Chamundi Betta: ಆಷಾಡ ಶುಕ್ರವಾರಕ್ಕೆ ತೆರಳ ಬೇಕು ಎಂದು ಕೊಂಡಿದ್ದ ಪ್ರವಾಸಿ ಭಕ್ತರಿಗೆ ಶಾಕ್ ಕೊಟ್ಟ ಚಾಮುಂಡಿ ದೇವಸ್ಥಾನ ಮಂಡಳಿ- ಏನಾಗಿದೆ ಗೊತ್ತೆ?

Chamundi Betta: ನಾಳೆಯಿಂದ ಆಷಾಢ ಶುಕ್ರವಾರ ಶುರುವಾಗಲಿದೆ, ಈ ವೇಳೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ಬಹಳ ಹೆಚ್ಚಾಗಿದೆ. ಇದರಿಂದಾಗಿ ಮೈಸೂರು ಜಿಲ್ಲಾಡಳಿತ ಕೆಲವು ಕ್ರಮಗಳನ್ನು ಕೈಗೊಂಡಿದ್ದು, ಇದರಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ದೊಡ್ಡ ಶಾಕ್ ಸಿಕ್ಕಿದೆ. ಅಷ್ಟಕ್ಕೂ ಆಗಿರುವುದೇನು ಎಂದು ತಿಳಿಸುತ್ತೇವೆ ನೋಡಿ..

chamundi betta aashadha rush | Chamundi Betta: ಆಷಾಡ ಶುಕ್ರವಾರಕ್ಕೆ ತೆರಳ ಬೇಕು ಎಂದು ಕೊಂಡಿದ್ದ ಪ್ರವಾಸಿ ಭಕ್ತರಿಗೆ ಶಾಕ್ ಕೊಟ್ಟ ಚಾಮುಂಡಿ ದೇವಸ್ಥಾನ ಮಂಡಳಿ- ಏನಾಗಿದೆ ಗೊತ್ತೆ?
Chamundi Betta: ಆಷಾಡ ಶುಕ್ರವಾರಕ್ಕೆ ತೆರಳ ಬೇಕು ಎಂದು ಕೊಂಡಿದ್ದ ಪ್ರವಾಸಿ ಭಕ್ತರಿಗೆ ಶಾಕ್ ಕೊಟ್ಟ ಚಾಮುಂಡಿ ದೇವಸ್ಥಾನ ಮಂಡಳಿ- ಏನಾಗಿದೆ ಗೊತ್ತೆ? 2

ಆಷಾಢ ಮಾಸದ ಶುಕ್ರವಾರದ ದಿನಗಳಲ್ಲಿ ಹಾಗೂ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿಯ ದಿನ ಯಾವುದೇ ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಇರುವುದಿಲ್ಲ. ಭಕ್ತರೆಲ್ಲರು ದೇವಿಯ ದರ್ಶನ ಪಡೆಯಲು ಉಚಿತ ಸರ್ಕಾರಿ ಬಸ್ ಗಳ ವ್ಯವಸ್ಥೆ ಇರಲಿದೆ. ಜೂನ್ 23, ಜೂನ್ 30, ಜುಲೈ 7 ಮತ್ತು ಜುಲೈ 14ರ ಆಷಾಢ ಶುಕ್ರವಾರದ ದಿನಗಳಲ್ಲಿ ಹಾಗೂ ಜುಲೈ 10ರ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ದಿನ ಹೀಗೆ ಇರಲಿದೆ. ಮಧ್ಯರಾತ್ರಿ 3 ಗಂಟೆಯಿಂದ ರಾತ್ರಿ 10 ಗಂಟೆವರೆಗು ಉಚಿತ ಬಸ್ ಸೌಲಭ್ಯ ಇರಲಿದೆ. ಇದನ್ನು ಓದಿ..Health Insurance: ಅತಿ ಸುಲಭವಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಹೇಗೆ ಗೊತ್ತೇ? ಈ ಟ್ರಿಕ್ಸ್ ತಿಳಿದುಕೊಳ್ಳಿ, ಎಲ್ಲರಿಗೂ ಒಳ್ಳೆಯದು.

ಚಾಮುಂಡಿ ಬೆಟ್ಟಕ್ಕೆ ಬರಲು ಕೆಲವು ಮಾರ್ಗಗಳಿವೆ, ತಾವರೆಕಟ್ಟೆ ಮಾರ್ಗ, ಉತ್ತನಹಳ್ಳಿಯ ಮಾರ್ಗ, ಇಂಡಸ್ ವ್ಯಾಲಿ ರಸ್ತೆ ಮಾರ್ಗ ಈ ಎಲ್ಲಾ ಮಾರ್ಗಗಳಲ್ಲೂ ಪ್ರೈವೇಟ್ ವಾಹನಗಳ ಸಮಸ್ಯೆಯನ್ನು ನಿಶೇಧಿಸಲಾಗಿದೆ. ವಾಹನಗಳಲ್ಲಿ ಬರುವವರು ಲಲಿತ್ ಮಹಲ್ ಪ್ಯಾಲೇಸ್ ಹತ್ತಿರ ವಾಹನ ನಿಲ್ಲಿಸಿ ಅಲ್ಲಿಂದ ಬಸ್ ನಲ್ಲಿ ಹೋಗಬಹುದು. ವಾಹನಗಳಿಗೆ ಸುರಕ್ಷತೆಗೆ ಭದ್ರತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಾಗೆಯೇ ಯಾವುದೇ ತೊಂದರೆ ಆದರೆ ಹೆಲ್ಪ್ ಡೆಸ್ಕ್ ವ್ಯವಸ್ಥೆ ಸಹ ಮಾಡಲಾಗಿದ್ದು, ನೀವು ಯಾವುದೇ ತೊಂದರೆ ಅನುಭವಿಸುವ ಸಮಸ್ಯೆ ಬರುವುದಿಲ್ಲ ಎನ್ನಲಾಗಿದೆ. ಇನ್ನು ಮೆಟ್ಟಿಲುಗಳ ಮಾರ್ಗದಲ್ಲಿ ಬರುವವರು, ಪಿಂಜರಾಪೋಲ್ ಹತ್ತಿರ ನಿಮ್ಮ ವಾಹನಗಳನ್ನು ನಿಲ್ಲಿಸಬಹುದು. ಉತ್ತನಹಳ್ಳಿ ಮಾರ್ಗದಿಂದ ಬರುವವರು ನಂಜನಗೂಡು ರೋಡ್ ಕಡೆಯಿಂದ ಬಂದು..

ಎಂಎಲ್ ಸೋಮಸುಂದರಂ ಸರ್ಕಲ್, ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಲಲಿತ್ ಮಹಲ್ ಗೆ ಬಂದು ಅಲ್ಲಿ ವಾಹನ ನಿಲ್ಲಿಸಬಹುದು. ಅಲ್ಲಿಯೇ ಟೆಂಪೋರರಿ ಬಸ್ ಸ್ಟ್ಯಾಂಡ್, ಶೌಚಾಲಯ ವ್ಯವಸ್ಥೆ, ಲೈಟ್ ಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಎಲ್ಲವನ್ನು ಮಾಡಲಾಗಿದೆ. ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಅಧಿಕವಿರುತ್ತದೆ, ಹಾಗೆಯೇ ಮಹಿಳೆಯರಿಗೆ ಉಚಿತ ಉಚಿತ ಬಸ್ ಪ್ರಯಾಣ ಶುರು ಆದಾಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ಜಿಲ್ಲಾಡಳಿತ ಈ ನಿರ್ಧಾರ ತೆಗೆದುಕೊಂಡಿದೆ. ಇದನ್ನು ಓದಿ..Elon Musk: ದಿಡೀರ್ ಎಂದು ಮೋದಿ ರವರನ್ನು ಭೇಟಿಯಾದ ಬಳಿಕ ಎಲಾನ್ ಮಸ್ಕ್ ಹೇಳಿದ್ದೇನು ಗೊತ್ತೇ??

Comments are closed.