ಬೇರೆ ಬಿಡಿ ಕೆಜಿಎಫ್ ಚಾಪ್ಟರ್ 2 ನಲ್ಲಿ ಯಶ್ ಹಾಗೂ ಅಧೀರನ ನಡುವೆ ಕ್ಲೈಮ್ಯಾಕ್ಸ್ ಫೈಟ್ ಗೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ?? ಯಪ್ಪಾ ಇಷ್ಟೊಂದಾ??
ನಮಸ್ಕಾರ ಸ್ನೇಹಿತರೇ ಇಡೀ ಭಾರತೀಯ ಚಿತ್ರರಂಗದಲ್ಲಿ ಸದ್ಯಕ್ಕೆ ಅತ್ಯಂತ ಹೆಚ್ಚಾಗಿ ಕೇಳಿಬರುತ್ತಿರುವ ಚಿತ್ರದ ಹೆಸರೆಂದರೆ ಅದು ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2. ಕೆಜಿಎಫ್ ಚಾಪ್ಟರ್ 2 ಚಿತ್ರದ ಕುರಿತಂತೆ ಈಗಾಗಲೇ ಬಾಲಿವುಡ್ ನಿಂದ ಹಿಡಿದು ಹಾಲಿವುಡ್ ನವರೆಗೂ ಕೂಡ ಜನಪ್ರಿಯತೆ ಎನ್ನುವುದು ಹರಡಿ ಬಿಟ್ಟಿದೆ. ಮೊದಲ ಕೆಜಿಎಫ್ ನ ಆವೃತ್ತಿಯಿಂದ ಬಂದಂತಹ ಯಶಸ್ಸಿನಿಂದಾಗಿ ಕೆಜಿಎಫ್ ಚಿತ್ರತಂಡ ಈ ಬಾರಿ ಎರಡನೇ ಆವೃತ್ತಿಗಾಗಿ ದೊಡ್ಡಮಟ್ಟದ ಬಜೆಟನ್ನು ಹೂಡಿದೆ.
ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಇದಕ್ಕೆ ಸಂಪೂರ್ಣ ಪರಿಪಕ್ವ ವಾದಂತಹ ಉದಾಹರಣೆಯಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ರಾಕಿಂಗ್ ಸ್ಟಾರ್ ಯಶ್ ರವರ ಸಂಭಾವನೆ ಕೂಡ ಈ ಚಿತ್ರದಲ್ಲಿ ಹೆಚ್ಚಾಗಿದೆ ಎಂದರೆ ಅದಕ್ಕೆ ನಿಜವಾದ ಕಾರಣ ಕೆಜಿಎಫ್ ಚಿತ್ರದ ಮೊದಲ ಆವೃತ್ತಿಯ ಜನಪ್ರಿಯತೆ. ಇನ್ನು ಈಗಾಗಲೇ ರಾಕಿಭಾಯ್ ಹಾಗೂ ಅಧೀರನ ನಡುವಿನ ಕಾಳಗವನ್ನು ನೋಡಲು ಎಲ್ಲರೂ ಕಾತರರಾಗಿದ್ದಾರೆ. ಮಾತ್ರವಲ್ಲದೆ ಸಂಜಯ್ ದತ್ ರವರ ಅಧೀರನ ಫಸ್ಟ್ ಲುಕ್ ಪೋಸ್ಟರ್ ಕೂಡ ಈಗಾಗಲೇ ಬಹುತೇಕ ಭಾರತೀಯ ಚಿತ್ರರಂಗದ ಎಲ್ಲಾ ಮೂಲೆಯಲ್ಲಿ ಕೂಡ ಮಾಡಿದೆ.
ಇನ್ನು ರಾಕಿಬಾಯ್ ಹಾಗೂ ಅಧೀರನ ನಡುವೆ ನಡೆಯುವ ಕದನದ ಕುರಿತಂತೆ ಎಲ್ಲರಿಗೂ ಕುತೂಹಲವಿದ್ದು ಇದಕ್ಕಾಗಿ ಸಾಕಷ್ಟು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಆಗಿದ್ದರೆ ಈ ಕ್ಲೈಮ್ಯಾಕ್ಸ್ ಫೈಟ್ ಗೆ ಎಷ್ಟು ರೂಪಾಯಿ ಖರ್ಚಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ರಾಕಿ ಬಾಯ್ ಹಾಗೂ ಅಧೀರನ ಕ್ಲೈಮ್ಯಾಕ್ಸ್ ಫೈಟ್ ಗೆ ದೊಡ್ಡಮಟ್ಟದ ಸೆಟ್ ಗಳನ್ನು ಹಾಕಲಾಗಿದೆ ಸಹಸ್ರಾರು ಸಂಖ್ಯೆಯಲ್ಲಿ ಜೂನಿಯರ್ ಆರ್ಟಿಸ್ಟ್ ಗಳನ್ನು ಕರೆ ತರಲಾಗಿದೆ. ಮತ್ತು ಈ ಕ್ಲೈಮ್ಯಾಕ್ಸ್ ಫೈಟ್ ಗೆ ಬರೋಬ್ಬರಿ 12 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಚಿತ್ರ ಇದೇ ಏಪ್ರಿಲ್ 14ರಂದು ಬಿಡುಗಡೆಯಾಗುವ ಎಲ್ಲಾ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದ್ದು ಚಿತ್ರವನ್ನು ದೊಡ್ಡ ಪರದೆ ಮೇಲೆ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.
Comments are closed.