ಹಲವಾರು ವರ್ಷಗಳು ಕಾದ ಬಳಿಕ ಕೊನೆಗೂ ತನ್ನ ಕನಸಿನ ಮನೆ ಖರೀದಿ ಮಾಡಿದ ವೈಷ್ಣವಿ ಗೌಡ, ಈ ಮನೆಯ ಬೆಲೆ ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಧಾರವಾಹಿ ಪ್ರತಿಯೊಂದು ಮನೆಯಲ್ಲಿ ಕೂಡ ಜನಪ್ರಿಯವಾಗುವಂತೆ ಮಾಡಿರುವ ಧಾರವಾಹಿ ಎಂದು ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಎಂದರೆ ನಿಜಕ್ಕೂ ತಪ್ಪಾಗಲಾರದು. ಈ ಧಾರವಾಹಿಯ ಮೂಲಕವೇ ಸನ್ನಿಧಿ ಪಾತ್ರಧಾರಿಯಾಗಿ ವೈಷ್ಣವಿ ಗೌಡರವರು ಕರ್ನಾಟಕದ ಮನೆಮನೆಗೂ ಕೂಡ ತಲುಪುತ್ತಾರೆ. ಇಂದಿಗೂ ಕೂಡ ಸನ್ನಿಧಿ ಎನ್ನುವುದಾಗಿಯೇ ವೈಷ್ಣವಿ ಗೌಡ ರವರನ್ನು ಎಲ್ಲರೂ ಕರೆಯುತ್ತಾರೆ. ಇನ್ನೂ ಕನ್ನಡದ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ಮೂಲಕವೂ ಕೂಡ ಎಲ್ಲರ ಮನೆ ಗೆಲ್ಲುವುದರಲ್ಲಿ ಯಶಸ್ವಿಯಾಗುತ್ತಾರೆ.

ಜೀ ಕನ್ನಡದ ದೇವಿ ಧಾರವಾಹಿ ಹಾಗೂ ಕುಣಿಯೋಣು ಬಾರ ರಿಯಲ್ಟಿ ಶೋ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು ಆದರೆ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದವು ಮಾತ್ರ ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರಾವಾಹಿ. ಪ್ರತಿಯೊಂದು ಮನೆಯವರೂ ಕೂಡ ವೈಷ್ಣವಿ ಗೌಡ ರವರನ್ನು ತಮ್ಮ ಮನೆಮಗಳಂತೆ ನೋಡುತ್ತಾರೆ. ಅದರಲ್ಲೂ ಬಿಗ್ ಬಾಸ್ ನಲ್ಲಿ ಅವರನ್ನು ನಿಜವಾಗಿ ನೋಡಿದ ನಂತರ ಅವರ ಮೇಲಿರುವ ಗೌರವ ಪ್ರೀತಿ ಪ್ರೇಕ್ಷಕರಲ್ಲಿ ಇನ್ನೂ ಹೆಚ್ಚಾಯಿತು.

vaishnavi gowda | ಹಲವಾರು ವರ್ಷಗಳು ಕಾದ ಬಳಿಕ ಕೊನೆಗೂ ತನ್ನ ಕನಸಿನ ಮನೆ ಖರೀದಿ ಮಾಡಿದ ವೈಷ್ಣವಿ ಗೌಡ, ಈ ಮನೆಯ ಬೆಲೆ ಎಷ್ಟು ಕೋಟಿ ಗೊತ್ತೇ??
ಹಲವಾರು ವರ್ಷಗಳು ಕಾದ ಬಳಿಕ ಕೊನೆಗೂ ತನ್ನ ಕನಸಿನ ಮನೆ ಖರೀದಿ ಮಾಡಿದ ವೈಷ್ಣವಿ ಗೌಡ, ಈ ಮನೆಯ ಬೆಲೆ ಎಷ್ಟು ಕೋಟಿ ಗೊತ್ತೇ?? 3

ಇಷ್ಟೊಂದು ಜೀವನದಲ್ಲಿ ಸಾಧಿಸಿದ್ದರೂ ಕೂಡ ವೈಷ್ಣವಿ ಗೌಡರವರು ನಟಿಯಾಗಿ ಯಾವುದೇ ಹಮ್ಮು-ಬಿಮ್ಮುಗಳನ್ನು ತಮ್ಮ ಅಭಿಮಾನಿಗಳೆದುರು ತೋರಿಸಿಕೊಳ್ಳುವುದಿಲ್ಲ. ಈ ಸರಳ ಸದ್ಗುಣ ಭಾವನೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ನಮ್ಮೆಲ್ಲರ ನೆಚ್ಚಿನ ಸನ್ನಿಧಿ ಎಂದು ಹೇಳಬಹುದಾಗಿದೆ. ಇಲ್ಲಿ ಕೇವಲ ನಟನೆ ಮಾತ್ರವಲ್ಲದೆ ಹಲವಾರು ಪ್ರಕಾರದ ನೃತ್ಯಗಳನ್ನು ಕೂಡ ವೈಷ್ಣವಿ ಗೌಡರವರು ಕಲಿತುಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಕೂಡ ವೈಷ್ಣವಿ ಗೌಡ ರವರಿಗೆ ಹಲವಾರು ಪ್ರಾಜೆಕ್ಟ್ಗಳು ಹುಡುಕಿಕೊಂಡು ಬಂದಿವೆ. ಇನ್ನು ಈ ಸಂದರ್ಭದಲ್ಲಿ ಅದೇ ಪ್ರಾಜೆಕ್ಟ್ ಗಳಲ್ಲಿ ವೈಷ್ಣವಿ ಗೌಡರವರು ಬ್ಯುಸಿಯಾಗಿದ್ದಾರೆ.

ಇಂದು ದೊಡ್ಡಮಟ್ಟದ ಸೆಲೆಬ್ರಿಟಿಯಾಗಿ ಮಿಂಚುತ್ತಿರುವ ವೈಷ್ಣವಿ ಗೌಡರವರು ಒಂದು ಕಾಲದಲ್ಲಿ ಡ್ಯಾನ್ಸ್ ಹೇಳಿಕೊಡುವ ಟೀಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ವೈಷ್ಣವಿ ಗೌಡರವರು 1600 ರೂಪಾಯಿ ಸಂಭಾವನೆಯನ್ನು ಈ ಕೆಲಸಕ್ಕಾಗಿ ಪಡೆಯುತ್ತಿದ್ದರು. ಇನ್ನು ಈಗ ಕಿರುತೆರೆಯ ನಟಿ ನಿರೂಪಕಿ ಹಾಗೂ ಈಗ ಸಿನಿಮಾದಲ್ಲಿ ನಾಯಕ ನಟಿಯಾಗಿ ಕೂಡ ಕಾಣಿಸಿಕೊಳ್ಳುವ ಮೂಲಕ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಇನ್ನು ಸದ್ಯಕ್ಕೆ ತಮ್ಮ ಪೋಷಕರ ಕನಸಿನ ಮನೆಯನ್ನು ಕಟ್ಟುವ ಮೂಲಕ ಜೀವನದಲ್ಲಿ ಮತ್ತೊಂದು ಯಶಸ್ಸಿನ ಗರಿಯನ್ನು ಕೂಡ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ತಮ್ಮ ಕನಸಿನ ಮನೆಯನ್ನು ಖರೀದಿಸಿರುವ ವೈಷ್ಣವಿ ಗೌಡರವರು ಗೃಹಪ್ರವೇಶ ವನ್ನು ಮಾಡಿ ಶಾಸ್ತ್ರೋಕ್ತವಾಗಿ ಹೋಮ-ಹವನಗಳನ್ನು ಮಾಡಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯ ಗೆಳೆಯರು ಕೂಡ ವೈಷ್ಣವಿ ಗೌಡ ರವರ ಗೃಹಪ್ರವೇಶ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದ್ದಾರೆ. ಈ ಫೋಟೋಗಳು ಕೂಡ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಚಂದನ್ ಶೆಟ್ಟಿ ನಿವೇದಿತಾ ಗೌಡ ಸೇರಿದಂತೆ ಹಲವಾರು ಬಿಗ್ಬಾಸ್ ಮೂಲದ ಸೆಲೆಬ್ರಿಟಿಗಳು ಸೇರಿದಂತೆ ಎಲ್ಲರೂ ಕೂಡ ವೈಷ್ಣವಿ ಗೌಡರವರ ಹೊಸ ಮನೆಯ ಗ್ರಹಪ್ರವೇಶದ ಹಿನ್ನೆಲೆಯಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.

vaishnavi gowda 2 | ಹಲವಾರು ವರ್ಷಗಳು ಕಾದ ಬಳಿಕ ಕೊನೆಗೂ ತನ್ನ ಕನಸಿನ ಮನೆ ಖರೀದಿ ಮಾಡಿದ ವೈಷ್ಣವಿ ಗೌಡ, ಈ ಮನೆಯ ಬೆಲೆ ಎಷ್ಟು ಕೋಟಿ ಗೊತ್ತೇ??
ಹಲವಾರು ವರ್ಷಗಳು ಕಾದ ಬಳಿಕ ಕೊನೆಗೂ ತನ್ನ ಕನಸಿನ ಮನೆ ಖರೀದಿ ಮಾಡಿದ ವೈಷ್ಣವಿ ಗೌಡ, ಈ ಮನೆಯ ಬೆಲೆ ಎಷ್ಟು ಕೋಟಿ ಗೊತ್ತೇ?? 4

ಇನ್ನು ಸಾಕಷ್ಟು ಕಷ್ಟ ಪಟ್ಟು ದುಡಿದಿರುವ ನಾಲ್ಕು ಕೋಟಿ ರೂಪಾಯಿ ಹಣದಲ್ಲಿ ಈ ಮನೆಯನ್ನು ಖರೀದಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ವೈಷ್ಣವಿ ಗೌಡರವರು ನಾಯಕಿಯಾಗಿ ನಿರೂಪಕಿಯಾಗಿ ಈಗ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಕ್ರಿಯೇಟ್ ಮಾಡುವ ಮೂಲಕ ಹೊಸ ಹೊಸ ಪ್ರಯೋಗಾತ್ಮಕ ವಿಭಾಗಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. ವೈಷ್ಣವಿ ಗೌಡ ರವರಿಗೆ ಇನ್ನಷ್ಟು ಮತ್ತು ಯಶಸ್ಸು ದೊರಕಲಿ ಎಂದು ಹಾರೈಸುತ್ತೇವೆ. ಇನ್ನು ವೈಷ್ಣವಿ ಗೌಡರವರ ಹೊಸ ಮನೆಯ ಫೋಟೋಗಳನ್ನು ನೀವು ಕೂಡ ನೋಡಬಹುದಾಗಿದೆ.

Comments are closed.