Astrology: ಈ ನಾಲ್ಕು ರಾಶಿಯ ಹುಡುಗರನ್ನು ಹುಡುಗಿಯರೇ ಹಿಂದೆ ಬಿದ್ದು, ಕೇಳಿದ ಎಲ್ಲವನ್ನು ಕೊಡ್ತಾರೆ, ಎಲ್ಲಾ ಹುಡುಗಿಯರಿಗೂ ಇವರೇ ಬೇಕು. ಯಾವ್ಯಾವ ರಾಶಿಗಳು ಗೊತ್ತೇ??
Astrology: ಮದುವೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಕನಸು. ಪ್ರತಿ ಹುಡುಗ ಮತ್ತು ಹುಡುಗಿ ತಮ್ಮ ಮದುವೆಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ತಾವು ಮದುವೆ ಆಗುವ ವ್ಯಕ್ತಿ ಹೀಗೆ ಇರಬೇಕು ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಅದರಲ್ಲು ಹುಡುಗಿಯರಿಗೆ ಈ ಆಸೆ ಮತ್ತು ಕನಸು ಜಾಸ್ತಿ, ಹುಡುಗರು ಹುಡುಗಿಯರನ್ನು ಮೆಚ್ಚಿಸುವುದಕ್ಕೆ ಪಾಡು ಪಡುತ್ತಾರೆ. ಆದರೆ ಕೆಲವು ರಾಶಿಯ ಹುಡುಗರು, ಅವರ ವ್ಯಕ್ತಿತ್ವಕ್ಕೆ ಹುಡುಗಿಯರೇ ಆಕರ್ಷಣೆಗೆ ಒಳಗಾಗಿ, ಅವರ ಹಿಂದೆ ಬೀಳುತ್ತಾರೆ. ಯಾವ ರಾಶಿಯ ಹುಡುಗರು ಗೊತ್ತಾ? ತಿಳಿಸುತ್ತೇವೆ ನೋಡಿ..
ಮಿಥುನ ರಾಶಿ :- ಇವರು ಹುಡುಗಿರನ್ನು ಆಕರ್ಷಿಸಲು ಹೆಚ್ಚು ಎಫರ್ಟ್ಸ್ ಹಾಕುವ ಅವಶ್ಯಕತೆಯೇ ಇಲ್ಲ, ಇವರ ಗುಣ ಮತ್ತು ವ್ಯಕ್ತಿತ್ವಕ್ಕೆ ಹುಡುಗಿಯರೇ ಆಕರ್ಷಿತವಾಗಿ ಇವರ ಹಿಂದೆ ಬೀಳುತ್ತಾರೆ..ಇವರು ಮೃದು ವ್ಯಕ್ತಿತ್ವದ ಜೊತೆಗೆ ಉತ್ತಮವಾಗಿ ಮಾತನಾಡುವ ವ್ಯಕ್ತಿತ್ವ ಹೊಂದಿರುವವರು, ಹಾಗೆಯೇ ರೊಮ್ಯಾಂಟಿಕ್ ಆಗಿರುತ್ತಾರೆ. ಹುಡುಗಿಯರ ಜೊತೆಗೆ ಹೇಗೆ ಮಾತನಾಡಬೇಕು ಎನ್ನುವುದು ಇವರಿಗೆ ಬಹಳ ಚೆನ್ನಾಗಿ ಗೊತ್ತಿರುತ್ತದೆ. ಹುಡುಗಿಯರ ಭಾವನೆಗಳನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಈ ಕಾರಣಕ್ಕೆ ಹುಡುಗಿಯರಿಗೆ ಇವರನ್ನು ಕಂಡರೆ ತುಂಬಾ ಇಷ್ಟ. ಇದನ್ನು ಓದಿ..Rahu Ketu: ಈ ರಾಶಿಗಳು ಕಷ್ಟವನ್ನು ಮರೆತು ಬಿಡಿ- ರಾಹು ಕೇತು ಒಟ್ಟಾಗಿ ಅದೃಷ್ಟ ನೀಡಲು ಬಂದಿದ್ದಾರೆ. ವರ್ಷ ಪೂರ್ತಿ ನೀವು ಸುಮ್ಮನೆ ಕೂತರು ದುಡ್ಡು. ಯಾವ ರಾಶಿಗಳಿಗೆ ಗೊತ್ತೇ?
ಸಿಂಹ ರಾಶಿ :- ಈ ರಾಶಿಯವರು ಪ್ರಾಮಾಣಿಕರು, ಹಾಗೆಯೇ ಬಹಳ ರೋಮ್ಯಾಂಟಿಕ್ ಆಗಿದ್ದು, ಸಂಬಂಧಗಳಿಗೆ ಬೆಲೆ ಕೊಡುತ್ತಾರೆ. ಇವರೊಡನೆ ಇರಬೇಕು ಎಂದು ಹುಡುಗಿಯರಿಗೆ ಇಷ್ಟವಾಗುತ್ತದೆ. ಹಾಗೆಯೇ ಇವರೊಡನೆ ಹುಡುಗಿಯರು ನಾಚಿಕೆ ಪಡುವುದಿಲ್ಲ. ಚೆನ್ನಾಗಿ ಓದಿಕೊಂಡಿರುವ ಇವರ ಮೇಲೆ ಹುಡುಗಿಯರಿಗೆ ಆಕರ್ಷಣೆ ಆಗುತ್ತದೆ. ನೋಡಲು ಬಹಳ ಸುಂದರವಾಗಿ ಇರುವುದರ ಜೊತೆಗೆ, ಆಕರ್ಷಕವಾಗಿರುತ್ತದೆ ಇವರ ನಡೆ ನುಡಿ. ಹುಡುಗಿಯರು ಇವರನ್ನು ಮೊದಲ ಸಾರಿ ನೋಡಿದರೆ, ಪ್ರೀತಿಯಲ್ಲಿ ಬೀಳುತ್ತಾರೆ.
ತುಲಾ ರಾಶಿ :- ಸಾಮಾನ್ಯವಾಗಿ ಹುಡುಗರು ಪ್ರೀತಿಯನ್ನು ಪಡೆದುಕೊಂಡ ನಂತರ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಿ, ಪ್ರೀತಿಯನ್ನು ಕಡೆಗಣಿಸುತ್ತಾರೆ. ಆದರೆ ತುಲಾ ರಾಶಿಯವರು ಪ್ರೀತಿ ಮತ್ತು ಕೆಲಸ ಎರಡನ್ನು ಕೂಡ ಸಮರ್ಥಕವಾಗಿ ನಿಭಾಯಿಸುತ್ತಾರೆ. ಎಲ್ಲರೊಡನೆ ಸ್ನೇಹದಿಂದ ಇರುವ ಇವರು ಕೆಟ್ಟ ಮಾತುಗಳನ್ನು ಬಳಸುವುದಿಲ್ಲ., ಹಾಗಾಗಿ ಹುಡುಗಿಯರಿಗೆ ಇವರೊಡನೆ ಸ್ನೇಹ ಮಾಡಲು ಇಷ್ಟವಾಗುತ್ತದೆ. ಹಾಗಾಗಿ ಹುಡುಗಿಯರಿಗೆ ಇವರ ಮೇಲೆ ಆಕರ್ಷಣೆ ಶುರುವಾಗುತ್ತದೆ. ಇದನ್ನು ಓದಿ..Business Idea: ಅಲ್ಲಲ್ಲಿ ಇರುವ ಖಾಲಿ ಜಾಗದಲ್ಲಿ ಈ ಚಿಕ್ಕ ಕೆಲಸ ಮಾಡಿ, ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಆದಾಯ. ಹೇಗೆ ಗೊತ್ತೇ??
ಮಕರ ರಾಶಿ :- ನೋಡಲು ಸುಂದರವಾಗಿರುವ ಇವರು ಮೊದಲ ಸಾರಿಯೇ ಹುಡುಗಿಯರು ತಮ್ಮ ಕಡೆಗೆ ನೋಡುವ ಹಾಗೆ ಆಕರ್ಷಕರಾಗಿರುತ್ತಾರೆ. ಇವರ ವ್ಯಕ್ತಿತ್ವ ಹುಡುಗಿಯರನ್ನು ಆಕರ್ಷಿಸುತ್ತದೆ. ಇವರ ಮಾತು ನಡವಳಿಕೆ ಸ್ವಭಾವ ಎಲ್ಲವೂ ಕೂಡ ಹುಡುಗಿಯರಿಗೆ ಇವರ ಜೊತೆಯಲ್ಲೇ ಇರಬೇಕು ಎಂದು ಅನ್ನಿಸುವ ಹಾಗೆ ಮಾಡುತ್ತದೆ. ಈ ನಾಲ್ಕು ರಾಶಿಗಳು ಸುಲಭವಾಗಿ ಹುಡುಗಿಯರನ್ನು ಆಕರ್ಷಿಸುತ್ತಾರೆ.
Comments are closed.