News from ಕನ್ನಡಿಗರು

ವಂದೇ ಮಾತರಂ ಗೀತೆಯಲ್ಲಿ ದರ್ಶನ್ ಹಾಗೂ ಯಶ್ ಕಾಣಿಸಿಕೊಂಡಿಲ್ಲ ಯಾಕೆ ಗೊತ್ತೇ?? ಕೊನೆಗೂ ವಿವಾದಕ್ಕೆ ಜಗ್ಗೇಶ್ ಪ್ರತಿಕ್ರಿಯೆ ಕೊಟ್ಟು ಹೇಳಿದ್ದೇನು ಗೊತ್ತೇ??

24

ನಮಸ್ಕಾರ ಸ್ನೇಹಿತರೆ ಈ ವರ್ಷ ನಾವು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದೇವೆ. ಇದನ್ನು ದೇಶ ಆಜಾದಿ ಕಿ ಅಮೃತ್ ಮಹೋತ್ಸವ ಎನ್ನುವ ದಿನವಾಗಿ ಆಚರಿಸಬೇಕು ಎಂಬುದಾಗಿ ಪ್ರಧಾನಿಗಳು ಕರೆ ಕೊಟ್ಟಿದ್ದರು. ಇನ್ನು ಇದೇ ಸಂದರ್ಭದಲ್ಲಿ ಹರ್ ಘರ್ ತಿರಂಗ ಎಂಬ ಆಚರಣೆಯನ್ನು ಕೂಡ ಮಾಡಬೇಕು ಎನ್ನುವುದಾಗಿ ಸಂದೇಶವನ್ನು ನೀಡಿದ್ದರು. ಅಂದರೆ ಮೂರು ದಿನಗಳ ಕಾಲ ರಾಷ್ಟ್ರಧ್ವಜವನ್ನು ಹಾರಿಸಬೇಕು ಎನ್ನುವ ವಿಚಾರ.

ಇದರ ವಿಶೇಷವಾಗಿ ಭಾರತದದ್ಯಾಂತ ವಿಶೇಷ ಅರ್ಥಪೂರ್ಣ ವಿಡಿಯೋಗಳು ಕೂಡ ಹೊರಬಂದಿದ್ದವು. ಕನ್ನಡ ಚಿತ್ರರಂಗದಿಂದಲೂ ಕೂಡ ಒಂದೇ ಮಾತರಂ ಎನ್ನುವ ಅರ್ಥಪೂರ್ಣವಾದ ವಿಡಿಯೋ ಹೊರಬಂದಿತ್ತು. ಕನ್ನಡ ಮಣ್ಣಿನ ಕಲಾವಿದರು ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಈ ವಿಡಿಯೋ ಒಳಗೊಂಡಿತ್ತು. ಇನ್ನು ಈ ವಿಡಿಯೋದ ಸಂಗೀತ ಸಂಯೋಜನೆ ಹಾಗೂ ಹಾಡುಗಾರಿಕೆಯನ್ನು ನಡೆಸಿ ಕೊಟ್ಟಿದ್ದು ನಮ್ಮೆಲ್ಲರ ನೆಚ್ಚಿನ ಗಾಯಕ ಆಗಿರುವ ವಿಜಯ್ ಪ್ರಕಾಶ್ ರವರು. ಈ ವಂದೇ ಮಾತರಂ ವಿಡಿಯೋದಲ್ಲಿ ಕಿಚ್ಚ ಸುದೀಪ್ ರವಿಚಂದ್ರನ್ ಶಿವರಾಜ್ ಕುಮಾರ್ ರೋರಿಂಗ್ ಸ್ಟಾರ್ ಶ್ರೀಮುರಳಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಮೇಶ್ ಅರವಿಂದ್ ಅನಂತ್ ನಾಗ್ ನವರಸ ನಾಯಕ ಜಗ್ಗೇಶ್ ಗೋಲ್ಡನ್ ಸ್ಟಾರ್ ಗಣೇಶ್ ರಿಷಬ್ ಶೆಟ್ಟಿ ಡಾಲಿ ಧನಂಜಯ್ ಸಾಲುಮರದ ತಿಮ್ಮಕ್ಕ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ಈ ವಿಡಿಯೋದಲ್ಲಿದ್ದರು. ಆದರೆ ಈ ವಿಡಿಯೋದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವಾರು ಚಿತ್ರರಂಗದ ಪ್ರಮುಖ ನಟರು ಕಂಡುಬಂದಿರಲಿಲ್ಲ. ಇದರ ಕುರಿತಂತೆ ಈ ವಿಡಿಯೋ ಸಿದ್ದಪಡಿಸಲು ಸಾರಥ್ಯವನ್ನು ವಹಿಸಿಕೊಂಡಿದ್ದ ನವರಸ ನಾಯಕ ಜಗ್ಗೇಶ್ ರವರ ವಿರುದ್ಧ ಆಕ್ರೋಶಗಳು ಕೇಳಿ ಬರುತ್ತಿದ್ದವು.

ಈ ಆಕ್ರೋಶಕ್ಕೆ ಸಮಜಾಯಿಸಿ ನೀಡಿರುವ ಜಗ್ಗೇಶ್ ರವರು ನಮಗೆ ಈ ವಿಡಿಯೋವನ್ನು ಮಾಡಲು ಇದ್ದಿದ್ದು ಕೇವಲ 13 ದಿನಗಳು ಮಾತ್ರ. ಈ ಸಂದರ್ಭದಲ್ಲಿ ಕೆಲವೊಂದು ಕಾರ್ಯನಿಮಿತ್ತ ನಾನು ಹೊರಗೆ ಇದ್ದೆ ನಂತರ ಬಂದ ಕೂಡಲೇ ಎಲ್ಲಾ ಸೆಲೆಬ್ರಿಟಿ ಗಳಿಗೂ ಕೂಡ ಕರೆ ಮಾಡಿ ಈ ಕುರಿತಂತೆ ತಿಳಿಸಿದ್ದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೆಲೆಬ್ರಿಟಿಗಳ ಜೀವನ ಎಂದರೆ ಅದಾಗಲೇ ಪ್ರೋಗ್ರಾಮ್ ಫಿಕ್ಸ್ ಆಗಿರುತ್ತದೆ. ಹೇಗಿದ್ದರೂ ಕೂಡ ಕನ್ನಡ ಚಿತ್ರರಂಗದ ಹಲವಾರು ನಾಯಕ ನಟರುಗಳು ಈ ವಿಡಿಯೋದಲ್ಲಿ ಭಾಗವಹಿಸಿದ್ದಾರೆ. ದರ್ಶನ್ ಹಾಗೂ ಯಶ್ ರವರಿಗೂ ಕೂಡ ಅಪ್ರೋಚ್ ಮಾಡಿದ್ದೆವು ಅವರು ಕೂಡ ಬರುತ್ತೇವೆ ಎಂದಿದ್ದರು ಆದರೆ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಅವರು ಕೂಡ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂಬುದಾಗಿ ಜಗ್ಗೇಶ್ ಹೇಳಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ಕೂಡ ಥೈಲ್ಯಾಂಡ್ ನಲ್ಲಿ ಇದ್ದ ಕಾರಣ ಈ ಹಾಡಿನ ಚಿತ್ರೀಕರಣಕ್ಕೆ ಬರಲು ಸಾಧ್ಯವಾಗಲಿಲ್ಲವಂತೆ. ದುನಿಯಾ ವಿಜಯ್ ಹಾಗೂ ಉಪೇಂದ್ರ ರವರು ಕೂಡ ಬ್ಯುಸಿ ಇದ್ದ ಕಾರಣ ಬರಲು ಸಾಧ್ಯವಾಗಿರದೆ ಇರಬಹುದು.

Leave A Reply

Your email address will not be published.