Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.

Free Laptop Scheme by Karnataka Government explained in Kannada language

Free Laptop Scheme: ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸಾಕಷ್ಟು ಉಚಿತ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡುವಂತಹ ಕೆಲಸವನ್ನು ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಐದು ಪ್ರಮುಖ ಯೋಜನೆಗಳು(Govt Of Karnataka Schemes) ಬೇರೆಯೆಲ್ಲಾ ಯೋಜನೆಗಳಿಗಿಂತ ಹೆಚ್ಚಾಗಿ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರ ನಡುವೆ ಸರಕಾರದಿಂದ ವಿದ್ಯಾರ್ಥಿಗಳ ವಿಚಾರವಾಗಿ ಕೂಡ ಸಾಕಷ್ಟು ಪ್ರಯೋಜನಕಾರಿಯಾಗುವಂತಹ ಯೋಜನೆಯನ್ನು ಜಾರಿಗೆ ತಂದಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಹೌದು ವಿದ್ಯಾರ್ಥಿಗಳಿಗೆ ಈ ವರ್ಷ ಲ್ಯಾಪ್ಟಾಪ್ (Free Laptop Scheme) ಅನ್ನು ಉಚಿತವಾಗಿ ನೀಡುವಂತಹ(Free Laptop For Students) ಯೋಜನೆಯನ್ನು ಕೂಡ ಸರ್ಕಾರ ಜಾರಿಗೆ ತಂದಿದ್ದು ಇದಕ್ಕಾಗಿ 230 ಕೋಟಿ ರೂಪಾಯಿಗಳ ಅನುದಾನವನ್ನು ಕೂಡ ಮೀಸಲಿರಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಸರ್ಕಾರದ ಕಡೆಯಿಂದ ಈ ಉಚಿತ ಲ್ಯಾಪ್ಟಾಪ್ ಅನ್ನು ಯಾವೆಲ್ಲ ವಿದ್ಯಾರ್ಥಿಗಳು ಪಡೆಯಬಹುದು ಇದನ್ನು ಪಡೆದುಕೊಳ್ಳುವ ವಿಧಾನ ಹೇಗೆ ಎನ್ನುವ ಮಾಹಿತಿಯನ್ನು ಇವತ್ತಿನ ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ.  ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope

ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ? -> Ration Card Benefits

Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.

ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಸಿದ್ದರಾಮಯ್ಯ(CM Siddharamaiah) ಅವರು ವಿಶ್ವವಿದ್ಯಾಲಯಗಳಲ್ಲಿ ಕಲಿಕೆ ಮಾಡುತ್ತಿರುವಂತಹ SC/ST ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಲ್ಯಾಪ್ಟಾಪ್ (Free Laptop Scheme) ಅನ್ನು ವಿತರಣೆ ಮಾಡುವ ಕುರಿತಂತೆ ನಿರ್ಧಾರವನ್ನು ಕೈ ತೆಗೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಈ ಮೂಲಕ ಯಾವೆಲ್ಲ ವಿದ್ಯಾರ್ಥಿಗಳು ಈ ಉಚಿತ ಲ್ಯಾಪ್ಟಾಪ್ ಯೋಜನೆಯಲ್ಲಿ ಫಲಾನುಭವಿಗಳು ಆಗಬಹುದು ಎನ್ನುವುದನ್ನು ಈ ಮೂಲಕ ನೀವು ತಿಳಿದುಕೊಂಡಿದ್ದೀರಿ ಎಂಬುದಾಗಿ ಭಾವಿಸುತ್ತೇವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಮಾತ್ರ ಅದರಲ್ಲಿ ವಿಶೇಷವಾಗಿ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಇಂತಹ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಲ್ಯಾಪ್ಟಾಪ್ ಸಿಗುತ್ತದೆ.

ಇದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಖುದ್ದಾಗಿ ಮುಖ್ಯಮಂತ್ರಿಯಾಗಿರುವಂತಹ ಸಿದ್ಧರಾಮಯ್ಯ ಅವರ ಅಧಿಕೃತವಾಗಿ ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ಖಾತರಿಪಡಿಸಿದ್ದಾರೆ. ಹೆಣ್ಣು ಮಕ್ಕಳಾಗಲಿ ಅಥವಾ ಗಂಡು ಮಕ್ಕಳಾಗಲಿ ಈ ವರ್ಗದಲ್ಲಿ ಬರುವಂತಹ ಪ್ರತಿಯೊಬ್ಬರಿಗೂ ಕೂಡ ವಿಶ್ವವಿದ್ಯಾನಿಲಯದಲ್ಲಿ(University Students) ಓದುತ್ತಿದ್ದರೆ ಅಂಥವರಿಗೆ ಉಚಿತ ಲ್ಯಾಪ್ಟಾಪ್ ಅನ್ನು ವಿತರಣೆ ಮಾಡುವುದಕ್ಕಾಗಿಯೇ 230 ಕೋಟಿಗಳನ್ನು ಮೀಸಲು ಇರಿಸಲಾಗಿದೆ ಎಂಬುದಾಗಿ ಮುಖ್ಯಮಂತ್ರಿ ಅವರು ಈ ಯೋಜನೆಯ ಬಗ್ಗೆ ಅಧಿಕೃತವಾದ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಹಾಗಿದ್ದರೆ ಇದನ್ನು ಪಡೆದುಕೊಳ್ಳುವ ವಿಧಾನ ಹೇಗೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ

ಸದ್ಯಕ್ಕಂತು ಈ ಯೋಜನೆಯ ಮೇಲೆ ಹೆಚ್ಚಿನ ಮಾಹಿತಿಗಳನ್ನು ಬಿಡುಗಡೆ ಮಾಡಿಲ್ಲ ಹಾಗೂ ಅರ್ಜಿಯನ್ನು ಸಲ್ಲಿಸುವ ವಿಧಾನದ ಕುರಿತಂತೆ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಖಂಡಿತವಾಗಿ ಈ ಯೋಜನೆ ಜಾರಿಗೆ ಬಂದಾಗ ನೇರವಾಗಿ ನಿಮ್ಮ ವಿಶ್ವವಿದ್ಯಾನಿಲಯದಿಂದಲೇ ನೇರವಾಗಿ ಯಾವೆಲ್ಲ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳು ಅವರ ಶಿಕ್ಷಣ ಸಂಸ್ಥೆಯಲ್ಲಿ ಇದ್ದಾರೋ ಎನ್ನುವುದನ್ನು ಖಚಿತಪಡಿಸಿಕೊಂಡು ಸರ್ಕಾರಕ್ಕೆ ಅಧಿಕೃತವಾದ ಮಾಹಿತಿಗಳನ್ನು ನೀಡುವ ಮೂಲಕ ಸರ್ಕಾರ ನೇರವಾಗಿ ವಿಶ್ವ ವಿದ್ಯಾನಿಲಯಗಳಿಗೆ ಉಚಿತ ಲ್ಯಾಪ್ಟಾಪ್ (Free Laptop Scheme) ಅನ್ನು ವಿತರಿಸಿ ಅಲ್ಲಿಂದ ನೀವು ಪಡೆದುಕೊಳ್ಳಬಹುದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲ ವಿಚಾರಗಳು ಕೂಡ ಸರ್ಕಾರದಿಂದ ಮುಂದಿನ ಅಧಿಕೃತ ಮಾಹಿತಿ ಬರುವವರೆಗೂ ಕೂಡ ಕಾಯ್ದು ಖಾತರಿಪಡಿಸಿಕೊಳ್ಳಬೇಕಾದ ವಿಚಾರವಾಗಿದೆ. SC/ST ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಲ್ಯಾಪ್ಟಾಪ್ ಅನ್ನು ನೀಡುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Comments are closed.