RCB vs MI: ಕೈಲಾಗದೆ ಹೀನಾಯವಾಗಿ ಸೋತ ಮೇಲೆ ಡುಪ್ಲೆಸಿಸ್ ನೀಡಿದ ಕಾರಣ ಏನು ಗೊತ್ತೇ? ಇವರು ನಿಜಕ್ಕೂ ನಾಯಕನ ಎಂದ ಫ್ಯಾನ್ಸ್.

RCB vs MI: ಐಪಿಎಲ್ (RCB) ನಲ್ಲಿ ಈಗ ಆರ್ಸಿಬಿ ತಂಡ ಪ್ಲೇಅಫ್ಸ್ ಗೆ ತಲುಪುವ ಕನಸು ನನಸಾಗುವ ಹಾಗೆ ಕಾಣುತ್ತಿಲ್ಲ. ನಿನ್ನೆ ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆದ ಆರ್ಸಿಬಿ ವರ್ಸಸ್ ಎಂಐ ಪಂದ್ಯದಲ್ಲಿ ಆರ್ಸಿಬಿ ತಂಡದಲ್ಲಿ 6 ವಿಕೆಟ್ಸ್ ಗಳ ಹೀನಾಯ ಸೋಲು ಕಂಡಿತು. ಪಂದ್ಯ ಮುಗಿದ ಬಳಿಕ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಅವರು ತಂಡದ ಸೋಲಿಗೆ ಕಾರಣ ಏನು ಎಂದು ತಿಳಿಸಿದ್ದಾರೆ..

duplesis about rcb vs mi 2023 match | RCB vs MI: ಕೈಲಾಗದೆ ಹೀನಾಯವಾಗಿ ಸೋತ ಮೇಲೆ ಡುಪ್ಲೆಸಿಸ್ ನೀಡಿದ ಕಾರಣ ಏನು ಗೊತ್ತೇ? ಇವರು ನಿಜಕ್ಕೂ ನಾಯಕನ ಎಂದ ಫ್ಯಾನ್ಸ್.
RCB vs MI: ಕೈಲಾಗದೆ ಹೀನಾಯವಾಗಿ ಸೋತ ಮೇಲೆ ಡುಪ್ಲೆಸಿಸ್ ನೀಡಿದ ಕಾರಣ ಏನು ಗೊತ್ತೇ? ಇವರು ನಿಜಕ್ಕೂ ನಾಯಕನ ಎಂದ ಫ್ಯಾನ್ಸ್. 2

ಆರಂಭದಲ್ಲಿ ಟಾಸ್ ಸೋತ ಆರ್ಸಿಬಿ (RCB) ಮೊದಲು ಬ್ಯಾಟಿಂಗ್ ಮಾಡಿತು, ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರು 68 ರನ್ಸ್ ಗಳಿಸಿ, ಫಾಫ್ ಡು ಪ್ಲೆಸಿಸ್ ಅವರು 65 ರನ್ಸ್ ಗಳಿಸಿ ಉತ್ತಮ ಆರಂಭ ಸಿಕ್ಕರೂ ನಂತರದ ಆಟಗಾರರು ಉತ್ತಮ ಪ್ರದರ್ಶನ ನೀಡದೆ 20 ಓವರ್ಸ್ ಗೆ ಆರ್ಸಿಬಿ 199 ರನ್ಸ್ ಗಳಿಸಿತು. ಇತ್ತ ಮುಂಬೈ ತಂಡ ಇಶಾನ್ ಕಿಶನ್ (Ishan Kishan), ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ನೆಹಾಲ್ ವಧೀರ (Nehal Vadhira) ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಮುಂಬೈ ತಂಡ 6 ವಿಕೆಟ್ಸ್ ಗಳ ಭರ್ಜರಿ ಜಯ ಗಳಿಸಿತು. ಇದನ್ನು ಓದಿ..Cricket News: ರಾಹುಲ್ ಹೊರ ಹೋಗುತ್ತಿದ್ದಂತೆ ಭಾರತ ತಂಡಕ್ಕೆ ಆಯ್ಕೆಯಾದ ಭಯಾನಕ ಆಟಗಾರ: ಈತನೇ ಟಾಪ್ ಆಗಿ ಮೆರೆಯುತ್ತಾನೆ ಎಂದ ಪಂಡಿತರು. ಯಾರು ಗೊತ್ತೇ?

ಪಂದ್ಯ ಮುಗಿದ ನಂತರ ಫಾಫ್ ಡು ಪ್ಲೆಸಿಸ್ ಅವರು ಹೇಳಿದ್ದು ಹೀಗೆ.. “ನಮ್ಮ ತಂಡಕ್ಕೆ 20 ರನ್ಸ್ ಕಡಿಮೆ ಆಯಿತು. ಎಂಐ ತಂಡ ಸ್ಟ್ರಾಂಗ್ ಚೇಸಿಂಗ್ ತಂಡ ಆಗಿದೆ, ಹಾಗೆ ಅವರಲ್ಲಿ ಬ್ಯಾಟಿಂಗ್ ಡೆಪ್ತ್ ಇದೆ. ಕೊನೆಯ 5 ಓವರ್ ಗಳಲ್ಲಿ ಅಂದುಕೊಂಡ ಹಾಗೆ ರನ್ಸ್ ಬರಲಿಲ್ಲ. ಬ್ಯಾಕೆಂಡ್ ನಲ್ಲಿ ಅಂದುಕೊಂಡ ಹಾಗೆ ರನ್ಸ್ ಬರದೆ ಇದ್ದಿದ್ದಕ್ಕೆ ಬಹಳ ಬೇಸರ ಆಗಿದೆ. ಆಟಗಾರರಿಗೆ ಸ್ಪೂರ್ತಿಯಾಗಲು 200 ಒಳ್ಳೆಯ ಸ್ಕೋರ್.. ಆದರೆ ಎದುರಾಳಿ ತಂಡ ಪವರ್ ಪ್ಲೇ ಸಮಯವನ್ನು ಬಹಳ ಚೆನ್ನಾಗಿ ಉಪಯೋಗಿಸಿಕೊಂಡರು. ಅವರ ಬಲಿಷ್ಠ ಪ್ರದರ್ಶನವನ್ನು ತಡೆಯಲು ಆಗಲಿಲ್ಲ..

ಮೊಹಮ್ಮದ್ ಸಿರಾಜ್ (Mohammad Siraj) ಅವರು ಆರಂಭಿಕ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು..ಆದರೆ ಈಗ ಆ ಫಾರ್ಮ್ ಇಲ್ಲ. ನಮ್ಮ ಬಾಯ್ಸ್ ಆತ್ಮವಿಶ್ವಾಸದ ಜೊತೆಗೆ ಆಡಬೇಕು. ಟೂರ್ನಿ ಮುಗಿಯುವ ಸಮಯದಲ್ಲಿ ವಿಕೆಟ್ಸ್ ನಿಧಾನವಾಗಿ ಇರುತ್ತದೆ. ಹಾಗಾಗಿ ಪವರ್ ಪ್ಲೇ 6 ಓವರ್ ಗಳಲ್ಲಿ 60 ರನ್ಸ್ ಗಳಿಸುವ ಕಡೆ ಗಮನ ಕೊಡಬೇಕು..” ಎಂದು ಫಾಫ್ ಡು ಪ್ಲೆಸಿಸ್ ಅವರು ಹೇಳಿದ್ದು, ನೆಟ್ಟಿಗರು ಈ ಮಾತಿಗೆ ಇವರು ಒಬ್ಬ ಕ್ಯಾಪ್ಟನ್ ಆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Buy Laptop Mobile: ಯಾವುದಾದರೂ ಶೋ ರೂಮ್ ಗೆ ಹೋಗಿ, ಅರ್ಧ ಬೆಲೆಗೆ ಮೊಬೈಲ್ ಅಥವಾ ಲ್ಯಾಪ್ಟಾಪ್ ಖರೀದಿ ಮಾಡುವುದು ಹೇಗೆ ಗೊತ್ತೇ? ಇದೊಂದನ್ನು ಹೇಳಿ, ಅವರೇ ಅರ್ಧ ಬೆಲೆಗೆ ಕೊಡುತ್ತಾರೆ.

Comments are closed.