Gruhalakshmi Scheme: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುತ್ತಿರುವವರಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ಇವುಗಳ ಬಗ್ಗೆ ಎಚ್ಚರವಿರಲಿ- ದುಡ್ಡು ಬರಲ್ಲ ದುಡ್ಡು ಹೋಗುತ್ತೆ ಹುಷಾರ್

gruhalaksmi-scheme-scam-apps-updates

Gruhalakshmi Scheme: ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದ ಹಾಗೆ, ತಾವು ಪ್ರಣಾಳಿಕೆಯಲ್ಲಿ ಹೇಳಿದ್ದ 5 ಭರವಸೆಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದಾಗಿ ಹೇಳಿತ್ತು, ಈ ಭರವಸೆಯ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಆಗಿದೆ. ಈ ಯೋಜನೆಯ ಅನುಸಾರ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ ಸರ್ಕಾರದ ಕಡೆಯಿಂದ ಕೊಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಹಾಕುವವರು ಕೆಲವು ವಿಚಾರಗಳನ್ನು ತಪ್ಪದೇ ಗಮನದಲ್ಲಿಡಿ..ಇಲ್ಲವಾದರೆ ಟೋಪಿ ಹಾಕಿಸಿಕೊಳ್ಳುತ್ತೀರಿ.

gruhalaksmi scheme scam apps updates | Gruhalakshmi Scheme: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುತ್ತಿರುವವರಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ಇವುಗಳ ಬಗ್ಗೆ ಎಚ್ಚರವಿರಲಿ- ದುಡ್ಡು ಬರಲ್ಲ ದುಡ್ಡು ಹೋಗುತ್ತೆ ಹುಷಾರ್
Gruhalakshmi Scheme: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುತ್ತಿರುವವರಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ಇವುಗಳ ಬಗ್ಗೆ ಎಚ್ಚರವಿರಲಿ- ದುಡ್ಡು ಬರಲ್ಲ ದುಡ್ಡು ಹೋಗುತ್ತೆ ಹುಷಾರ್ 2

ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಜೂನ್ 27ರಿಂದಲೇ ಅರ್ಜಿ ಸಲ್ಲಿಕೆ ಶುರುವಾಗುತ್ತದೆ ಎಂದು ಹೇಳಲಾಗಿತ್ತು, ಆದರೆ ಕಾರಣಾಂತರಗಳಿಂದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಅರ್ಜಿ ಸಲ್ಲಿಕೆ ಇನ್ನು ಶುರುವಾಗಿಲ್ಲ. ಸರ್ಕಾರ ಇದನ್ನು ಮುಂದಕ್ಕೆ ಹಾಕುತ್ತಲೇ ಬರುತ್ತಿದೆ. ಈ ಯೋಜನೆಯ ದುರ್ಬಳಕೆ ಆಗಬಾರದು ಎನ್ನುವ ಕಾರಣಕ್ಕೆ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಅರ್ಜಿ ಸಲ್ಲಿಸಲು ಅದರ ಸದುಪಯೋಗ ಪಡೆಯಲು ಆಪ್ ರೆಡಿ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಇದನ್ನು ಓದಿ..Financial Mistakes: ಎಷ್ಟೇ ದುಡಿದರು ಹಣ ಕೈಯಲ್ಲಿ ಉಳಿಯುತ್ತಿಲ್ಲವೇ? ಭಾರತೀಯರು ಮಾಡುತ್ತಿರುವ ತಪ್ಪುಗಳೇನು ಗೊತ್ತೇ? ಇವುಗಳನ್ನು ತಿದ್ದುಕೊಳ್ಳಿ.

ಈ ಆಪ್ ಈಗ ರೆಡಿ ಆಗಿದ್ದು, ಸಿಎಂ ಸಿದ್ದರಾಮಯ್ಯ (Siddaramaiah) ಅವರು ಆಪ್ ಲಾಂಚ್ ಮಾಡಲಿದ್ದಾರೆ. ಆದರೆ ಆಪ್ ಲಾಂಚ್ ಆಗುವುದು ಯಾವಾಗ ಎನ್ನುವ ಬಗ್ಗೆ ಇನ್ನೂ ಪೂರ್ತಿಯಾದ ಮಾಹಿತಿ ಸಿಕ್ಕಿಲ್ಲ. ಸರ್ಕಾರದ ಅಧಿಕೃತ ಗೃಹಲಕ್ಷ್ಮಿ ಆಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಾಗಲಿ ಇನ್ನೆಲ್ಲೇ ಆಗಲಿ ಲಾಂಚ್ ಆಗಿಲ್ಲ. ಆದರೆ ಈಗಾಗಲೇ ಪ್ಲೇ ಸ್ಟೋರ್ ನಲ್ಲಿ ಗೃಹಲಕ್ಷ್ಮಿ ಹೆಸರಿನಲ್ಲಿ ಕೆಲವು ನಕಲಿ ಆಪ್ ಗಳು ಸದ್ದು ಮಾಡುತ್ತಿದೆ.

ಈ ಆಪ್ ಗಳನ್ನು ಡೌನ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಡಿ, ಒಂದು ವೇಳೆ ನೀವು ಆಪ್ ಬಳಸಿದರೆ, ಅದು ನಿಮ್ಮ ವೈಯಕ್ತಿಕ ಡೇಟಾ ಕದಿಯುತ್ತದೆ, ಇದು ಮಾಲ್ವೇರ್ ಆಪ್ ಆಗಿದೆ. ನಿಮ್ಮ ಬ್ಯಾಂಕ್ ಡೀಟೇಲ್ಸ್, ಆಧಾರ್ ಕಾರ್ಡ್ ಇದೆಲ್ಲವನ್ನು ಕದಿಯಲಿದ್ದು, ಒಂದು ವೇಳೆ ನೀವು ಬ್ಯಾಂಕ್ ಖಾತೆಯ ಡೀಟೇಲ್ಸ್ ನೀಡಿದರೆ ನಿಮ್ಮ ಅಕೌಂಟ್ ನಲ್ಲಿರುವ ಎಲ್ಲಾ ಹಣ ಖಾಲಿಯಾಗೋದು ಗ್ಯಾರಂಟಿ. ಹಾಗಾಗಿ ಈ ಆಪ್ ಗಳನ್ನು ಡೌನ್ಲೋಡ್ ಮಾಡದೆ ಹುಷಾರಾಗಿರಿ. ಇದನ್ನು ಓದಿ..Anna Bhagya Money: ಅಕ್ಕಿ ನಂಬಿಕೊಂಡಿದ್ದವರಿಗೆ ದುಡ್ಡು- ಆದರೆ ಅವರ ಎಲ್ಲವೂ ಕಟ್ ಆಗಿ, ಜನರ ಕೈ ಸೇರುವುದು ಎಷ್ಟು ಗೊತ್ತೇ? ಇಷ್ಟೇನಾ?

ಈ ಆಪ್ ಮಾತ್ರವಲ್ಲದೆ ಸೇವಾಸಿಂಧು ಪೋರ್ಟಲ್ ನ ಈ ಲಿಂಕ್ https://sevasindhugs.karnataka.gov.in/ ಮೂಲಕ ಕೂಡ ನೀವು ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಅರ್ಜಿ ಸಲ್ಲಿಸಬಹುದು. ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ, ಮನೆಯ ಹಿರಿಯ ಮಹಿಳೆ ಅಥವಾ ಮನೆಯ ಯಜಮಾನಿ ಆಗಿರುವವರ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್, ಮೊಬೈಲ್ ನಂಬರ್, ಕ್ಯಾಸ್ಟ್ ಸರ್ಟಿಫಿಕೇಟ್, ಫೋಟೋ, SSLC ಮಾರ್ಕ್ಸ್ ಕಾರ್ಡ್. ಆದರೆ ಈ ದಾಖಲೆಗಳ ಪೈಕಿ ಸರ್ಕಾರ ಬದಲಾವಣೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Phone Remote: ಮೊಬೈಲ್ ಅನ್ನು ಟಿವಿ ರಿಮೋಟ್ ಆಗಿ ಪರಿವರ್ತನೆ ಮಾಡುವುದು ಹೇಗೆ ಗೊತ್ತೇ? ಇನ್ನು ರಿಮೋಟ್ ಬೇಕಾಗಿಲ್ಲ.

Comments are closed.