Gruhajyothi: ನೀವು ಹಾಕಿರುವ ಗೃಹಜ್ಯೋತಿ ಅರ್ಜಿ ಸರಿಯಾಗಿದೆಯೇ? ಪರೀಕ್ಷೆ ಮಾಡುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು.
Gruhajyothi: ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದಲ್ಲಿ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಗೃಹಜ್ಯೋತಿ (Gruhajyothi) ಯೋಜನೆ ಆಗಿದೆ. ಈ ಯೋಜನೆಯ ಮೂಲಕ ರಾಜ್ಯದ ಪ್ರತಿಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಭರವಸೆ ನೀಡಲಾಗಿತ್ತು. ಈ ಯೋಜನೆಗೆ ಸಾಕಷ್ಟು ಷರತ್ತುಗಳನ್ನು ಹಾಕಲಾಗಿದೆ. ಆರಂಭದಲ್ಲಿ ಈ ಯೋಜನೆ ಗೊಂದಲಗಳಿಂದ ಸಹ ಕೂಡಿತ್ತು. ಮೊದಲಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಉಚಿತ ವಿದ್ಯುತ್ ಕೊಡಲಾಗುವುದಿಲ್ಲ ಎಂದು ಹೇಳಲಾಗಿತ್ತು.

ನಂತರ ಅದನ್ನು ಬಗೆಹರಿಸಿ, ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೂ ವಿದ್ಯುತ್ ಫ್ರೀಯಾಗಿ ಕೊಡುವುದಾಗಿ ಸರ್ಕಾರ ತಿಳಿಸಿತು. ಎಲ್ಲಾ ಗೊಂದಲಗಳು ದೂರವಾಗಿ ಈಗ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಜೂನ್ 18ರಿಂದ ಗೃಹಜ್ಯೋತಿ (Gruhajyothi) ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಆದರೆ ಜನರಿಗೆ ತಮ್ಮ ಅರ್ಜಿಯ ಸ್ಟೇಟಸ್ ಏನಾಗಿದೆ ಎಂದು ತಿಳಿದುಕೊಳ್ಳಬೇಕಿದೆ.. ಇದನ್ನು ಓದಿ..Mobile Safety Tricks: ಮಳೆ ಬರುತ್ತಿದೆ, ಮಳೆಗಾಲ ಬೇರೆ- ನಿಮ್ಮ ಫೋನ್ ಅನ್ನು 100 ರೂಪಾಯಿ ಖರ್ಚು ಮಾಡಿ ವಾಟರ್ ಪ್ರೂಫ್ ಮಾಡಿ. ಸೇಫ್ ಆಗಿ ಇರುತ್ತದೆ.
ಇದಕ್ಕಾಗಿ ಸರ್ಕಾರ ಈಗ ಒಂದು ವ್ಯವಸ್ಥೆ ಮಾಡಿದೆ, ಆನ್ಲೈನ್ ಮೂಲಕ ನೀವು ನಿಮ್ಮ ಅಪ್ಲಿಕೇಶನ್ ಸ್ಟೇಟಡ್ ತಿಳಿದುಕೊಳ್ಳಬಹುದು. ಬೆಸ್ಕಾಮ್, ಸೆಸ್ಕಾಮ್, ಹೆಚ್.ಆರ್.ಇ.ಸಿ.ಎಸ್ ಮತ್ತು ಮೆಸ್ಕಾಮ್ ಈ ಇಲಾಖೆಗಳಿಗೆ ಇದುವರೆಗು ಸುಮಾರು 1 ಕೋಟಿಗಿಂತ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲರೂ ತಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ಸೇವಾಸಿಂಧು ಪೋರ್ಟಲ್ ಮೂಲಕ ತಿಳಿದುಕೊಳ್ಳಬಹುದು (Gruhajyothi) .
https://sevasindhu.karnataka.gov.in/StatucTrack/Track_Status ಇದು ಸೇವಾಸಿಂಧು ವೆಬ್ಸೈಟ್ ನಲ್ಲಿ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವ ಲಿಂಕ್ ಆಗಿದೆ. ವೆಬ್ಸೈಟ್ ಓಪನ್ ಮಾಡಿ, ನಿಮ್ಮ ವ್ಯಾಪ್ತಿಗೆ ಬರುವ ಎಲೆಕ್ಟ್ರಿಸಿಟಿ ಬೋರ್ಡ್ ಕಂಪನಿಯನ್ನು ಆಯ್ಕೆ ಮಾಡಿ, ನಂತರ ನಿಮ್ಮ ಬಿಲ್ ಅಕೌಂಟ್ ನಂಬರ್ ಅನ್ನು ಎಂಟ್ರಿ ಮಾಡಿ. ಈಗ ನಿಮ್ಮ ಅಪ್ಲಿಕೇಶನ್ ಅನ್ನು ಸ್ವೀಕರಿಸಿದ್ದರೆ, ಗೃಹಜ್ಯೋತಿ (Gruhajyothi) ಯೋಜನೆಗೆ ಅರ್ಜಿ ಸ್ವೀಕರಿಸಲಾಗಿದೆ, ಬೆಸ್ಕಾಂ ಗೆ ಕಳಿಸಲಾಗಿದೆ ಎಂದು ಬರುತ್ತದೆ. ಇದನ್ನು ಓದಿ..
ಆದರೆ ತಾಂತ್ರಿಕ ದೋಷದಿಂದಲೋ ಏನೋ, ಕೆಲವರಿಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಅಪ್ಲಿಕೇಶನ್ ಹಾಕಿ, ಎಲ್ಲಾ ದಾಖಲೆಗಳನ್ನು ನೀಡಿದ್ದರು ಸಹ..ಮಾಹಿತಿ ಲಭ್ಯವಿಲ್ಲ, ಗೃಹಜ್ಯೋತಿ ಯೋಜನೆಗೆ ನೊಂದಾಯಿಸಿಕೊಳ್ಳಿ ಎಂದು ಬಂದಿದೆ. ಮತ್ತೆ ಅಪ್ಲೈ ಮಾಡಲು ಹೋದಾಗ, ಈ ಆಧಾರ್ ಕಾರ್ಡ್ ಈಗಾಗಲೇ ಗೃಹಜ್ಯೋತಿ (Gruhajyothi) ಯೋಜನೆಗೆ ನೋಂದಣಿ ಆಗಿದೆ ಎಂದು ಬಂದಿದೆ. ಇದರಿಂದ ಜನರಿಗೆ ಗೊಂದಲ ಆಗಿದ್ದು, ಸರ್ಕಾರ ಇದನ್ನು ಸರಿಪಡಿಸಬೇಕಿದೆ. ಇದನ್ನು ಓದಿ..Reno 10: ಹೊಸದಾಗಿ ಬಿಡುಗಡೆಯಾಗುತ್ತಿರುವ ಒಪ್ಪೋ ರೆನೊ 10 ಫೋನ್ ಗಳು- DSLR ಮೀರಿಸುವಷ್ಟು ಕ್ಯಾಮೆರಾ ಆದರೂ ಬೆಲೆ ಕಡಿಮೆ.
Comments are closed.