ಬಿಗ್ ಬಾಸ್ ಮನೆಯಲ್ಲಿ ಮಹಾ ಎಡವಟ್ಟು ಮಾಡಿಕೊಂಡ ಮಗಳ ಗೌರಿ ಕಾವ್ಯಶ್ರೀ, ಕಾಮಿಡಿ ಕಿಂಗ್ ಗೊಬ್ಬರಗಾಲ ನಡುವೆ ಶುರುವಾಯ್ತು ಮನಸ್ತಾಪ. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ, ದೊಡ್ಡ ರಿಯಾಲಿಟಿ ಶೋ ಎಂದ ಮೇಲೆ ಬಿಗ್ ಬಾಸ್ ಮನೆಯಲ್ಲಿ ಏನಾದರೂ ಒಂದು ತರಲೆ ತುಂಟಾಟಗಳು ನಡೆಯಲೇಬೇಕು. ಆಗಲೇ ತಾನೆ ಪ್ರೇಕ್ಷಕರು ಕಾರ್ಯಕ್ರಮವನ್ನು ಎಂಜಾಯ್ ಮಾಡಲು ಸಾಧ್ಯ. ಇನ್ನು ಈ ಬಾರಿ ಆ ಕಾರ್ಯವನ್ನು ಮಜಾ ಭಾರತ ಖ್ಯಾತಿಯ ವಿನೋದ್ ಗೊಬ್ಬರಗಾಲ ಹಾಗೂ ಮಂಗಳ ಗೌರಿ ಮದುವೆ ಖ್ಯಾತಿಯ ನಟಿ ಕಾವ್ಯಶ್ರೀ ಅವರ ನಡುವೆ ನಡೆಯುತ್ತಿತ್ತು.

ಬಿಗ್ ಬಾಸ್ ಮನೆಗೆ ಬಂದ ದಿನದಿಂದಲೂ ಕೂಡ ಗೊಬ್ಬರಗಾಲ ಕಾವ್ಯಶ್ರೀ ಅವರನ್ನು ರೇಗಿಸುತ್ತಿದ್ದರು ಹಾಗೂ ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಕಾವ್ಯಶ್ರೀ ಕೂಡ ವಿನೋದ್ ಗೊಬ್ಬರಗಾಲ ಅವರ ಬಗ್ಗೆ ಪ್ರಾಸ ಪದದಲ್ಲಿ ರೇಗಿಸುತ್ತಿದ್ದರು. ಆದರೆ ಈ ತಮಾಷೆಯ ವಾಕ್ಸಮರ ಎನ್ನುವುದು ಈಗ ಸೀರಿಯಸ್ ಆಗಿಬಿಟ್ಟಿದೆ. ಕಾವ್ಯಶ್ರೀ ವಿಕ್ರಾಂತ್ ರೋಣದಲ್ಲಿ ಇದ್ದಾರೆ ಗುಮ್ಮ ವಿನೋದ್ ನನ್ನ ತಮ್ಮ ಎನ್ನುವುದಾಗಿ ಹೇಳುತ್ತಾರೆ. ಇದಕ್ಕೆ ವಿನೋದ್ ಗೊಬ್ಬರಗಾಲ ತಮಾಷೆಯಾಗಿ ಇದು ಯಾರು ಆಂಟಿ ಎಂಬುದಾಗಿ ಕಾವ್ಯಶ್ರೀ ಅವರಿಗೆ ರೇಗಿಸುತ್ತಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಾವ್ಯಶ್ರೀ ನೀನು ಯಾಕೆ ನನ್ನ ತಂಟೆಗೆ ಬರುತ್ತೀಯ ನಿನ್ನ ಲಿಮಿಟ್ ಅನ್ನು ಕ್ರಾಸ್ ಮಾಡಬೇಡ ಎಂಬುದಾಗಿ ಹೇಳಿದ್ದಾರೆ.

kavya vinod bbk9 | ಬಿಗ್ ಬಾಸ್ ಮನೆಯಲ್ಲಿ ಮಹಾ ಎಡವಟ್ಟು ಮಾಡಿಕೊಂಡ ಮಗಳ ಗೌರಿ ಕಾವ್ಯಶ್ರೀ, ಕಾಮಿಡಿ ಕಿಂಗ್ ಗೊಬ್ಬರಗಾಲ ನಡುವೆ ಶುರುವಾಯ್ತು ಮನಸ್ತಾಪ. ಏನಾಗಿದೆ ಗೊತ್ತೇ??
ಬಿಗ್ ಬಾಸ್ ಮನೆಯಲ್ಲಿ ಮಹಾ ಎಡವಟ್ಟು ಮಾಡಿಕೊಂಡ ಮಗಳ ಗೌರಿ ಕಾವ್ಯಶ್ರೀ, ಕಾಮಿಡಿ ಕಿಂಗ್ ಗೊಬ್ಬರಗಾಲ ನಡುವೆ ಶುರುವಾಯ್ತು ಮನಸ್ತಾಪ. ಏನಾಗಿದೆ ಗೊತ್ತೇ?? 2

ವಿನೋದ್ ಗೊಬ್ಬರಗಾಲ ಹಾಗೂ ಕಾವ್ಯಶ್ರೀ ಇಬ್ಬರೂ ಕೂಡ ಉಳಿದ ಬಿಗ್ ಬಾಸ್ ಸದಸ್ಯರೊಂದಿಗೆ ಆಗ ನಡೆದಂತಹ ಘಟನೆಯ ವಿವರಣೆಯನ್ನು ನೀಡುತ್ತಾರೆ. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯ ಮತ್ತೊಬ್ಬ ಸದಸ್ಯ ಆಗಿರುವ ಅರುಣ್ ಸಾಗರ್ ಇಬ್ಬರೂ ಕೂಡ ಜಗಳ ಮಾಡಿಕೊಳ್ಳಬೇಡಿ ಮನಸ್ತಾಪ ಬಿಟ್ಟುಬಿಡಿ ಎಂಬುದಾಗಿ ಇಬ್ಬರನ್ನು ರಾಜಿ ಮಾಡಿಸಲು ಪ್ರಯತ್ನಿಸುತ್ತಾರೆ. ವಿನೋದ್ ಗೊಬ್ಬರಗಾಲ ಕೂಡ ಕಾವ್ಯಶ್ರೀ ಅವರನ್ನು ಮಾತನಾಡಿಸಲು ಹೋದಾಗ ನೀನು ನನ್ನನ್ನು ಮಾತನಾಡಿಸಬೇಡ ಎಂಬುದಾಗಿ ಕಾವ್ಯಶ್ರೀ ಅವರು ಅಸಹನೆಯಿಂದ ದೂರ ಹೋಗುತ್ತಾರೆ. ನಗಿಸಲು ತಮಾಷೆ ಮಾಡಲು ಹೋಗಿ ಈಗ ವಿನೋದ್ ಗೊಬ್ಬರಗಾಲ ಕಾವ್ಯಶ್ರಿಯ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

Comments are closed.