Anna Bhagya Scheme: ಅನ್ನದ ಬದಲು ದುಡ್ಡು ಬಂದಿದ್ಯ ಅಂತ ಹೀಗೆ ಕೂತಲ್ಲೇ ಚೆಕ್ ಮಾಡಿ- ಬಂದಿಲ್ಲ ಅಂದರೆ ಎಚ್ಚೆತ್ತುಕೊಳ್ಳಿ.
Anna Bhagya Scheme- ನಮಸ್ಕಾರ ಸ್ನೇಹಿತರೇ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ 5 ಪ್ರಮುಖ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯನ್ನು(Anna Bhagya Yojane) ಕೂಡ ಅಧಿಕೃತವಾಗಿ ರಾಜ್ಯದ ಜನರಿಗೆ ಅವರ ವ್ಯಾಪ್ತಿಯಲ್ಲಿ ಬರುವಂತಹ ನ್ಯಾಯಬೆಲೆ ಅಂಗಡಿಗಳಲ್ಲಿ ಸಕ್ರಿಯ ಆಗುವಂತೆ ಜಾರಿಗೆ ತಂದಿದೆ. 5 ಕೆ.ಜಿ ಉಚಿತ ಅಕ್ಕಿ ಹಾಗೂ ಉಳಿದ ಉಚಿತ ಕೆಜಿಯ ಅಕ್ಕಿಯ ಬದಲಾಗಿ ಹಣವನ್ನು ಅವರ ಖಾತೆಗೆ ಹಾಕುವಂತಹ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಬನ್ನಿ ಇದರ ಬಗ್ಗೆ ಇನ್ನೂ ಕೆಲವೊಂದು ಕುತೂಹಲ ಹಾಗೂ ಗೊಂದಲಗಳಿದ್ದು ಅವುಗಳ ಬಗ್ಗೆ ನಿಮಗೆ ಪರಿಹರಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ. ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.
How to Check Anna Bhagya Scheme Payment DBT Status – Explained in Kannada
ಅದರಲ್ಲಿ ವಿಶೇಷವಾಗಿ ನಾವು ಮಾತನಾಡಲು ಹೊರಟಿರುವುದು ಉಚಿತ ಅಕ್ಕಿಯ (Anna Bhagya Scheme) ಬದಲಿಗೆ ಬರಬೇಕಾಗಿರುವಂತಹ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬಂದಿದ್ಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡೋದು ಹೇಗೆ ಎನ್ನುವುದರ ಬಗ್ಗೆ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ನಿಮಗೆ ತಿಳಿಸಲು ಹೊರಟಿದ್ದೇವೆ. ಮೊದಲಿಗೆ ಗೂಗಲ್ ಕ್ರೋಮ್ ಅನ್ನು ಓಪನ್ ಮಾಡಿ ನಂತರ ಅದರಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು. ಇ ಸೇವೆಗಳು ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಇ ಸ್ಥಿತಿ ಅನ್ನೋ ಆಯ್ಕೆ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಆದ ನಂತರ ನಿಮಗೆ ಡಿ ಬಿ ಟಿ ಸ್ಥಿತಿ ಅಂದರೆ Direct Beneficial Transfer ಅಂದರೆ ಸರ್ಕಾರ ನೀಡುವಂತಹ ಅನುದಾನವನ್ನು ನೇರವಾಗಿ ಪಡೆಯುವಂತಹ ಪದ್ಧತಿಯನ್ನು ಸರ್ಕಾರ ಈ ಮೂಲಕ ಅನುಸರಿಸುತ್ತದೆ.
ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ. ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope
ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ? -> Ration Card Benefits
Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.
Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.
Anna Bhagya Scheme- ಇಲ್ಲಿ ಕ್ಲಿಕ್ ಮಾಡಿದ ನಂತರ ನಿಮಗೆ ಮೂರು ಆಯ್ಕೆಗಳು ಸಿಗುತ್ತವೆ ಹಾಗೂ ಅವುಗಳಲ್ಲಿ ನಿಮ್ಮ ಜಿಲ್ಲೆ ಯಾವ ಆಯ್ಕೆಯಲ್ಲಿ ಸಿಗುತ್ತದೆಯೋ ಅಲ್ಲಿ ಕ್ಲಿಕ್ ಮಾಡಬೇಕಾಗಿರುತ್ತದೆ. ಇಲ್ಲಿ ಕೂಡ ಆಯಾಯ ಜಿಲ್ಲೆಯ ನೇರ ನಗದು ವರ್ಗಾವಣೆಯ ಆಪ್ಷನ್ ಇರುತ್ತದೆ. ಇಲ್ಲಿ ನೀವು ಆಗಸ್ಟ್ ತಿಂಗಳ ಆಯ್ಕೆಯನ್ನು ಹಾಕಿ ಹಣ ಬಂದಿದ್ದೀಯೋ ಇಲ್ಲವೋ ಎನ್ನುವುದನ್ನು ಕೂಡ ಚೆಕ್ ಮಾಡಬಹುದಾಗಿದೆ. ಅಥವಾ ನೀವು ಜುಲೈ ತಿಂಗಳ ಹಣ ಕೂಡ ಬಂದಿದ್ಯೋ ಇಲ್ಲವೋ ಎನ್ನುವಂತಹ ಗೊಂದಲವನ್ನು ಹೊಂದಿದ್ದರೆ ಕೂಡ ಆ ತಿಂಗಳ ಹಣದ ವಿವರವನ್ನು ಕೂಡ ನೀವು ಇಲ್ಲಿ ಹಾಕುವ ಮೂಲಕ ಚೆಕ್ ಮಾಡಬಹುದಾಗಿದೆ.

ಒಂದು ವೇಳೆ ಹಣ ಬಂದಿಲ್ಲ ಎಂದಾದರೆ ನೀವು ಯಾವ ಬ್ಯಾಂಕಿನ ಅಕೌಂಟ್(Anna Bhagya Yojane Bank Account Link) ಅನ್ನು ಲಿಂಕ್ ಮಾಡಿರುತ್ತಿರೋ ಆ ಬ್ಯಾಂಕಿಗೆ ಹೋಗಿ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹಣ ಬರದೆ ಇರುವ ಬಗ್ಗೆ ವಿಚಾರಿಸಬಹುದಾಗಿದೆ. ಇನ್ನು ಈ ವೆಬ್ ಸೈಟ್ ನಲ್ಲಿ ನೀವು ಆಗಸ್ಟ್ ತಿಂಗಳ ಆಯ್ಕೆಯನ್ನು ಹಾಕಿದ ನಂತರ ಅಲ್ಲಿ ರೇಷನ್ ಕಾರ್ಡ್ ನಂಬರ್(Ration Card Nunber) ಅನ್ನು ಹಾಕಬೇಕಾಗುತ್ತದೆ ಹಾಗೂ Captcha ನಂಬರನ್ನು ಕೂಡ ನಮೂದಿಸಿ ನಂತರ Go ಬಟನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
(Anna Bhagya Scheme) ಈ ರೀತಿ ಮಾಡಿದಾಗ ಆಗಸ್ಟ್ ತಿಂಗಳಲ್ಲಿ ಸರ್ಕಾರ 680 ರೂಪಾಯಿಗಳನ್ನು ಬಿಡುಗಡೆ ಮಾಡಿರುವಂತಹ ಸೂಚನೆ ಸಿಗುತ್ತದೆ ಹಾಗೂ ಅದು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹೋಗಿಲ್ಲ ಎನ್ನುವ ಮಾಹಿತಿ ಕೂಡ ಸಿಗುತ್ತದೆ ಮತ್ತು ಅಲ್ಲೇ ಕೆಳಗೆ ನಿಮ್ಮ ಅಕೌಂಟಿಗೆ ಈ ಹಣವನ್ನು ಹಾಕುವಂತಹ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂಬುದನ್ನು ಕೂಡ ವೆಬ್ಸೈಟ್ ತಿಳಿಸುತ್ತದೆ. ಈ ರೀತಿ ಸೂಚನೆಯನ್ನು ಕಂಡಾಗ ಖಂಡಿತವಾಗಿ ನೀವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ ಸರ್ಕಾರ ನಿಮ್ಮ ಖಾತೆಗೆ ಹಣವನ್ನು ಹಾಕಿದೆ ಅದು ನಿಮ್ಮ ಖಾತೆಗೆ ಸೇರುವುದಕ್ಕೆ ಸ್ವಲ್ಪ ಸಮಯವನ್ನು ಪಡೆದುಕೊಳ್ಳಬಹುದು ಒಂದು ವೇಳೆ ಸಮಯ ಮೀರಿಯೂ ಕೂಡ ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದರೆ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಪರಿಶೀಲನೆ ನಡೆಸಬಹುದಾಗಿದೆ. ಪ್ರಮುಖವಾಗಿ ರೇಷನ್ ಕಾರ್ಡ್(Ration Card) ನಲ್ಲಿ ಮಹಿಳಾ ಯಜಮಾನಿಯರನ್ನು ಸೇರಿಸುವುದು ಪ್ರಮುಖವಾಗಿರುತ್ತದೆ ಅವರ ಖಾತೆಗೆ ನೇರವಾಗಿ ಈ ಹಣ ವರ್ಗಾವಣೆ ಆಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
Comments are closed.