Job News: ನಿಮಗೆ ಡ್ರೈವಿಂಗ್ ಬರುತ್ತಾ?? ಈ ಕೂಡಲೇ ಕೇಂದ್ರ ಸರ್ಕಾರೀ ಉದ್ಯೋಗಕ್ಕೆ ಅರ್ಜಿ ಹಾಕಿ. ತಿಂಗಳಿಗೆ 63 ಸಾವಿರ ಸಂಬಳ. ಹೇಗೆ ಅರ್ಜಿ ಹಾಕಬೇಕು ಗೊತ್ತೆ?
Job News: ಕೇಂದ್ರ ಸರ್ಕಾರದ ಕೆಲಸ ಬೇಕು ಎಂದು ಬಯಸಿರುವವರಿಗೆ ಸರ್ವೇ ಆಫ್ ಇಂಡಿಯಾ ಒಂದು ಉತ್ತಮ ಅವಕಾಶ ನೀಡಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಿದ್ದು, 21 ಮೋಟಾರ್ ಡ್ರೈವರ್ ಹಾಗೂ ಮೆಕ್ಯಾನಿಕ್ ಕೆಲಸ ಖಾಲಿ ಇದೆ. ಆಸಕ್ತಿ ಇರುವವರು ಕೆಲಸಕ್ಕೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರಕಾರದ ಕೆಲಸವಿದು, ಎಲ್ಲರು ಉಪಯೋಗಿಸಿಕೊಳ್ಳಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2023ರ ಮೇ 31.. ಕೆಲಸಕ್ಕೆ ಅಪ್ಲೈ ಮಾಡಲು ಬೇಕಿರುವ ಎಲ್ಲಾ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿಸುತ್ತೇವೆ ನೋಡಿ..

ವಿದ್ಯಾರ್ಹತೆ ನೋಡುವುದಾದರೆ, ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 10ನೇ ತರಗತಿ ಪಾಸ್ ಆಗಿದ್ದರೆ ಸಾಕು, ಹಾಗೆಯೇ ಈ ಕೆಲಸಕ್ಕೆ ಅಪ್ಲೈ ಮಾಡುವುದಕ್ಕೆ ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ ಇರಬೇಕು. ಈ ಕೆಲಸಕ್ಕೆ ವಯೋಮಿತಿ ನೋಡುವುದಾದರೆ, ಸರ್ವೇ ಆಫ್ ಇಂಡಿಯಾ ಇಂದ ಬಂದಿರುವ ಮಾಹಿತಿ ಪ್ರಕಾರ, 2023ರ ಮೇ 31ಕ್ಕೆ 18 ವರ್ಷ ತುಂಬಿರಬೇಕು ಹಾಗೆಯೇ 27 ವರ್ಷ ಮೀರಿರಬಾರದು. ಇಲ್ಲಿ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇದೆ.
ಆಯ್ಕೆ ನಡೆಯುವುದು, ಸ್ಕಿಲ್ ಟೆಸ್ಟ್, ಪ್ರಾಕ್ಟಿಕಲ್ ಟೆಸ್ಟ್, ಡ್ರೈವಿಂಗ್ ಟೆಸ್ಟ್ ಹಾಗೂ ಇಂಟರ್ವ್ಯೂ ಮೂಲಕ. ಈ ಕೆಲಸಕ್ಕೆ ಸಂಬಳ ₹19,900 ಇಂದ ₹63,200ವರೆಗು ಇರುತ್ತದೆ. ಈ ಕೆಲಸ ನಿಮಗೆ ಭಾರತದ ಯಾವ ಬ್ರಾಂಚ್ ನಲ್ಲಿ ಬೇಕಾದರೂ ಸಿಗಬಹುದು..ಅಭ್ಯರ್ಥಿಗಳು ಅರ್ಜಿಯನ್ನು ಡೌನ್ಲೋಡ್ ಮಾಡಿ ಅದನ್ನು ಫಿಲ್ ಮಾಡಿ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ..
ಕರ್ನಾಟಕ ಜಿಯೋ-ಸ್ಪೇಷಿಯಲ್ ಡೇಟಾ ಸೆಂಟರ್
ಸರ್ವೆ ಆಫ್ ಇಂಡಿಯಾ
ಅಂಚೆ ಪೆಟ್ಟಿಗೆ ಸಂಖ್ಯೆ-3403
ಸರ್ಜಾಪುರ ರಸ್ತೆ
ಕೋರಮಂಗಲ-II ಬ್ಲಾಕ್
ಬೆಂಗಳೂರು-560034
ಈ ಅಡ್ರೆಸ್ ಗೆ ಅರ್ಜಿ ಸಲ್ಲಿಸಿ.. ಅರ್ಜಿ ಸಲ್ಲಿಸಲು ಪ್ರಾರಂಭ ಆಗಿರುವ ದಿನಾಂಕ, 24/4/2023 ಹಾಗೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/5/2023.
Comments are closed.