Virat Kohli: ಎರಡು ಟೀಮ್ ನವರು ಶತಕ ಗಳಿಸಿದ್ದಾರೆ- ಕೊಹ್ಲಿ ಗಿಂತ ಹೆಚ್ಚು ರನ್ ಗಳಿಸಿದ್ದು ಕ್ಲಾಸೇನ್, ಪಂದ್ಯ ಶ್ರೇಷ್ಠ ಪಡೆದಿದ್ದು ಯಾರು ಗೊತ್ತೇ?? ಬೇರೆಯವರಿಗೆ ಉರಿ ಯಾಕೆ??
Virat Kohli: ಐಪಿಎಲ್ (IPL) ನಲ್ಲಿ ಈಗ ಅಂತಿಮ ಹಂತದ ಲೀಗ್ ಪಂದ್ಯಗಳು ನಡೆಯುತ್ತಿದ್ದು, ಎಲ್ಲಾ ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ, ಪ್ಲೇಆಫ್ಸ್ ತಲುಪಲು ತಂಡಗಳ ನಡುವೆ ಪೈಪೋಟಿ ಜೋರಾಗಿಯೇ ಇದೆ. ಆರ್ಸಿಬಿ (RCB) ತಂಡ ಪ್ಲೇಆಫ್ಸ್ ತಲುಪುವ ಹಾದಿಯನ್ನು ನಿನ್ನೆಯ ಗೆಲುವಿನ ನಂತರ ಸುಲಭವಾಗಿಸಿಕೊಂಡಿದೆ. ನಿನ್ನೆ ಹೈದರಾಬಾದ್ ನಲ್ಲಿ ನಡೆದ ಆರ್ಸಿಬಿ ವರ್ಸಸ್ ಎಸ್.ಆರ್.ಹೆಚ್ (RCB vs SRH) ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ .
ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಎಸ್.ಆರ್.ಹೆಚ್ ತಂಡದಲ್ಲಿ ಹೆನ್ರಿಚ್ ಕ್ಲಾಸೆನ್ (Henrich Klaasen) ಅವರ ಕ್ಲಾಸಿಕ್ ಸೆಂಚುರಿ ಇಂದ ಎಸ್.ಆರ್.ಹೆಚ್ (SRH) ತಂಡವು 20 ಓವರ್ ಗಳಲ್ಲಿ 186 ರನ್ಸ್ ಗಳಿಸಿತು. ಎಸ್.ಆರ್.ಹೆಚ್ ತಂಡದ ಕ್ಯಾಪ್ಟನ್ ಏಡನ್ ಮಾರ್ಕ್ರಮ್ (Aiden Markram) ಹಾಗೂ ಕ್ಲಾಸೆನ್ ಅವರ ಜೊತೆಯಾಟದಿಂದ ಎಸ್.ಆರ್.ಹೆಚ್ ತಂಡ ಇಷ್ಟು ರನ್ಸ್ ಕಲೆ ಹಾಕಲು ಸಾಧ್ಯವಾಯಿತು. ಇಲ್ಲಿ ಆರ್ಸಿಬಿ ತಂಡದ ಬೌಲಿಂಗ್ ಬಗ್ಗೆ ಮೆಚ್ಚಲೇಬೇಕು, ಬ್ರೇಸ್ ವೆಲ್ ಅವರು ಒಂದೇ ಓವರ್ ನಲ್ಲಿ 2 ವಿಕೆಟ್ಸ್ ಪಡೆದರು. ಇದನ್ನು ಓದಿ..Surya Nutan: ಇದಪ್ಪ ಹಬ್ಬ ಅಂದ್ರೆ- ಒಮ್ಮೆ ಖರೀದಿ ಮಾಡಿದರೇ, ಜೀವನದಲ್ಲಿ ಗ್ಯಾಸ್ ಸಿಲಿಂಡರ್ ಬೇಡ. ಈ ಸ್ಟೌವ್ ಬೆಲೆ ಎಷ್ಟು ಗೊತ್ತೇ??
ಇನ್ನು ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಗೆ ಬಂದ ಆರ್ಸಿಬಿಯ ಓಪನರ್ಸ್ ಅದ್ಭುತ ಪ್ರದರ್ಶನ ನೀಡಿದರು.ವಿರಾಟ್ ಕೊಹ್ಲಿ (Virat Kohli) ಅವರು 63 ಎಸೆತಗಳಲ್ಲಿ 100 ರನ್ಸ್ ಚಚ್ಚಿದರು ಅದರಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದೆ. ಹಾಗೆಯೇ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ (Faf du Plessis) ಅವರು 47 ಎಸೆತಗಳಲ್ಲಿ 71 ರನ್ಸ್ ಗಳಿಸಿದರು, ಇದರಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿ ಸೇರಿದೆ. ಇವರಿಬ್ಬರ ಜೊತೆಯಾಟ ಬಹುತೇಕ ಅಂತಿಮ ಹಂತದವರೆಗೂ ವಿಕೆಟ್ಸ್ ಕಳೆದುಕೊಳ್ಳದೆ ಅದ್ಭುತ ಪ್ರದರ್ಶನ ಕಂಡುಬಂದಿತು. ಸೆಂಚುರಿ ನಂತರ ವಿರಾಟ್ ಅವರು ಔಟ್ ಆದರು, ಬಳಿಕ ಬಂದ ಮ್ಯಾಕ್ಸ್ವೆಲ್ (Glenn Maxwell), ಫಾಫ್ ಅವರು ಔಟ್ ಆದ ನಂತರ ಬಂದ ಬ್ರೇಸ್ ವೆಲ್ (Bracewell) ಇಬ್ಬರು ಕೂಡ ಕ್ರೀಸ್ ನಲ್ಲಿದ್ದು 4 ಎಸೆತ ಬಾಕಿ ಇರುವಾಗಲೇ ತಂಡವನ್ನು ಗೆಲ್ಲಿಸಿದರು.
ಈ ಪಂದ್ಯ ಮುಗಿದ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿ ಬಂದಿದ್ದು ಸೆಂಚುರಿ ಹೊಡೆದ ವಿರಾಟ್ ಕೊಹ್ಲಿ ಅವರಿಗೆ ಸಿಕ್ಕಿತು. ಆದರೆ ಸಿ.ಎಸ್.ಕೆ (CSK) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡದ ಅಭಿಮಾನಿಗಳು ವಿರಾಟ್ ಅವರಿಗೆ ಪಂದ್ಯಶ್ರೇಷ್ಠ ನೀಡಿದ್ದಕ್ಕೆ ಕೋಪಗೊಂಡಿದ್ದಾರೆ. ವಿರಾಟ್ ಅವರಿಗಿಂತ ಉತ್ತಮ ಪ್ರದರ್ಶನ ನೀಡಿದ್ದು ಕ್ಲಾಸೆನ್, ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಹೆಚ್ಚು ವೇಗವಾಗಿ ಸೆಂಚುರಿ ಭಾರಿಸಿದರು, ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೊಡಬೇಕಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ, ಹಾಗೆಯೇ ವಿರಾಟ್ ಅವರನ್ನು ಟ್ರೋಲ್ ಮಾಡುವ ಪ್ರಯತ್ನದಲ್ಲಿದ್ದಾರೆ. ಇದನ್ನು ಓದಿ..Savings Scheme: ಕೇವಲ 200 ರೂಪಾಯಿ ಹೂಡಿಕೆಯಿಂದ ಒಂದಲ್ಲ ಎರಡಲ್ಲ 10 ಲಕ್ಷ ಪಡೆಯುವುದು ಹೇಗೆ ಗೊತ್ತೇ??
Comments are closed.