ ಕಥೆಯನ್ನೇ ಒಪ್ಪಿ ಸಿನಿಮಾ ಮಾಡಿದರು. ಇದನ್ನು ಓದಿ..RBI New Rules: ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಂಡ RBI- ಇನ್ನು ಮುಂದೆ ಮಾದ್ಯಮವರ್ಗದವರಿಗೆ ಬಿಗ್ ಶಾಕ್.
ಒಬ್ಬ ವ್ಯಕ್ತಿಯನ್ನ ನೋಡಿದಾಗ, ಈ ವ್ಯಕ್ತಿ ಹೀಗೆ ಎಂದು ಹೇಳಬಹುದು. ಆದರೆ ಟೋಬಿ ನಾವು ಅಂದುಕೊಂಡ ಹಾಗಲ್ಲ, ನಮ್ಮನ್ನು ನಗಿಸುತ್ತಾನೆ, ಅಳಿಸುತ್ತಾನೆ, ಕೋಪ ಬರುವ ಹಾಗೆ ಮಾಡುತ್ತಾನೆ. ಒಂದು ಹೀರೋ ಪಾತ್ರಕ್ಕೆ ಇದು ಬಹಳ ವಿಭಿನ್ನವಾಗಿರುವ ಪಾತ್ರ..ಈ ಘಟನೆಗಳು ನಡೆದದ್ದು ಕಾರವಾರ ಅಂಕೋಲಾದಲ್ಲಿ, ಸಿನಿಮಾ ಕೂಡ ಅಲ್ಲೇ ನಡೆದಿದೆ..” ಎಂದು ದಯಾನಂದ್ ಅವರು ಹೇಳಿದ್ದಾರೆ. ಈ ಎಲ್ಲಾ ಮಾತುಗಳನ್ನು ಕೇಳಿದರೆ, ಟೋಬಿ ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಇನ್ನು ಹೆಚ್ಚಾಗುತ್ತಿದೆ. ಇದನ್ನು ಓದಿ..Railway Food: ರೈಲ್ವೆ ಇಲಾಖೆಯಲ್ಲಿ ಇನ್ನು ಮುಂದೆ ಈ ರೀತಿ ಆದರೆ ಸಂಪೂರ್ಣ ಉಚಿತ ಆಹಾರ- ಪ್ರಯಾಣಿಕರಿಗೆ ಸಿಹಿ ಸುದ್ದಿ.
Comments are closed.