Chiranjeevi: ಬೆಣ್ಣೆಯಂತಹ ನಟಿಯನ್ನು ಸಿನೆಮಾಗೆ ಆಯ್ಕೆ ಮಾಡಿದ ಚಿರು: ಆದರೆ ಫ್ಯಾನ್ಸ್ ಮಾತ್ರ ಆಕೆ ಬೇಡವೇ ಬೇಡ ಎಂದದ್ದು ಯಾಕೆ ಗೊತ್ತೇ?? ಆ ಅಪ್ಸರೆ ಯಾರು ಗೊತ್ತೇ??
Chiranjeevi: ಚಿತ್ರರಂಗದಲ್ಲಿ ಕೆಲವು ವಿಚಾರಗಳಲ್ಲಿ ಸೆಂಟಿಮೆಂಟ್ಸ್ ಇರುತ್ತದೆ. ಅದು ಹೀರೋ, ಡೈರೆಕ್ಟರ್ ಅಥವಾ ಹೀರೋಯಿನ್ ವಿಚಾರದಲ್ಲಿ ಇರಬಹುದು. ಹೀಗೆ ಸಾಕಷ್ಟು ಸೆಂಟಿಮೆಂಟ್ ಗಳು ಕೆಲವೊಮ್ಮೆ ಚಿತ್ರರಂಗದಲ್ಲಿ ವರ್ಕ್ ಆಗುತ್ತದೆ. ಯಾವುದಾದರೂ ಕಾಂಬೋ ವರ್ಕ್ ಆದರೆ, ಅದೇ ಕಾಂಬೋ ರಿಪೀಟ್ ಮಾಡುವುದು ಹೀಗೆಲ್ಲಾ ನಡೆಯುತ್ತದೆ. ಇದು ಹೀರೋಯಿನ್ ಗಳ ವಿಷಯದಲ್ಲಿ ಸಹ ನಡೆಯುವುದುಂಟು.
ಇದೀಗ ನಟಿ ತಮನ್ನಾ (Tamannah) ಅವರ ವಿಷಯದಲ್ಲಿ ಇದು ನಡೆದಿದೆ. ನಟಿ ತಮನ್ನಾ ಅವರು ಮೊದಲಿಗೆ ಸೌತ್ ಇಂಡಿಯನ್ ಸಿನಿಮಾದಲ್ಲಿ ಹೆಚ್ಚು ನಟಿಸುತ್ತಿದ್ದರು, ಈಗ ಬಾಲಿವುಡ್ ಸಹ ಹಾರಿದ್ದಾರೆ. ಅಲ್ಲಿ ಕೂಡ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಂತ ಸೌತ್ ನಲ್ಲಿ ಅವರಿಗೆ ಅವಕಾಶ ಕಡಿಮೆ ಆಗಿದೆ ಎಂದು ಅರ್ಥವಲ್ಲ. ಆದರೆ ಮೊದಲಿಗೆ ತಮನ್ನಾ ಅವರು ಹೆಚ್ಚಾಗಿ ಯಂಗ್ ಹೀರೋಗಳ ಜೊತೆಗೆ ನಟಿಸುತ್ತಿದ್ದರು.
ಆದರೆ ಈಗ ಅವರಿಗೆ ಸೀನಿಯರ್ ಹೀರೋಗಳ ಜೊತೆಗೆ ನಟಿಸುವ ಅವಕಾಶ ಸಿಗುತ್ತಿದೆ. ಪ್ರಸ್ತುತ ತಮನ್ನಾ ಅವರು ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ ಭೋಲಾ ಶಂಕರ್ (Bhola Shankar) ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದೆ. ಮಿಲ್ಕಿ ಬ್ಯೂಟಿ ತಮನ್ನಾ ಅವರನ್ನು ಆರಿಸಿದ್ದಕ್ಕೆ ಚಿರಂಜೀವಿ ಅವರಿಗೆ ಸಂತೋಷವಿದೆ. ಆದರೆ ಚಿರು ಅವರ ಅಭಿಮಾನಿಗಳು ಮಾತ್ರ ತಮನ್ನಾ ಅವರು ಮಾತ್ರ ಬೇಡ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ, ತಮನ್ನಾ ಅವರು ಇತ್ತೀಚೆಗೆ ನಟಿಸಿದ ಸಿನಿಮಾಗಳೆಲ್ಲಾ ಫ್ಲಾಪ್ ಆಗಿದೆ.
ಜೊತೆಗೆ ಅವರು ಮೆಗಾ ಕುಟುಂಬಕ್ಕೆ ಆಗಿಬರುವುದಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ತಮನ್ನಾ ಅವರು ಪವನ್ ಕಲ್ಯಾಣ್ ಅವರೊಡನೆ, ರಾಮ್ ಚರಣ್ ಅವರೊಡನೆ ಹಾಗೂ ಅಲ್ಲು ಅರ್ಜುನ್ ಅವರೊಡನೆ ನಟಿಸಿದ ಸಿನಿಮಾಗಳೆಲ್ಲವು ಅಟ್ಟರ್ ಫ್ಲಾಪ್ ಆಗಿದೆ. ಆ ಕಾರಣಕ್ಕೆ ಅಭಿಮಾನಿಗಳು ಚಿರು ಅವರಿಗೆ ನೀವು ತಮನ್ನಾ ಅವರೊಡನೆ ಮಾತ್ರ ನಟಿಸಬೇಡಿ ಎಂದು ಸಲಹೆ ನೀಡುತ್ತಿದ್ದಾರೆ. ಅಭಿಮಾನಿಗಳ ಮಾತನ್ನು ಚಿರಂಜೀವಿ ಅವರು ಕೇಳುತ್ತಾರಾ ಎಂದು ಕಾದು ನೋಡಬೇಕಿದೆ.
Comments are closed.