Kannada Story: ಹೆಂಡತಿ ಕೊಟ್ಟ ಸುಖಕ್ಕೆ ಆಸೆ ಬಿದ್ದು, ಅಮ್ಮನನ್ನು ಹೊರಹಾಕಿದ ಮಗ: ಆದರೆ, ಇಡೀ ದೇಶವೇ ನಿಂತು ಹೋಗುವ ಹಾಗೆ ಅಮ್ಮ ಮಾಡಿದ್ದೇನು ಗೊತ್ತೇ?
Kannada Story: ಈ ಪ್ರಪಂಚದಲ್ಲಿ ತನ್ನ ಬಗ್ಗೆ ತಾನು ಯೋಚಿಸದೆ, ಯಾವಾಗಲೂ ಮಕ್ಕಳ ಬಗ್ಗೆ ಮಾತ್ರ ಯೋಚನೆ ಮಾಡುವ ಅದೊಂದು ಜೀವ ಎಂದರೆ ತಾಯಿ ಮಾತ್ರ. ಆದರೆ ಅಂತಹ ತಾಯಿಗೆ ನೋವು ಕೊಡುವ ಮಕ್ಕಳು ಕೂಡ ಇದ್ದಾರೆ. ಹೀಗೆ ಹೆಂಡತಿ ಮಾತು ಕೇಳಿದ ಈ ವ್ಯಕ್ತಿ ತನ್ನ ತಾಯಿಯನ್ನೇ ಹೊರಹಾಕಿದ, ನಂತರ ತಾಯಿ ಮಾಡಿದ್ದೇನು ಗೊತ್ತಾ? ತಿಳಿಸುತ್ತೇವೆ ನೋಡಿ.. ಈ ತಾಯಿಯ ಹೆಸರು ಜಯಮ್ಮ. ಇವರಿಗೆ ಮಗುವಿಗೆ 3 ವರ್ಷವಿದ್ದಾಗಲೇ ಗಂಡನನ್ನು ಕಳೆದುಕೊಂಡರು. ಜಯಮ್ಮ ಅವರು ಮಗನನ್ನು ಸಾಕಬೇಕೆನ್ನುವ ಜವಾಬ್ದಾರಿಯಿಂದ ತಾವೇ ಒಂದು ಕಿರಾಣಿ ಅಂಗಡಿ ಶುರುಮಾಡಿ, ಮಗನಿಗೆ ಪ್ರವೀಣ ಎಂದು ಹೆಸರಿಟ್ಟು, ಕೆಲಸ ಮಗ ಇಬ್ಬರನ್ನು ಚೆನ್ನಾಗಿ ನೋಡಿಕೊಂಡು, ಮಗನನ್ನು ಬಿಕಾಮ್ ಓದಿಸಿದರು.
ನಂತರ ಇವರ ಮಗನಿಗೆ ಒಳ್ಳೆಯ ಕೆಲಸ ಸಿಕ್ಕಿ, ಮೊದಲ ಸಂಬಳವನ್ನು ತೆಗೆದುಕೊಂಡು ತಾಯಿ ಹತ್ತಿರ ಬಂದಾಗ, ಬಹಳ ಸಂತೋಷಗೊಂಡ ಜಯಮ್ಮ ಅವರು ಮಗನಿಗೆ ಒಂದು ಒಳ್ಳೆಯ ಹುಡುಗಿಯನ್ನು ಹುಡುಕಬೇಕು ಎಂದುಕೊಂಡರು. ಆದರೆ ಮಗ ಕಾಲೇಜಿನಲ್ಲಿ ಒಂದು ಹುಡುಗಿಯನ್ನು ಪ್ರೀತಿಸಿದ ಬಗ್ಗೆ ಹೇಳಿದಾಗ, ಮಗನ ಆಸೆಗೆ ವಿರೋಧ ಮಾಡದೆ ಆಕೆಯನ್ನೇ ಸೊಸೆಯಾಗಿ ಮನೆತುಂಬಿಸಿಕೊಂಡರು. ಮೂರು ವರ್ಷಗಳ ಕಾಲ ಅತ್ತೆ ಸೊಸೆ ಬಾಂಧವ್ಯ ಚೆನ್ನಾಗಿತ್ತು. ಜಯಮ್ಮ ಅವರಿಗೆ ಮೊಮ್ಮಗ ಕೂಡ ಹುಟ್ಟಿದ. ಆದರೆ ಆ ಸಮಯಕ್ಕ ಜಯಮ್ಮ ಅವರು ಅನಾರೋಗ್ಯಕ್ಕೆ ಒಳಗಾದರು. ಅವರಿಗೆ ಅಸ್ತಮಾ ಇದೆ ಎನ್ನುವ ವಿಚಾರ ಗೊತ್ತಾಗಿ, ಅವರ ಕಿರಾಣಿ ಅಂಗಡಿಯನ್ನು ಮುಚ್ಚಿಸಿದರು. ಜಯಮ್ಮ ಏನು ಮಾಡದೆ ಮನೆಯಲ್ಲಿ ಇರುವ ಹಾಗೆ ಆಯಿತು. ಇದರಿಂದ ಸೊಸೆಗೆ ಅತ್ತೆಯನ್ನು ಕಂಡರೆ ತಿರಸ್ಕಾರ ಶುರುವಾಯಿತು. ನಿಮ್ಮ ಅಮ್ಮನನ್ನು ನೋಡಿಕೊಳ್ಳೋಕೆ ಆಗಲ್ಲ, ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಹೇಳಿದಳು. ಮಗ ಅದಕ್ಕೆ ಒಪ್ಪಲಿಲ್ಲ.. ಇದನ್ನು ಓದಿ..Kannada News: ಒಳ್ಳೆಯ ಹೆಂಡತಿ ಸಿಗುವುದೇ ಕಷ್ಟ; ಆದರೆ ಬಂಗಾರದಂತಹ ಹೆಂಡತಿ ಸಿಕ್ಕ ಮೇಲೆ ಈ ಪತಿ ಮಹರಾಯ, ನವರಂಗಿ ಆಟ ಆಡಲು ಹೋಗಿ ಏನು ಮಾಡಿದ್ದಾನೆ ಗೊತ್ತೇ?
ಒಂದು ದಿನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಂದಾಗ, ಹೆಂಡತಿ ಜಗಳ ಆಡುವುದನ್ನು ತಾಯಿ ಕೇಳಿಸಿಕೊಂಡು, ನಾನು ಮನೆಯಿಂದ ಹೊರಹೋಗಬೇಕಾ ಎಂದು ಕೇಳಿದಾಗ, ಮಗ ಪ್ರವೀಣ ಇಲ್ಲಮ್ಮ ನೀನು ಬೇಗ ಹುಷಾರಾಗ್ತೀಯಾ ಎಂದನು. ಆದರೆ ಕೊನೆಗೆ ಹೆಂಡತಿ ಮಾತು ಕೇಳಿ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿದರು. ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ತಾಯಿಯನ್ನು ನೋಡಿಕೊಂಡು ಹೋಗುತ್ತಿದ್ದ ಪ್ರವೀಣ. ಆದರೆ ಇದ್ದಕ್ಕಿದ್ದ ಹಾಗೆ ಪ್ರವೀಣನ ಮಗನಿಗೆ ಆಕ್ಸಿಡೆಂಟ್ ಆಗಿ, ಆಪರೇಷನ್ ಮಾಡಿಸಲು 5 ಲಕ್ಷ ಬೇಕು ಎಂದು ಡಾಕ್ಫರ್ ಹೇಳಿದರು. ಹಣ ಹೊಂದಿಸುತ್ತಾ ಈ ಸಮಸ್ಯೆಗಳಲ್ಲಿ ತಾಯಿ ಇದ್ದ ಕಡೆಗೆ ಹೋಗಲು ಆಗಿರಲಿಲ್ಲ. ಹಣ ಸಿಗದೆ ಪ್ರವೀಣ ಕಂಗಾಲಾಗಿದ್ದಾಗ, ಅವನ ಜೊತೆಗೆ ಆಫೀಸ್ ನಲ್ಲಿ ಕೆಲಸ ಮಾಡುವವರು ಬಂದು ಹಣ ಕೊಟ್ಟು ಆಪರೇಷನ್ ಮಾಡಿಸಿದರು. ಅದಾದ ನಂತರ ಪ್ರವೀಣ ತಾಯಿಯ ಬಳಿ ಹೋಗಿ ನಡೆದ ವಿಷಯ ಹೇಳಿದಾಗ. ಪರವಾಗಿಲ್ಲಪ್ಪ, ನೀನು ಮಗನನ್ನು ಚೆನ್ನಾಗಿ ನೋಡಿಕೊ ಎಂದು ಹೇಳಿದರು. ಅಲ್ಲಿಂದ ಪ್ರವೀಣ ಮನೆಗೆ ಹೋದ.
ಮತ್ತೆ ಒಂದಷ್ಟು ತಿಂಗಳು ವೃದ್ಧಾಶ್ರಮಕ್ಕೆ ಹೋಗಲು ಆಗಲಿಲ್ಲ. ಆ ಸಮಯಕ್ಕೆ ಅಲ್ಲಿಂದಲೇ ಒಂದು ಪತ್ರ ಬಂದು, ತಕ್ಷಣವೇ ಬರಬೇಕು ಎಂದು ಬರೆದಿತ್ತು. ಏನಾಯಿತೋ ಎಂದು ಗಾಬರಿಯಲ್ಲಿ ಪ್ರವೀಣ ಅಲ್ಲಿಗೆ ಹೋದಾಗ, ಅವನ ತಾಯಿ ವಿಧಿವಶರಾಗಿದ್ದಾರೆ ಎನ್ನುವ ಸುದ್ದಿ ಗೊತ್ತಾಯ್ತು, ಜೊತೆಗೆ ತಾಯಿ ಜಯಮ್ಮ ಒಂದು ಪತ್ರವನ್ನು ಬರೆದಿಟ್ಟಿದ್ದರು, ಪ್ರವೀಣ ಅದನ್ನು ಓದುವುದಕ್ಕೆ ಶುರು ಮಾಡಿದ, ಅದರಲ್ಲಿ ಅವನ ತಾಯಿ ಮೊಮ್ಮಗನ ಆಪರೇಷನ್ ಗೆ ಹಣವನ್ನು ಕೊಟ್ಟಿದ್ದಾಗಿ ಬರೆದಿದ್ದರು. ಆಗಾಗ ಮೊಮ್ಮಗುವನ್ನು ನೋಡಲು ಶಾಲೆಯ ಹತ್ತಿರ ಹೋಗುತ್ತಿದ್ದ ಅಜ್ಜಿ, ಅವನು ಶಾಲೆಗೆ ಬರುತ್ತಿಲ್ಲ ಎಂದು ಗೊತ್ತಾಗಿ ವಿಚಾರಿಸಿದಾಗ, ವಿಷಯ ತಿಳಿದು ತನ್ನ ಟ್ರೀಟ್ಮೆಂಟ್ ಗೆ ಇಟ್ಟುಕೊಂಡಿದ್ದ ಹಣವನ್ನು ಮಗನ ಆಫೀಸಿನವರ ಸಹಾಯದಿಂದ ತಲುಪಿಸುತ್ತಾರೆ. ಅದೇ ಹಣದಿಂದ ಮಗನ ಆಪರೇಷನ್ ಮಾಡಿಸಿದ್ದು, ಈ ಮೊದಲೇ ಹೇಳಿದ್ದರೆ ತಾಯಿಯಿಂದ ಹಣ ಪಡೆಯಬೇಕು ಎಂದು ಮಗನಿಗೆ ನೋವಾಗುತ್ತಿತ್ತು ಎನ್ನುವ ಕಾರಣಕ್ಕೆ ಹೇಳಿರಲಿಲ್ಲ ಎಂದು ತಾಯಿ ಪತ್ರದಲ್ಲಿ ಬರೆದು, ಎಲ್ಲೇ ಇದ್ದರೂ ಚೆನ್ನಾಗಿರು ಎಂದು ಬರೆದಿರುತ್ತಾರೆ. ತಾಯಿಯನ್ನು ಅಂತಹ ಸ್ಥಿತಿಗೆ ತಳ್ಳಿದರು ಸಹ, ಆಕೆಗೆ ಮಗನ ಮೇಲೆ ಇದ್ದ ಪ್ರೀತಿಯನ್ನು ನೋಡಿ, ಮಗ ಕಣ್ಣೀರು ಹಾಕುವುದಕ್ಕೆ ಶುರು ಮಾಡುತ್ತಾನೆ. ಇದನ್ನು ಓದಿ..Kannada Story: ಗಂಡ ಕೆಲಸಕ್ಕೆ ಎಂದು ಬೇರೆ ಊರಿಗೆ ಹೋಗಿದ್ದಕ್ಕೆ ಒಬ್ಬಂಟಿಯಾಗಿ ಇರುವುದಕ್ಕೆ ಮನನೊಂದು, ಗೃಹಿಣಿ ಏನು ಮಾಡಿದ್ದಾಳೆ ಗೊತ್ತೇ?? ಈ ರೀತಿ ಹೆಂಡತಿ ಬೇಕೇ?
Comments are closed.