ಸಾರ್ಥಕ ಆಯಿತು ಯಶ್ ರವರ ಮಾಡಿದ ಮಹಾನ್ ಕಾರ್ಯ: ಮಾಡಿದ ಕೆಲಸ ವ್ಯರ್ಥವಾಗಲಿಲ್ಲ. ತಿಳಿದರೆ ಭೇಷ್ ಅಂತೀರಾ. ಏನಾಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಇಡೀ ಕನ್ನಡ ಚಿತ್ರರಂಗವೇ ಜಾಗತಿಕ ಮಟ್ಟದಲ್ಲಿ ಹೆಮ್ಮೆಪಡುವಂತಹ ಕೆಲಸವನ್ನು ಮಾಡಿದ ಶ್ರೇಯ ರಾಕಿಂಗ್ ಸ್ಟಾರ್ ಯಶ್ ರವರಿಗೆ ಸಲ್ಲುತ್ತದೆ. ಕೇವಲ ಸಿನಿಮಾಗಳ ಮೂಲಕ ಮಾತ್ರವಲ್ಲದೆ ರಾಕಿಂಗ್ ಸ್ಟಾರ್ ಯಶ್ ರವರು ತಮ್ಮ ಯಶೋಮಾರ್ಗ ಫೌಂಡೇಶನ್ ಮೂಲಕವೂ ಕೂಡ ಸಾಕಷ್ಟು ಜನಪರ ಕಾರ್ಯಗಳನ್ನು ಈಗಾಗಲೇ ಮಾಡಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.
ಈ ಹಿಂದೆ ಮಾಡಿರುವ ಕಾರ್ಯ ಈಗ ಫಲಿಸುತ್ತಿದ್ದು ರಾಕಿಂಗ್ ಸ್ಟಾರ್ ಯಶ್ ಮಾಡಿರುವ ಈ ಕೆಲಸದ ಬಗ್ಗೆ ಪ್ರತಿಯೊಬ್ಬರು ಕೂಡ ಹೆಮ್ಮೆಪಟ್ಟುಕೊಳ್ಳುವಂತಹ ಫಲಿತಾಂಶ ಈಗ ಜರುಗಿದೆ. ಅಷ್ಟಕ್ಕೂ ನಡೆದಿರುವುದಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಮಿತ್ರರೇ ರಾಕಿಂಗ್ ಸ್ಟಾರ್ ಯಶ್ ದಂಪತಿಗಳು ಇಬ್ಬರೂ ಕೂಡ ಯಶೋಮಾರ್ಗ ಫೌಂಡೇಶನ್ ಮೂಲಕ 2016ರಲ್ಲಿ ತಲ್ಲೂರು ಕೆರೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ತಲ್ಲೂರು ಕೆರೆ ಹೂಳು ತುಂಬಿಕೊಂಡು ಸಂಪೂರ್ಣವಾಗಿ ಬತ್ತಿ ಹೋಗಿತ್ತು. ಯಶು ಮಾರ್ಗದ ಮೂಲಕ ರಾಕಿಂಗ್ ಸ್ಟಾರ್ ಯಶ್ ಈಕೆರೆಯ ಅಭಿವೃದ್ಧಿ ಕಾರ್ಯವನ್ನು ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಿದ್ದರು.
ಆದರೆ ಈಗ ಈ ಕೆರೆ ತುಂಬಿ ಹರಿದಿದ್ದು ಸುತ್ತಮುತ್ತಲಿನ 10 ಗ್ರಾಮದ ರೈತರಿಗೆ ಅನುಕೂಲವಾಗಿದೆ. ಯಶೋಮಾರ್ಗ ಫೌಂಡೇಶನ್ ಮೂಲಕ ಮಾಡಿರುವಂತಹ ಈ ಕಾರ್ಯ ಇಂದು ರೈತರ ಕಷ್ಟಗಳನ್ನು ಪರಿಹರಿಸಲು ಜೀವ ಜಲದಂತೆ ಪರಿಣಮಿಸುತ್ತಿದೆ. ಈ ಯಶೋಗಾಥೆಯನ್ನು ಯಶೋಮಾರ್ಗ ಫೌಂಡೇಶನ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಜೊತೆಗೆ ಹಂಚಿಕೊಂಡಿದೆ. ಅಂದಿನಿಂದ ಇಂದಿನವರೆಗೂ ಕೂಡ ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಕೆರೆಕಟ್ಟೆಗಳು ಸೇರಿದಂತೆ ಇನ್ನಿತರ ಜನಪಯೋಗಿ ಕಾಮಗಾರಿಯನ್ನು ಯಶೋಮಾರ್ಗ ಫೌಂಡೇಶನ್ ನಡೆಸಿಕೊಂಡು ಬರುತ್ತಲೇ ಇದೆ.
Comments are closed.