Gold Loan: ಅತಿ ಕಡಿಮೆ ಬಡ್ಡಿ ದರದಲ್ಲಿ ಗೋಲ್ಡ್ ಲೋನ್ ನೀಡುವ ಬ್ಯಾಂಕ್ ಗಳು ಯಾವುವು ಗೊತ್ತೇ?? ಬೇರೆ ಲೋನ್ ಗಿಂತ ಗೋಲ್ಡ್ ಲೋನ್ ಬೆಸ್ಟ್.
Gold Loan: ಬಂಗಾರ ಎನ್ನುವುದು ನಮ್ಮ ಪಾಲಿಗೆ ನಮ್ಮ ಗೌರವ ಹೆಚ್ಚಿಸುವ ವಸ್ತುವು ಹೌದು ಹಾಗೆಯೇ ಕಷ್ಟಕಾಲಕ್ಕೆ ಸಹಾಯಕ್ಕೆ ಬರುವ ವಸ್ತುವು ಹೌದು. ಜೀವನದಲ್ಲಿ ಆರ್ಥಿಕವಾಗಿ ತೊಂದರೆ ಆಗಿದ್ದರೆ, ಚಿನ್ನವನ್ನು ಮಾರಿ ಸಮಸ್ಯೆಗಳನ್ನು ತೀರಿಸಿಕೊಳ್ಳಬಹುದು. ಅಥವಾ ಅಡವಿಟ್ಟು ಗೋಲ್ಡ್ ಲೋನ್ ಪಡೆಯಬಹುದು, ಈಗ ಚಿನ್ನದ ಬೆಲೆ ಏರಿಕೆ ಆಗುತ್ತಲೇ ಇದ್ದು, ಲೋನ್ ಗೆ ಒಳ್ಳೆಯ ಬೆಲೆ ಕೊಡುತ್ತಾರೆ. ಒಂದು ಗ್ರಾಮ್ ಚಿನ್ನಕ್ಕೆ 4 ರಿಂದ 5 ಸಾವಿರ ಕೊಡಬಹುದು. ಹಲವು ಬ್ಯಾಂಕ್ ಗಳು ಕಡಿಮೆ ಬಡ್ಡಿದರ ಹಾಕುತ್ತವೆ..
10 ಗ್ರಾಮ್ ಚಿನ್ನದಲ್ಲಿ 50 ಸಾವಿರದಷ್ಟು ಸಾಲ ನಿಮಗೆ ಸಿಗುತ್ತದೆ. ಇದಕ್ಕಾಗಿ ಬೇರೆ ದಾಖಲೆ ಕೊಡುವ ಅಗತ್ಯವಿಲ್ಲ. ಹಲವು ಬ್ಯಾಂಕ್ ಗಳಲ್ಲಿ ವರ್ಷಕ್ಕೆ 12% ಗಿಂತ ಹೆಚ್ಚು ಬಡ್ಡಿ ತೆಗೆದುಕೊಳ್ಳುವುದು ಇಲ್ಲ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರಲ್ಲೆಲ್ಲಾ 8.45%, 8.65% ಮಾತ್ರ ಬಡ್ಡಿ ದರ ಇರುತ್ತದೆ. ಚಿನ್ನದಿಂದ 5 ಲಕ್ಷದವರೆಗು ಸಾಲ ಪಡೆಯಬೇಕು ಎಂದರೆ, ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲ ಸಿಗುತ್ತದೆ? ಯಾವ ಬ್ಯಾಂಕ್ ನಲ್ಲಿ ಬಡ್ಡಿದರ ಹೇಗಿದೆ? ನೀವು 2 ವರ್ಷಕ್ಕೆ ಎಷ್ಟು ಇಎಂಐ ಕಟ್ಟಬೇಕಾಗುತ್ತದೆ? ಎಲ್ಲವನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ..
*ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಸಿಬಿಐ).. ಈ ಬ್ಯಾಂಕ್ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದ್ದು, ಇಲ್ಲಿ ಚಿನ್ನದ ಸಾಲಕ್ಕೆ 8.45% ಬಡ್ಡಿ ಹಾಗೂ ಇಎಂಐ 22,716 ರೂಪಾಯಿ ಇರುತ್ತದೆ.
*ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ).. ಇದು ಕೂಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದ್ದು, ಇಲ್ಲಿ ಬಡ್ಡಿ ದರ 8.65% ಇರುತ್ತದೆ, ಹಾಗೆಯೇ ಇಎಂಐ 22,762 ರೂಪಾಯಿ ಇರುತ್ತದೆ.
*ಯುಕೋ ಬ್ಯಾಂಕ್.. ಇದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದ್ದು, ಇಲ್ಲಿ ಬಡ್ಡಿ ದರ 8.8% ಇರುತ್ತದೆ, ಹಾಗೆಯೇ ಇಎಂಐ 22,797 ರೂಪಾಯಿ ಇರುತ್ತದೆ.
*ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್.. ಈ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನಲ್ಲಿ ಬಡ್ಡಿ ದರ 8.85% ಇರುತ್ತದೆ, ಹಾಗೂ ಇಎಂಐ 22,808 ರೂಪಾಯಿ ಇರುತ್ತದೆ.
*ಇಂಡಿಯನ್ ಬ್ಯಾಂಕ್.. ಇದು ಕೂಡ ಸರ್ಕಾರಿ ಬ್ಯಾಂಕ್, ಇಲ್ಲಿ ಚಿನ್ನದ ಸಾಲಕ್ಕೆ ಬಡ್ಡಿ 8.95% ಆಗಿದೆ ಹಾಗೂ ಇಎಂಐ 22,831 ರಪಪಾಯಿ ಆಗಿರುತ್ತದೆ.
*ಬ್ಯಾಂಕ್ ಆಫ್ ಬರೋಡ (ಬಿಒಬಿ). ಇದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದ್ದು, ಇಲ್ಲಿ ಬಡ್ಡಿ 9.15% ಇರುತ್ತದೆ ಹಾಗೂ ಇಎಂಐ 22,877 ರೂಪಾಯಿ ಆಗಿರುತ್ತದೆ.
*ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿ.ಎನ್ .ಬಿ).. ಈ ಬ್ಯಾಂಕ್ ನಲ್ಲಿ ಚಿನ್ನದ ಸಾಲಕ್ಕೆ ಬಡ್ಡಿ 9.25% ಆಗಿರುತ್ತದೆ ಹಾಗೂ ಇಎಂಐ 22,900 ರೂಪಾಯಿ ಆಗಿರುತ್ತದೆ.
*ಬ್ಯಾಂಕ್ ಆಫ್ ಮಹಾರಾಷ್ಟ್ರ.. ಈ ಬ್ಯಾಂಕ್ ನಲ್ಲಿ ಬಡ್ಡಿ 9.3% ಆಗಿರುತ್ತದೆ, ಹಾಗೆಯೇ ಇಎಂಐ 22,911 ರೂಪಾಯಿ ಆಗಿರುತ್ತದೆ.
*ಫೆಡರಲ್ ಬ್ಯಾಂಕ್.. ಈ ಬ್ಯಾಂಕ್ ನಲ್ಲಿ ಚಿನ್ನದ ಸಾಲಕ್ಕೆ 9.49% ಬಡ್ಡಿ ಇರುತ್ತದೆ ಹಾಗೆಯೇ ಇಎಂಐ 22,955 ರೂಪಾಯಿ ಇರುತ್ತದೆ.
*ಬಜಾಜ್ ಫೈನಾನ್ಸ್ ಸರ್ವಿಸ್..ಈ ಎನ್ ಬಿಎಫ್ ಸಿ ಬ್ಯಾಂಕ್ ನಲ್ಲಿ 9.5% ಬಡ್ಡಿ ಹಾಗೂ ಇಎಂಐ ₹22,957 ರೂಪಾಯಿ ಆಗಿರುತ್ತದೆ.
Comments are closed.