ಕೊನೆಗೂ ಜೈಲಿನಿಂದ ಬಿಡುಗಡೆಯಾದ ಲಾಯರ್ ಜಗದೀಶ್, ಹೊರಬಂದ ತಕ್ಷಣ ಹೇಳಿದ ಡೈಲಾಗ್ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೆಚ್ಚಾಗಿ ಸದ್ದು ಮಾಡುತ್ತಿರುವ ಪ್ರಕರಣ ಎಂದರೆ ಅದು ಲಾಯರ್ ಜಗದೀಶ ರವರ ಬಂಧನದ ಪ್ರಕರಣ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಲಾಯರ್ ಜಗದೀಶ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವಿಚಾರಗಳಿಗಾಗಿ ಸುದ್ದಿಯಾಗುತ್ತಲೇ ಇರುತ್ತಿದ್ದರು. ಆಗಾಗ ನಮಗೆ ಸರಿ ಅನಿಸಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳುವ ಮೂಲಕ ಅದಕ್ಕೆ ಸಂಬಂಧಪಟ್ಟವರಿಗೆ ತರಾಟೆಗೆ ತೆಗೆದುಕೊಳ್ಳುವ ಮೂಲಕ ಲಾಯರ್ ಜಗದೀಶ್ ಅವರು ಸುದ್ದಿಗೆ ಬಂದಿದ್ದರು.

ಇಷ್ಟು ಮಾತ್ರವಲ್ಲದೆ ಐಪಿಎಸ್ ಅಧಿಕಾರಿ ವಿರುದ್ಧ ಆರೋಪ ಹಾಗೂ ಕೋರ್ಟ್ ಆವರಣದಲ್ಲಿ ಜಗದೀಶ್ ರವರು ಹ’ಲ್ಲೆ ಮಾಡಿರುವ ಕಾರಣದಿಂದಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜಗದೀಶ್ ರವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಎಂಬುದು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಯಾಕೆಂದರೆ ಅವರ ಮೇಲೆ ಐಪಿಸಿ 307 ಸೆಕ್ಷನ್ ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿತ್ತು. ಅಂದರೆ ಅವರ ಮೇಲೆ ಮೂರು ಕೇಸುಗಳನ್ನು ಈ ಕಾನೂನಿನ ಅನ್ವಯ ಹಾಕಲಾಗಿತ್ತು. ಹೀಗಾಗಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ತಡವಾಗುತ್ತಿತ್ತು. ಯಾಕೆಂದರೆ ಕೇಸ್ ಸಾಕಷ್ಟು ಸ್ಟ್ರಾಂಗ್ ಆಗಿತ್ತು.

ಆದರೆ ಹರೀಶ್ ಪ್ರಭು ಹಾಗೂ ಸುನಿಲ್ ಕುಮಾರ್ ಎಂಬವರು ಲಾಯರ್ ಜಗದೀಶ್ ರವರ ಪರವಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಕೊನೆಗೂ ಇಂದು ಬೆಳ್ಳಂಬೆಳಗ್ಗೆ ಲಾಯರ್ ಜಗದೀಶ್ ರವರು ಜಾಮೀನಿನ ಅನ್ವಯ ಹೊರಗೆ ಬಂದಿದ್ದಾರೆ. ಹೊರಗೆ ಬಂದ ನಂತರ ಮಾಧ್ಯಮ ಪ್ರತಿನಿಧಿಗಳು ಅವರಲ್ಲಿ ಹಲವಾರು ಪ್ರಶ್ನೆಗಳನ್ನು ಹಾಕಿದ್ದಾರೆ. ಈ ಸಂದರ್ಭದಲ್ಲಿ ಲಾಯರ್ ಜಗದೀಶ್ ರವರು ನಾನು ಭ್ರಷ್ಟ ಅಧಿಕಾರಿಗಳ ವಿರುದ್ಧ ಹೋರಾಡುತ್ತ ಬಂದಿದ್ದೇನೆ ಹೋರಾಟವನ್ನು ಮುಂದೆ ಕೂಡ ಮುಂದುವರಿಸುತ್ತೇನೆ ಇದಕ್ಕೆ ಕೊನೆ ಯಾವಾಗ ಎಂದು ನನಗೆ ಗೊತ್ತಿಲ್ಲ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ನನಗೆ ಅವಮಾನ ಮಾಡಿರುವ ನನ್ನನ್ನು ಕಷ್ಟಕ್ಕೆ ಸಿಲುಕಿಸಿರುವ ಅಧಿಕಾರಿಗಳು ನನಗೆ ಸಲ್ಯೂಟ್ ಮಾಡುವಂತೆ ಮಾಡುತ್ತೇನೆ ಎಂಬುದಾಗಿ ಕೂಡ ಚಾಲೆಂಜ್ ಹಾಕಿದ್ದಾರೆ.

Comments are closed.