Pawan Kalyan: ತಮ್ಮ, ಖ್ಯಾತ ನಟ ಎಂಬುದನ್ನು ನೋಡದೆ, ಪವನ್ ಬಗ್ಗೆ ನಾಲಿಗೆ ಹರಿ ಬಿಟ್ಟ ಚಿರಂಜೀವಿ; ಶಾಕ್ ಆಗಿ ಶೇಕ್ ಆದ ಫ್ಯಾನ್ಸ್: ಏನಾಗಿದೆ ಗೊತ್ತೇ??
Pawan Kalyan: ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಕುಟುಂಬದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇವರ ಫ್ಯಾಮಿಲಿಯಲ್ಲಿ ಮೊದಲಿಗೆ ಮೆಗಾಸ್ಟಾರ್ ಚಿರಂಜೀವಿ ಅವರು ಹೀರೋ ಆಗಿ ಚಿತ್ರರಂಗಕ್ಕೆ ಬಂದರು. ಚಿರಂಜೀವಿ ಅವರು ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎನ್ನುವ ವಿಷಯ ಗೊತ್ತೇ ಇದೆ. ಇಂದಿಗೂ ಅವರು ಮೆಗಾಸ್ಟಾರ್ ಆಗಿ ಅಭಿಮಾನಿಗಳ ಮೆಚ್ಚಿನ ನಟ ಆಗಿದ್ದಾರೆ.
ಚಿರಂಜೀವಿ ಅವರ ನಂತರ ಇವರ ಫ್ಯಾಮಿಲಿ ಮೂಲಕ ಎಂಟ್ರಿ ಕೊಟ್ಟಿದ್ದು ನಟ ಪವನ್ ಕಲ್ಯಾಣ್ (Pawan Kalyan). ಚಿರಂಜೀವಿ ಅವರಿಗಿಂತ ಹೆಚ್ಚು ಕ್ರೇಜ್ ಹಾಗೂ ಅಭಿಮಾನಿ ಬಳಗ ಸಂಪಾದಿಸಿಕೊಂಡರು ಎಂದರೆ ತಪ್ಪಾಗುವುದಿಲ್ಲ. ಪವನ್ ಕಲ್ಯಾಣ್ ಅವರಿಗೆ ಚಿರಂಜೀವಿ ಅವರಿಗೆ ಇರುವಷ್ಟು ಇಂಡಸ್ಟ್ರಿ ಹಿಟ್ ಗಳು, ಆದರೂ ಅಷ್ಟು ದೊಡ್ಡ ಅಭಿಮಾನಿ ಬಳಗ ಇರುವುದು ಹೇಗೆ ಎನ್ನುವ ಪ್ರಶ್ನೆಗೆ ಖುದ್ದು ಚಿರಂಜೀವಿ ಅವರೇ ಉತ್ತರ ಕೊಟ್ಟಿದ್ದರು. ಚಿರು ಅವರು ತಮ್ಮನ ಬಗ್ಗೆ ಹೇಳಿದ್ದೇನು ಗೊತ್ತಾ?
“ಚಿತ್ರರಂಗದಲ್ಲಿ ನಾನು ಬಹಳಷ್ಟು ಹಿಟ್ಸ್ ಗಳನ್ನು ನೋಡಿದ್ದೇನೆ..ನನ್ನ ಸಿನಿಮಾಗಳನ್ನು ನೋಡಿ ನನಗೆ ಅಭಿಮಾನಿ ಬಳಗ ಸೃಷ್ಟಿಯಾಯಿತು. ಆದರೆ ಪವನ್ ಗೆ ಹಾಗಲ್ಲ, ಅವನಿಗೆ ನನ್ನ ಹಾಗೆ ಹೆಚ್ಚು ಇಂಡಸ್ಟ್ರಿ ಹಿಟ್ಸ್ ಇಲ್ಲ, ಚೆನ್ನಾಗಿ ಡ್ಯಾನ್ಸ್ ಕೂಡ ಬರಲ್ಲ. ದೊಡ್ಡ ನಟ ಅಂತಾನು ಹೆಸರು ಮಾಡಿಲ್ಲ. ಆದರೂ ಅವನಿಗೆ ಅಷ್ಟು ದೊಡ್ಡ ಫ್ಯಾನ್ ಫಾಲೋಯಿಂಗ್ ಬರುವುದಕ್ಕೆ ಕಾರಣ ಅವನ ವ್ಯಕ್ತಿತ್ವ.
ಪವನ್ ವ್ಯಕ್ತಿತ್ವದಿಂದಲೇ ಅವನಿಗೆ ಅಷ್ಟು ಜನ ಅಭಿಮಾನಿಗಳಿದ್ದಾರೆ. ಅದರಿಂದಲೇ ಅವನು ರಾಜಕೀಯಕ್ಕೆ ಹೋದರು, ಅಷ್ಟು ಜೆಸ್ನ ಅವನ ಹಿಂದೆ ನಿಲ್ಲುತ್ತಾರೆ.. ಅವನು ಅಂದುಕೊಂಡ ಸ್ಥನಾದಲ್ಲಿ ಇರುತ್ತಾನೆ ಎನ್ನುವ ನಂಬಿಕೆ ನನಗೆ ಇದೆ..” ಎಂದು ತಮ್ಮನ ಬಗ್ಗೆ ಹೇಳಿದ್ದರು ನಟ ಚಿರಂಜೀವಿ. ಪವನ್ ಕಲ್ಯಾಣ್ ಅವರಿಗೆ ಅಷ್ಟು ದೊಡ್ಡ ಫ್ಯಾನ್ ಬೇಸ್ ಬರಲು ಕಾರಣ ಏನು ಎಂದು ತಿಳಿಸಿದ್ದರು.
Comments are closed.