Meena: ನಮ್ಮಮ್ಮ ಎರಡನೇ ಮಗುವಿನ ಗರ್ಭಿಣಿ ಅಂತೇ: ಮಾಧ್ಯಮದ ಮುಂದೆ ದಿಟ್ಟವಾಗಿ ಮೀನಾ ಮಗಳು ಬೇಡಿದ್ದು ಏನು ಗೊತ್ತೇ? ಇಂತವರು ಇರ್ತಾರ? ತೆರೆ ಹಿಂದೆ ಏನಾಗಿದೆ ಗೊತ್ತೆ?
Meena: ದಕ್ಷಿಣ ಭಾರತ ಚಿತ್ರರಂಗದಲ್ಲಿ 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಸಕ್ರಿಯರಾಗಿರುವವರು ನಟಿ ಮೀನಾ. ಇವರು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷಗಳಲ್ಲಿ ನಟಿಸಿ ಇಂದಿಗೂ ಜನರ ಮನಸ್ಸನ್ನು ಗೆದ್ದಿರುವ ನಟಿ. ಮೀನಾ ಅವರು ಮೊದಲು ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ನಂತರ ಹೀರೋಯಿನ್ ಆಗಿ ಜರ್ನಿ ಮುಂದುವರೆಸಿದರು. ವೈಯಕ್ತಿಕ ಜೀವನದಲ್ಲಿ ಕಳೆದ ವರ್ಷ ಮೀನ ಅವರ ಪಾಲಿಗೆ ಬಹಳ ಕಷ್ಟಕರವಾಗಿತ್ತು.. 2009ರಲ್ಲಿ ಮೀನಾ ಅವರು ಪತಿ ವಿದ್ಯಾಸಾಗರ್ (Vidyasagar) ಅವರನ್ನು ಕಳೆದುಕೊಂಡರು. ಅದಾದ ಬಳಿಕ ಬಹಳ ನೋವಿನಲ್ಲಿದ್ದು..

ಈಗ ಅವುಗಳಿಂದ ಹೊರಬರುವ ಪ್ರಯತ್ನದಲ್ಲಿದ್ದಾರೆ. ಮೀನಾ ಅವರಿಗೆ ನೈನಿಕಾ ಹೆಸರಿನ ಮುದ್ದು ಮಗಳು ಕೂಡ ಇದ್ದಾರೆ. ಇವರು ಕೂಡ ಈಗಾಗಲೇ ಬಾಲನಟಿಯಾಗಿ ಕೆರಿಯರ್ ಶುರು ಮಾಡಿದ್ದಾರೆ. ಮೀನಾ ಅವರು ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿ 40 ವರ್ಷ ಪೂರೈಸಿದ್ದಕ್ಕೆ, ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಲಾಯಿತು, ಆ ಕಾರ್ಯಕ್ರಮದಲ್ಲಿ ಮೀನಾ ಅವರ ಮಗಳು ಮಾತನಾಡಿರುವ ಮಾತುಗಳು ಈಗ ಬಹಳ ವೈರಲ್ ಆಗಿದೆ. ಪತಿ ಅಗಲಿದ ನಂತರ ಮೀನಾ ಅವರ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳು ಕೇಳಿ ಬಂದಿದ್ದವು. ಅವುಗಳ ಬಗ್ಗೆ ಮಗಳು ಈಗ ಮಾತನಾಡಿದ್ದಾರೆ.
“ಈ ಸ್ಥಾನಕ್ಕೆ ಬರೋದಕ್ಕೆ ನೀನು ಬಹಳ ಕಷ್ಟಪಡಿತ್ತಿದ್ದೀಯಾ ಅಮ್ಮ. ಒಬ್ಬ ನಟಿಯಾಗಿ ತುಂಬಾ ಕಷ್ಟಪಡುತ್ತಲೇ ಇರುತ್ತೀಯಾ ಆದರೆ ಒಂದು ದಿನ ಕೂಡ ಅದನ್ನ ಮನೆಯಲ್ಲಿ ತೋರಿಸಿಕೊಂಡಿಲ್ಲ. ಯಾವಾಗಲು ನನ್ನನ್ನ ಬಹಳ ಹುಷಾರಾಗಿ ನೋಡಿಕೊಂಡಿದ್ದೀಯಾ. ನಾನು ಚಿಕ್ಕೋಲಾಗಿದ್ದಾಗಿನಿಂದ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದೀಯಾ, ಇನ್ನುಮೇಲೆ ನಾನು ನಿನ್ನನ್ನ ಚೆನ್ನಾಗಿ ನೋಡಿಕೊಳ್ತಿನಿ. ಅಪ್ಪ ಹೋದಮೇಲೆ ಜೀವನ ಕತ್ತಲಾಗಿದೆ ಅನ್ನಿಸಿತ್ತು, ನೀನು ಮಾನಸಿಕವಾಗಿ ಕುಗ್ಗಿದ್ದೇ, ಮೀಡಿಯಾದಲ್ಲಿ ನನ್ನ ತಾಯಿ ಬಗ್ಗೆ ಸುಳ್ಳು ಸುದ್ದಿ ಪ್ರಸಾರವಾಗಿತ್ತು.
ನನ್ನ ಅಮ್ಮ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿಯನ್ನು ನಾನು ಮರಯೋದಕ್ಕೆ ಆಗಲ್ಲ. ಅದೆಲ್ಲಾ ನನಗೆ ತಮಾಷೆ ಅನ್ನಿಸಿತ್ತು. ನನಗೋಸ್ಕರ ಆದರೂ ಇಂಥ ಸುಳ್ಳು ಸುದ್ದಿಗಳನ್ನು ಹರಡೋದು ಬಿಡಿ. ನಮ್ಮಮ್ಮ ನಟಿ ಆದರೆ ಅವರು ಕೂಡ ಒಬ್ಬ ಮನುಷ್ಯಳೇ..ಅವರಲ್ಲೂ ನೋವು ಭಾವನೆ ಇದೆ, ಅವರಿಗೆ ಈ ಥರ ಮಾಡಬೇಡಿ..ನಮಗೂ ಕಷ್ಟ ಆಗುತ್ತೆ ಅಲ್ವಾ.. ಇಂಥ ಸುಳ್ಳು ಸುದ್ದಿಗಳನ್ನ ಪ್ರಚಾರ ಮಾಡಬೇಡಿ..” ಎಂದು ಪುಟ್ಟ ನೈನಿಕಾ ಹೇಳಿದ್ದು, ಮಗುವಿನ ಮಾತು ಕೇಳಿ ನಟ ರಜನಿಕಾಂತ್ ಅವರು ಕೂಡ ಭಾವುಕರಾದರು.
Comments are closed.