ಇಂದಿಗೂ ಪಳ ಪಳ ಹೊಳೆಯುವ 48 ವರ್ಷದ ಹಳೆಯ ಕಾರನ್ನು ವಿಧಾನಸೌಧದ ಮುಂದೆ ಪ್ರತಿ ವರ್ಷ ಪ್ರದರ್ಶನ ಮಾಡಲಾಗುತ್ತದೆ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕೆಲವು ವಸ್ತುಗಳು ಹಳೆಯದಾದಷ್ಟು ಅದರ ಮೌಲ್ಯ ಹೆಚ್ಚಾಗುತ್ತಾ ಹೋಗುತ್ತದೆ. ಉದಾಹರಣೆಗೆ ಕೆಲವು ಬಹಳ ವರ್ಷ ಹಳೆಯ ಬೈಕ್ ಗಳು, ಕಾರುಗಳು.. ಇವುಗಳ ಇಂಜಿನ್ ಗಳು ಈ ಕಾಲದಲ್ಲಿ ಸಿಗುವುದಿಲ್ಲವಾದರೂ ಜಮಾನದ ಆ ವಾಹನಕ್ಕೆ ಇಂದು ಬೆಲೆ ಜಾಸ್ತಿ. ಆಂಟಿಕ್ ಪೀಸ್ ಅಂತಾರಲ್ಲಾ ಹಾಗೆ. ಇನ್ನು ಕೆಲವರು ಅಷ್ಟು ಹಳೆಯ ವಸ್ತುಗಳನ್ನು ಇಂದಿಗೂ ಜೋಪಾನ ಮಾಡುತ್ತಿದ್ದಾರೆ.

ಅಂತಹ ಪ್ರದರ್ಶನಕ್ಕೆ ಇಡುವ ಹಲವು ವಸ್ತುಗಳು ಕರ್ನಾಟಕದಲ್ಲಿದ್ದರೂ 48 ವರ್ಷಗಳ ಹಳೆಯ ಈ ಬೆಂಜ್ ಕಾರು ಇಂದಿಗೂ ಜನರ ಕಣ್ಮನ ಸೆಳೆಯುತ್ತದೆ. ಏನಿದು ಸ್ಟೋರಿ ನೋಡೋಣ ಬನ್ನಿ. ಸ್ನೇಹಿತರೆ ದಿ. ದೇವರಾಜ್ ಅರಸು ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು. ಅವರ ಆಡಳಿತದ ಬಗ್ಗೆ ಇಂದಿಗೂ ಒಳ್ಳೆಯ ಅಭಿಪ್ರಾಯಗಳಿವೆ. ಅವರು ಬಳಸುತ್ತಿದ್ದ ಕಾರನ್ನು ಇಂದಿಗೂ ಅವರ ಪುಣ್ಯ ಸ್ಮರಣೆಯ ದಿನ ವಿಧಾನ ಸೌಧದ ಅವರ ಪ್ರತಿಮೆಯ ಮುಂದೆ ಪ್ರದರ್ಶನ ಮಾಡಲಾಗುತ್ತದೆ.

ಇತ್ತೀಚಿಗೆ ದೇವರಾಜ ಅರಸು ಅವರ 106 ನೇ ವರ್ಷದ ಪುಣ್ಯ ಸ್ಮರಣೆ. ಅವರ ಜನ್ಮದಿನದ ನೆನಪಿನಾರ್ಥ ಅವರು ಅವರ ಅಧಿಕಾರಾವಧಿಯಲ್ಲಿ ಬಳಸುತ್ತಿದ್ದ ಎಂಇಒ 777 ಸಂಖ್ಯೆಯ ಬ್ಲಾಕ್ ಬ್ಯುಟಿ ವಿಧಾನ ಸೌಧದಲ್ಲಿ ವಿರಾಜಮಾನವಾಗಿತ್ತು. ದೇವರಾಜ ಅರಸರು ಬಳಸುತ್ತಿದ್ದ ಈ ಮರ್ಸಿಡಿಸ್ ಬೆಂಜ್ ಗೆ ಒಂದು ಹಿನ್ನೆಲೆಯಿದೆ. 1972ರಲ್ಲಿ ನಡೆದ ಚುನಾವಣೆಯಲ್ಲಿ ದಿ. ದೇವರಾಜ ಅರಸು ಅವರು ಅಭೂತಪೂರ್ವ ಗೆಲುವನ್ನು ಸಾಧಿಸಿದ್ದರು. ಇದರಿಂದ ಅತ್ಯಂತ ಸಂತೋಷಗೊಂಡಿದ್ದರು ಅಂದಿನ ಪ್ರಧಾನಿ ಇಂದಿರಾ ಗಾಂಧಿ. ಹೀಗಾಗಿ ವಿದೇಶದಿಂದ ಈ ಮರ್ಸಿಡಿಸ್ ನ್ನು ತಂದು ಸರ್ಕಾರಿ ಕೆಲಸಕ್ಕೆ ಬಳಸಲು ಕೊಡುಗೆ ನೀಡಿದ್ದರು. ಸುಮಾರು 10 ವರ್ಷಗಳ ಕಾಲ ಅಂದರೆ ತಮ್ಮ ಮುಖ್ಯಮಂತ್ರಿ ಅಧಿಕಾರವಧಿಯ ಉದ್ದಕ್ಕೂ ಇದೇ ಕಾರನ್ನು ಸಂಗಾತಿಯನ್ನಾಗಿಸಿಕೊಂಡಿದ್ದರು ದೇವರಾಜ ಅರಸರು.

ನಂತರ ಹರಾಜಿನಲ್ಲಿ ಈ ಕಾರನ್ನು ದೇವರಾಜ ಅವರಸರ ಮಿತ್ರ ಜಿ.ಎಂ ಬಾಬು ಅವರು ಇದನ್ನು ಖರೀದಿಸಿ ಇಟ್ಟುಕೊಂಡಿದ್ದಾರೆ. ಈ ಕಾರು ಇಂದಿಗೂ ಯಾವದೇ ಸಮಸ್ಯೆ ಇಲ್ಲದೇ ಸರಿಯಾಗಿದೆ, ಸರಿಯಾಗಿ ಚಲಿಸುತ್ತದೆ ಎನ್ನುವುದೇ ವಿಶೇಷ. ಮಾನ್ಯ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನ ಸೌಧಕ್ಕೆ ಬಂದಿದ್ದ ಈ ಕಾರಿನಲ್ಲಿ ಕುಳಿತು ವಿಧಾನ ಸೌಧದಲ್ಲಿ ಒಂದು ರೌಂಡ್ ಹಾಕಿ ಸಂತೋಷಗೊಂಡಿದ್ದರು. ಉತ್ತಮ ಕಂಡೀಷನ್ ನಲ್ಲಿರುವ, ದೇವರಾಜ ಅರಸರ ಮೆಚ್ಚಿನ ಕಾರನ್ನು ಪ್ರತಿವರ್ಷ ವಿಧಾನ ಸೌಧದಲ್ಲಿ ಪ್ರದರ್ಶನಗೊಳಿಸಿ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ನೆನಪನ್ನು ಮರುಕಳಿಸುವಂತೆ ಮಾಡಲಾಗುತ್ತದೆ.

Comments are closed.