ಯಾರಿಗೂ ತಿಳಿಯದೇ ಎರಡು ವರ್ಷದಿಂದ ದರ್ಶನ್ ಅವರು ಸಿದ್ದಗಂಗಾ ಮಠಕ್ಕೆ ಮಾಡುತ್ತಿರುವ ಸಹಾಯ ನೋಡಿದ್ರೆ ಕಣ್ಣೀರು ಬರುತ್ತೆ.

ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಎಂದರೆ ಹಾಗೆ ಒಂದು ಕೈಯಲ್ಲಿ ಮಾಡಿದ ಸಹಾಯ ಇನ್ನೊಂದು ಕೈಗೆ ತಿಳಿಯದಷ್ಟು ಗೌಪ್ಯವಾಗಿ ಇಡುತ್ತಾರೆ. ಹೀಗಾಗಿ ಅವರನ್ನು ಎಲ್ಲರೂ ಡಿ ಬಾಸ್ ಎಂದು ಕರೆಯುವುದು. ತಾವು ಕಷ್ಟದಿಂದ ಬಂದವರು ಹಾಗಾಗಿಯೇ ಬೇರೆಯವರ ಕಷ್ಟವನ್ನು ತಿಳಿದು ಅವರಿಗೆ ಕೈಲಾದಷ್ಟು ಸಹಾಯ ಮಾಡುವ ಪರಿಕ್ರಮವನ್ನು ಬೆಳೆಸಿಕೊಂಡಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮನೆಯ ಬಳಿ ಎಲ್ಕೆಜಿ ಯಿಂದ ಹಿಡಿದು ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಶಿಕ್ಷಣದವರೆಗೂ ಇನ್ನು ಹೃದಯ ಸಂಬಂಧಿ ಹೀಗೆ ಹಲವಾರು ಸಮಸ್ಯೆಗಳಿಗೆ ಕೂಡ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಡಿ ಬಾಸ್ ರವರ ಮನೆಯ ಬಳಿ ಬರುತ್ತಾರೆ.

ತಮ್ಮ ಮನೆಯ ಬಳಿಗೆ ಬಂದವರನ್ನು ಎಂದಿಗೂ ಕೂಡ ಬರಿಗೈಯಲ್ಲಿ ಕಳಿಸುವ ಜಾಯಮಾನದವರು ಡಿ ಬಾಸ್ ಅಲ್ಲ. ತಮ್ಮ ಮನೆಗೆ ಬಂದವರಿಗೆ ಏನನ್ನಾದರೂ ಸಹಾಯ ಮಾಡಿಯೇ ಮಾಡುತ್ತಾರೆ ಎಂಬುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ನಂಬಿಕೆ. ಇನ್ನು ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಇನ್ನೊಂದು ಸಹಾಯದ ಕುರಿತಂತೆ ಕೂಡ ನಮಗೆ ಸುದ್ದಿ ತಿಳಿದಿದ್ದು ಇದನ್ನು ಕೇಳಿದರೆ ಕಂಡಿತವಾಗಿಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿಗಳು ಹೆಮ್ಮೆಯಿಂದ ಕಾಲರ್ ಎತ್ತೋದು ಗ್ಯಾರೆಂಟಿ.

ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಹಿಂದೆ ತಮ್ಮ ಜನ್ಮದಿನದ ದಿನದಂದು ಕರ್ನಾಟಕದ ಹಲವಾರು ಮಠಗಳಿಗೆ ಹಾಗೂ ಗೋಶಾಲೆಗಳಿಗೆ ಪ್ರಾಣಿಗಳ ಮೇವನ್ನು ನೀಡಿದ್ದರು. ಈಗ ತುಮಕೂರಿನಲ್ಲಿರುವ ಸಿದ್ಧಗಂಗಾಶ್ರೀ ಮಠಕ್ಕೆ ಪ್ರತಿತಿಂಗಳು ಕ್ವಿಂಟಾಲ್ಗಟ್ಟಲೆ ಅಕ್ಕಿ ಬೇಳೆ ಎಣ್ಣೆ ಕಾಳುಗಳು ಹೀಗೆ ಹಲವಾರು ಅಗತ್ಯ ಪದಾರ್ಥಗಳನ್ನು ನೀಡುವ ಮೂಲಕ ಅಲ್ಲಿ ದಾಸೋಹಕ್ಕೆ ಹಾಗೂ ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕೂಡ ಆರ್ಥಿಕವಾಗಿ ಕೂಡ ಸಹಾಯವನ್ನು ಮಾಡುತ್ತಿದ್ದಾರೆ. ಇನ್ನು ಈ ಕುರಿತಂತೆ ದರ್ಶನ್ ಅವರು ಎಲ್ಲಿಯೂ ಕೂಡ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ ಆದರೆ ಒಳ್ಳೆಯತನದ ಸುದ್ದಿ ಖಂಡಿತವಾಗಿ ಎಲ್ಲರ ಮನೆ ತಲುಪುತ್ತದೆ ಎಂಬುದಕ್ಕೆ ಇದೇ ಉದಾರಣೆ. ದರ್ಶನ್ ರವರಿಗೆ ಇನ್ನಷ್ಟು ಉತ್ತಮ ಸೇವೆಯನ್ನು ಮಾಡುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಹಾರೈಸೋಣ.

Comments are closed.