ನೀವು ಚಿನ್ನದ ಪ್ರಿಯರೆ?? ಖರೀದಿ ಮಾಡಿದ್ದೀರಾ?? ಚಿನ್ನಕೆ ಸಂಬಂದಿಸಿದ ಐತಿಹಾಸಿಕ ನಿಯಮ ಆಗಸ್ಟ್ 31 ರಂದು ಬದಲಾಗಲಿದೆ, ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಎಲ್ಲರೂ ಆಭರಣ ಪ್ರಿಯರೆ. ಇತರ ದೇಶಗಳಿಗೆ ಹೋಲಿಸಿದ್ರೆ ನಮ್ಮ ದೇಶದಲ್ಲಿ ನಿತ್ಯವೂ ಚಿನ್ನದ ಆಭರಣಗಳನ್ನು ತೊಡುತ್ತೇವೆ. ಬಡವರು ಶ್ರೀಮಂತರು ಎನ್ನುವ ಬೇಧ ಚಿನ್ನದ ವಿಷಯದಲ್ಲಿ ಇಲ್ಲ. ಎಲ್ಲರೂ ಮದುವೆ ಮತ್ತಿತರ ಸಂದರ್ಭಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಚಿನ್ನವನ್ನು ಕೊಳ್ಳುತ್ತಾರೆ.

ಚಿನ್ನ ಖರೀದಿ ಅಕ್ಷಯ ತೃತೀಯ ದಂತಹ ಸಂದರ್ಭಗಳಲ್ಲಿ ಹೆಚ್ಚು. ಜನರು ತಮ್ಮ ಕೈಲಾದ ಮಟ್ಟಿಗೆ ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳುತ್ತಾರೆ. ಚಿನ್ನ ಅಂದ್ರೆ ಆಪತ್ಭಾಂಧವ ಇದ್ದ ಹಾಗೆ. ಕೆಲವರು ಚಿನ್ನವನ್ನು ಇಟ್ಟುಕೊಳ್ಳುವುದೇ ತಮ್ಮ ಕಷ್ಟಕಾಲಕ್ಕೆ ನೆರವಾಗಲು ಎಂದು.

ಚಿನ್ನವನ್ನೇನೋ ಖರಿದಿಸುತ್ತೇವೆ. ಆದರೆ ಈ ಚಿನ್ನ ಎಷ್ಟು ಗ್ಯಾರಂಟಿ? ನಾವು ಕೊಳ್ಳುವಾಗ ಇರುವ ಬೆಲೆ ನಾವು ಅದೇ ಚಿನ್ನ ಮಾರಾಟ ಮಾಡುವಾಗ ಇರುವುದಿಲ್ಲ. ಯಾಕೆಂದರೆ ಚಿನ್ನದ ಖರೀದಿಯಲ್ಲಿ ಮೋಸ ಮಾಡಿರುತ್ತಾರೆ ಎಂದರ್ಥ. ಇದರಿಂದ ಸಾಕಷ್ಟು ಮಂದಿ ಸಂಕಟ ಅನುಭವಿಸಿದ್ದಾರೆ. ಆದರೆ ಇನ್ನು ಮುಂದೆ ಈ ಸಮಸ್ಯೆ ಇಲ್ಲ. ಇದಕ್ಕೆ ಸರ್ಕಾರದ ಹೊಸ ನಿಯಮಾವಳಿಗಳು ಚಿನ್ನದಲ್ಲಿ ನಡೆಯುವ ಮೋಸಕ್ಕೆ ಬರೆ ಹಾಕಿದೆ.

ಹೌದು ಸ್ನೇಹಿತರೆ, ಸರ್ಕಾರದ ನಿಯಮದ ಪ್ರಕಾರ ಇನ್ನು ಯಾವುದೇ ಚಿನ್ನ ಮಾರಾಟಗಾರ ಹಾಲ್ಮಾರ್ಕ್ ಇಲ್ಲದ ಚಿನ್ನವನ್ನು ಮಾರಾಟ ಮಾಡುವಂತಿಲ್ಲ. ನಾವು ಕೊಳ್ಳುವಾಗ ಇರುವ ಬೆಲೆಯೇ ನಾವು ಮಾರಾಟ ಮಾಡುವಾಗಲೂ ಅಂದಿನ ದರದ ಆಧಾರದ ಮೇಲೆ ಮಾರಾಟ ಮಾಡುವಂತಿರಬೇಕು. ಇದು ಮುಖ್ಯವಾಗಿ ಚಿನ್ನದಲ್ಲಿ ಆಗುವ ಮೋಸ ವನ್ನು ತಡೆಯಲು ರೂಪಿಸಲಾದ ನಿಯಮ. ಹಾಗಾಗಿ ಇನ್ನುಮುಂದೆ ಉತ್ತಮ ಗುಣಮಟ್ಟದ ಚಿನ್ನ ಎಂಬುದನ್ನಜ್ ಅದರ ಮೇಲಿರುವ ಹಾಲ್ಮಾರ್ಕ್ ನ್ನು ನೋಡಿ ಖರೀದಿಸಿ.

Comments are closed.