Gautam Gambhir: ಸದಾ ಕೋಪದಿಂದ ಕಾಣುವ ಗಂಭೀರ್ ರವರ ಮತ್ತೊಂದು ಮುಖ ಏನು ಗೊತ್ತೇ?? ತಂದೆಯ ಸ್ನೇಹಿತನ ಮಗಳ ಮೇಲೆ ಕಣ್ಣು ಹಾಕಿದ ನಂತರ ಏನಾಯ್ತು ಗೊತ್ತೇ??
Gautam Gambhir: ಕಳೆದ ಒಂದೆರಡು ದಿನಗಳಿಂದ ಕ್ರಿಕೆಟರ್ ಗೌತಮ್ ಗಂಭೀರ್ ಅವರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ವಿರಾಟ್ ಕೊಹ್ಲಿ ಅವರ ಜೊತೆಗೆ ಜಗಳವಾದ ನಂತರ ಗಂಭೀರ್ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ನೆಟ್ಟಿಗರು. ಗೌತಮ್ ಗಂಭೀರ್ ಅವರು ಯಾವಾಗಲೂ ಸೀರಿಯಸ್ ಆಗಿರುವ ವ್ಯಕ್ತಿಯಾಗಿಯೇ ಜನರಿಗೆ ಗೊತ್ತಿರುವುದು. ಆದರೆ ತಂದೆಯ ಫ್ರೆಂಡ್ ಮಗಳನ್ನೇ ಪಟಾಯಿಸಿ ನಂತರ ಏನಾಗಿದೆ ಗೊತ್ತಾ?
ಗೌತಮ್ ಗಂಭೀರ್ ಅವರು ಭಾರತ ತಂಡದ ಮಾಜಿ ಆಟಗಾರರಲ್ಲಿ ಒಬ್ಬರು, ಪ್ರಸ್ತುತ ಎಲ್.ಎಸ್.ಜಿ ತಂಡದ ಮೆಂಟರ್ ಆಗಿ ಹಾಗೆಯೇ ಕಮೆಂಟೆಟರ್ ಆಗಿ ಕೂಡ ಕಾಣಿಸಿಕೊಳ್ಳುತ್ತಾರೆ ಗಂಭೀರ್. ಇವರು 2007 ಮತ್ತು 2011ರ ವಿಶ್ವಕಪ್ ಪಂದ್ಯಗಳಲ್ಲಿ ಅದ್ಭುತವಾದ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಗೆಲುವು ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ವರ್ಷಗಳಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಿತು. ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ..
ಗೌತಮ್ ಗಂಭೀರ್ ಅವರ ತಂದೆ ದೀಪಕ್ ಗಂಭೀರ್ ಜವಳಿ ಉದ್ಯಮಿ, ಇವರ ಸ್ನೇಹಿತರು ರವೀಂದ್ರ ಜೈನ್ ಕೂಡ ದೊಡ್ಡ ಉದ್ಯಮಿ ಆಗಿದ್ದಾರೆ. ರವೀಂದ್ರ ಜೈನ್ ಅವರ ಮಗಳು ನತಾಶ ಜೈನ್, 2008ರಲ್ಲಿ ನತಾಶ ಹಾಗೂ ಗೌತಮ್ ಗಂಭೀರ್ ಅವರ ಪರಿಚಯವಾಯಿತು, ನತಾಶ ಅವರ ಮೇಲೆ ಗೌತಮ್ ಅವರಿಗೆ ಪ್ರೀತಿ ಶುರುವಾಯಿತು. ಇಬ್ಬರು ಸಹ ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿ, 2011ರ ಆಕ್ಟೊಬರ್ 28ರಂದು ಗುರ್ಗಾಂವ್ ನಲ್ಲಿ ಅದ್ಧೂರಿಯಾಗಿ ಮದುವೆಯಾದರು.
ಗೌತಮ್ ಗಂಭೀರ್ ಅವರು ಯಾವಾಗಲೂ ಬಹಳ ಸೀರಿಯಸ್ ಆಗಿರುತ್ತಾರೆ, ಇವರು ಮನೆಯವರ ಜೊತೆಯಲ್ಲೂ ಹಾಗೆ ಇರ್ತಾರ ಎನ್ನುವ ಅನುಮಾನ ಜನರಲ್ಲಿತ್ತು, ಆದರೆ ಗೌತಮ್ ಗಂಭೀರ್ ಅವರು ನಿಜ ಜೀವನದಲ್ಲಿ ಆ ರೀತಿ ಇಲ್ಲ. ಫ್ಯಾಮಿಲಿಯನ್ನು ತುಂಬಾ ಇಷ್ಟಪಡುವ ಗಂಭೀರ್ ಅವರು, ಡೆಲ್ಲಿಯಲ್ಲಿ ಸಾಕಷ್ಟು ಜನರಿಗೆ ಪ್ರತಿದಿನ ಉಚಿತವಾಗಿ ಊಟ ಹಾಕುತ್ತಾರೆ. ಕ್ರಿಕೆಟ್ ಗ್ರೌಂಡ್ ನಲ್ಲಿ ಮಾತ್ರ ಇವರು ತುಂಬಾ ಸೀರಿಯಸ್ ಆಗಿರುತ್ತಾರೆ. ರಾಜಕೀಯದಲ್ಲಿ ಕೂಡ ಇವರು ಸಕ್ರಿಯವಾಗಿದ್ದು, ಬಿಜೆಪಿ ಸಂಸದರಾಗಿದ್ದಾರೆ.
Comments are closed.