Business Idea: ಹಳ್ಳಿಯಿಂದ ಹಣ ದುಡಿಯಲು ನಗರಕ್ಕೆ ಬಂದಿದ್ದೀರಾ? ಹಾಗಿದ್ದರೆ, ಈ ಚಿಕ್ಕ ಚಿಕ್ಕ ಕೆಲಸ ಮಾಡಿ, ಲಕ್ಷ ಲಕ್ಷ ಹಣ ಗಳಿಸಿ. ಹೇಗೆ ಗೊತ್ತೇ??

Business Idea: ಸಿಟಿಯಲ್ಲಿ ಜೀವನ ಮಾಡಬೇಕು, ಹೆಚ್ಚು ಹಣ ಸಂಪಾದನೆ ಮಾಡಬೇಕು ಎಂದು ಅನೇಕರು ಹಳ್ಳಿ ಬಿಟ್ಟು ಸಿಟಿಗೆ ಬರುತ್ತಾರೆ. ಆದರೆ ಸಿಟಿಯ ಖರ್ಚಿಗೆ ಜೀವನ ನಡೆಸಲು ಕೇವಲ ಒಬ್ಬರ ಸಂಪಾದನೆ ಸಾಕಾಗುವುದಿಲ್ಲ. ಗಂಡ ಹೆಂಡತಿ ಇಬ್ಬರು ಸಂಪಾದನೆ ಮಾಡಿದರೆ ಚೆನ್ನಾಗಿ ಹಣ ಗಳಿಸಬಹುದು, ಆದರೆ ಸಣ್ಣ ಮಕ್ಕಳು ಇರುವುದರಿಂದ ಹಾಗು ಅನೇಕ ಕಾರಣಗಳಿಂದ ಹೆಣ್ಣುಮಕ್ಕಳು ಹಣ ಹೊರಗೆ ಬಂದು ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಅಂಥವರಿಗಾಗಿ ಮನೆಯಲ್ಲೇ ಕೂತು ಮಾಡಬಹುದಾದ ಕೆಲವು ಬಿಸಿನೆಸ್ ಐಡಿಯಾಗಳಿವೆ. ಅವುಗಳನ್ನು ಮಾಡಿದರೆ, ಲಕ್ಷಗಟ್ಟಲೇ ಸಂಪಾದನೆ ಮಾಡಬಹುದು. ಹಾಗಿದ್ದರೆ ಆ ಬಿಸಿನೆಸ್ ಐಡಿಯಾಗಳು ಯಾವುವು ಎಂದು ಇಂದು ನಿಮಗೆ ತಿಳಿಸುತ್ತೇವೆ..

business idea in kannada | Business Idea: ಹಳ್ಳಿಯಿಂದ ಹಣ ದುಡಿಯಲು ನಗರಕ್ಕೆ ಬಂದಿದ್ದೀರಾ? ಹಾಗಿದ್ದರೆ, ಈ ಚಿಕ್ಕ ಚಿಕ್ಕ ಕೆಲಸ ಮಾಡಿ, ಲಕ್ಷ ಲಕ್ಷ ಹಣ ಗಳಿಸಿ. ಹೇಗೆ ಗೊತ್ತೇ??
Business Idea: ಹಳ್ಳಿಯಿಂದ ಹಣ ದುಡಿಯಲು ನಗರಕ್ಕೆ ಬಂದಿದ್ದೀರಾ? ಹಾಗಿದ್ದರೆ, ಈ ಚಿಕ್ಕ ಚಿಕ್ಕ ಕೆಲಸ ಮಾಡಿ, ಲಕ್ಷ ಲಕ್ಷ ಹಣ ಗಳಿಸಿ. ಹೇಗೆ ಗೊತ್ತೇ?? 2

ಡೇಕೇರ್ ಸೆಂಟರ್ :- ಸಿಟಿಗಳಲ್ಲಿ ಬ್ಯುಸಿ ಲೈಫ್ ಸ್ಟೈಲ್, ಒತ್ತಡದ ಜೀವನ, ಸಿಟಿಗಳಲ್ಲಿ ಮಹಿಳೆಯರು ಕೂಡ ಕೆಲಸಕ್ಕೆ ಹೋಗುತ್ತಾರೆ. ಸಣ್ಣ ಮಕ್ಕಳಿರುವ ಮಹಿಳೆಯರು ಮಕ್ಕಳನ್ನು ನೋಡಿಕೊಂಡು ಕೆಲಸಕ್ಕೆ ಹೋಗಲು ಆಗುವುದಿಲ್ಲ, ಅಂಥವರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಒಂದು ವ್ಯವಸ್ಥೆಗಾಗಿ ಹುಡುಕುತ್ತಾರೆ. ಅಂಥ ಮಹಿಳೆಯರಿಗೆ ಡೇ ಕೇರ್ ಸಹಾಯ ಮಾಡುತ್ತದೆ. ನೀವು ಮನೆಯಲ್ಲೇ ಇರುವ ಗೃಹಿಣಿ ಆದರೆ, ಡೇಕೇರ್ ಶುರು ಮಾಡಬಹುದು, ಒಳ್ಳೆಯ ಹಣಗಳಿಕೆ ಜೊತೆಗೆ ಮಕ್ಕಳ ಜೊತೆಗೆ ಸಮಯ ಕಳೆಯಬಹುದು. ಇದನ್ನು ಓದಿ..Business Idea: ಹೆಚ್ಚು ಕಷ್ಟ ಪಡುವುದು ಬೇಡ, ಹೆಚ್ಚು ಹೂಡಿಕೆ ಕೂಡ ಬೇಡ, ಆದರೂ ಹೆಚ್ಚು ಲಾಭ ಕೊಡುವ ಬಿಸಿನೆಸ್ ಯಾವುದು ಗೊತ್ತೇ?? ತಿಳಿದೆರೆ ಅಂದೇ ಇಂದೇ ಆರಂಭಿಸುತ್ತೀರಿ.

ಕ್ಲೌಡ್ ಕಿಚನ್ :- ಸಿಟಿಗಳಲ್ಲಿ ಹೆಚ್ಚಿನ ಜನರು ಕೆಲಸಕ್ಕೆ ಹೋಗುವುದರಿಂದ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಅಂಥವರು ಹೊರಗಡೆ ತಿಂಡಿ ಊಟ ಮಾಡುತ್ತಾರೆ.. ಆದರೆ ಹೆಚ್ಚಾಗಿ ಮಸಾಲೆಯುಕ್ತ ಪದಾರ್ಥ ತಿನ್ನಲು ಬಯಸದೆ, ಮನೆಯ ಆರೋಗ್ಯಕರ ಆಹಾರ ತಿನ್ನಲು ಇಷ್ಟಪಡುತ್ತಾರೆ. ನೀವು ಅಡುಗೆ ಚೆನ್ನಾಗಿ ಮಾಡುವವರಾದರೆ, ಕ್ಲೌಡ್ ಕಿಚನ್ ಶುರು ಮಾಡಿ, ಇಂಥವರಿಗೆ ಆಹಾರ ಪೂರೈಕೆ ಮಾಡಬಹುದು. ಮನೆ ಅಡುಗೆ ಮಾಡುವವರಿಗೆ ಸಪೋರ್ಟ್ ಮಾಡುವುದಾಗಿ ಸ್ವಿಗ್ಗಿ ಜೋಮ್ಯಾಟೋ ಕೂಡ ತಿಳಿಸಿರುವುದರಿಂದ, ಇದರ ಜೊತೆಗೆ ಪಾಲುದಾರರಾಗಿ, ಮನೆಯಿಂದಲೇ ಈ ಕೆಲಸ ಮಾಡಿ ಒಳ್ಳೆಯ ಆದಾಯ ಗಳಿಸಬಹುದು.

ಫ್ರೀಲ್ಯಾನ್ಸಿಂಗ್ :- ಆಫೀಸ್ ಗೆ ಹೋಗಿ ಕೆಲಸ ಮಾಡಲು ಇಷ್ಟವಿಲ್ಲದೇ ಇರುವವರಿಗೆ ಫ್ರೀಲ್ಯಾನ್ಸಿಂಗ್ ಆಯ್ಕೆ ಇದೆ. ಸಾಫ್ಟ್ ವೇರ್ ಇಂಜಿನಿಯರ್ ಗಳು, ಆಪ್ ಡೆವೆಲಪರ್, ಕೋಡಿಂಗ್ ಗೊತ್ತಿರುವವರಿಗೆ ಬಹಳಷ್ಟು ಅವಕಾಶ ಇದೆ.
ಬ್ಯೂಟಿ ಪಾರ್ಲರ್ :- ನಗರದಲ್ಲಿ ಮಹಿಳೆಯರು ತಮ್ಮ ಸೌಂದರ್ಯಕ್ಕೆ ಇನ್ನು ಚೆನ್ನಾಗಿ ಕಾಣಿಸುವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಹಾಗಾಗಿ ನೀವು ಬ್ಯೂಟಿಶಿಯನ್ ಕೋರ್ಸ್ ಮಾಡಿ ಬ್ಯೂಟಿ ಪಾರ್ಲರ್ ಶುರು ಮಾಡುವುದರಿಂದ, ಉತ್ತಮವಾದ ಹಣ ಹಾಗೂ ಲಾಭ ಎರಡನ್ನು ಸಹ ಗಳಿಸಬಹುದು. ಇದನ್ನು ಓದಿ..Business Idea: ನೀವು ಊಟಕ್ಕೆ ಖರ್ಚು ಮಾಡುವ 1 ಲಕ್ಷ ಹಾಕಿ, ಈ ಉದ್ಯಮ ಆರಂಭಿಸಿ: ತಿಂಗಳಿಗೆ ಮೂರು ಲಕ್ಷ ಹುಡುಕಿಕೊಂಡು ಬರುತ್ತದೆ. ಯಾವ ಉದ್ಯಮ ಗೊತ್ತೇ?

Comments are closed.