HD Kumaraswamy: ನಿವೃತ್ತಿ ಪಡೆಯುತ್ತೇನೆ ಎಂದು ಪದೇ ಪದೇ ಹೇಳಿರುವ HDK, ಯಾಕೆ ರಾಜಕಾರಣದಲ್ಲಿ ಇದ್ದಾರಂತೆ ಗೊತ್ತೇ? ಕಾರಣ ಕೇಳಿದರೆ ಕಣ್ಣೀರು ಹಾಕ್ತಿರಾ.

HD Kumaraswamy: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಈ ವರ್ಷ ವಿಧಾನಸಭೆಯಲ್ಲಿ ಗೆದ್ದು, ರಾಜ್ಯದಲ್ಲಿ ಅಧಿಕಾರ ಪಡೆಯಬೇಕು ಎಂದು ಕನಸು ಕಂಡಿದ್ದರು. ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆ ಮಾಡಿಕೊಂಡು, ಅದೆಲ್ಲವನ್ನು ಕಾರ್ಯರೂಪಕ್ಕೆ ತರುವ ಭರವಸೆ ನೀಡಿದ್ದರು. ಆದರೆ ಈಗ ರಾಜಕೀಯವೆ ನನಗೆ ಸಾಕಾಗಿದೆ ಎಂದು ಹೇಳುವ ಮೂಲಕ, ಶಾಕ್ ನೀಡಿದ್ದಾರೆ..

hd kumawaswamy comments about political career | HD Kumaraswamy: ನಿವೃತ್ತಿ ಪಡೆಯುತ್ತೇನೆ ಎಂದು ಪದೇ ಪದೇ ಹೇಳಿರುವ HDK, ಯಾಕೆ ರಾಜಕಾರಣದಲ್ಲಿ ಇದ್ದಾರಂತೆ ಗೊತ್ತೇ? ಕಾರಣ ಕೇಳಿದರೆ ಕಣ್ಣೀರು ಹಾಕ್ತಿರಾ.
HD Kumaraswamy: ನಿವೃತ್ತಿ ಪಡೆಯುತ್ತೇನೆ ಎಂದು ಪದೇ ಪದೇ ಹೇಳಿರುವ HDK, ಯಾಕೆ ರಾಜಕಾರಣದಲ್ಲಿ ಇದ್ದಾರಂತೆ ಗೊತ್ತೇ? ಕಾರಣ ಕೇಳಿದರೆ ಕಣ್ಣೀರು ಹಾಕ್ತಿರಾ. 2

ಹೆಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಆರೋಪ ಮಾಡಿದ್ದರು, 45% ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು, ಅದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ಕೊಟ್ಟು, ಹಾಗಿದ್ದರೆ ಲೋಕಾಯುಕ್ತ ಇಲಾಖೆಗೆ ದೂರು ಕೊಡಲಿ ಎಂದು ಕುಮಾರಸ್ವಾಮಿ ಅವರಿಗೆ ಚಾಲೆಂಜ್ ಹಾಕಿದ್ದರು. ಇದಕ್ಕೆ ಕುಮಾರಸ್ವಾಮಿ ಅವರು ಕೂಡ ಉತ್ತರ ನೀಡಿದ್ದಾರೆ. ಇದನ್ನು ಓದಿ..Business Idea: ನಿಮ್ಮ ತಾಯಿಗೆ ಅಡುಗೆ ಚೆನ್ನಾಗಿ ಬಂದರೆ, ಮನೆಯಲ್ಲಿಯೇ ಈ ಉದ್ಯಮ ಆರಂಭಿಸಿ- ಸಾಕು. ಲಕ್ಷಗಳಲ್ಲಿ ಆದಾಯ. ಏನು ಮಾಡಬೇಕು ಗೊತ್ತೇ??

“ಈ ಮೊದಲು ಅವರು ಲೋಕಾಯುಕ್ತಗೆ ದೂರ್ಜ್ ಕೊಟ್ಟಿದ್ರಾ, ಈಗ ನನಗೆ ಸಲಹೆ ಕೊಡೋಕೆ ಬಂದಿದ್ದಾರೆ..ಈಗ ಅವರದ್ದೇ ಸರ್ಕಾರ, 40% ವಿಷಯವನ್ನ ಅವರು ಹೊರಗೆ ತೆರೆಯಲಿ, ಅವರೇನು ಆಗ ಸಾಕ್ಷಿ ಇಟ್ಟುಕೊಂಡು ಮಾತಾಡಿದ್ರಾ?..” ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು. ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ಅಗಬೇಕಿದ್ದ ಬಗ್ಗೆಯೂ ಪ್ರಶ್ನೆ ಕೇಳಲಾಯಿತು.. ಅದಕ್ಕೆ ಉತ್ತರವನ್ನ ಸಮಯ ಬಂದಾಗ ಕೊಡುತ್ತೇನೆ ಎಂದು ಹೇಳಿದರು..

ಇನ್ನು ಮಾಧ್ಯಮದವರು ಮತ್ತೊಂದು ಪ್ರಶ್ನೆ ಕೇಳಿದರು, ರಾಷ್ಟ್ರ ರಾಜಕಾರಣಕ್ಕೆ ಹೋಗಲು ಆಸಕ್ತಿ ಇದೆಯಾ ಎಂದು ಕುಮಾರಸ್ವಾಮಿ ಅವರನ್ನು ಕೇಳಲಾಯಿತು, ಅದಕ್ಕೆ ಉತ್ತರ ಕೊಟ್ಟ ಅವರು, “ನನಗೆ ರಾಜಕೀಯ ಸಾಕಾಗಿದೆ..ಕಾರ್ಯಕರ್ತರಿಗೋಸ್ಕರ್ ನಾನು ಇಲ್ಲಿದ್ದೇನೆ, ಈಗಿನ ರಾಜಕೀಯ ವ್ಯವಸ್ಥೆ ನನಗೆ ಸಾಕಾಗಿದೆ..ಎಂಪಿ ಅವರು ಕೂಡ ರಾಜಕೀಯ ಸಾಕಾಗಿದೆ ಎಂದು ಹೇಳಿದರು. ಆ ಸ್ಥಾನದಲ್ಲಿ ಇರುವವರೇ ಹಾಗೆ ಹೇಳಿದಾಗ.. ನನ್ನಂಥ ವ್ಯಕ್ತಿಯ ಸ್ಥತಿ ಏನು..” ಎಂದು ಹೇಳಿದ್ದಾರೆ ಮಾಜಿ ಮುಖ್ಯಮಂತ್ರಿಗಳು. ಇದನ್ನು ಓದಿ..Kannada News: ಬಿಟ್ಟಿ ಯೋಜನೆಗಳನ್ನು ಸರಿ ತೂಗಿಸಲು ಮತ್ತೊಮ್ಮೆ ಕಾರ್ಮಿಕರಿಗೆ ಶಾಕ್ ಕೊಟ್ಟ ಸರ್ಕಾರ- ಇದು ನಿಜಕ್ಕೂ ಒಳ್ಳೆಯದ??

Comments are closed.